More

    ಒತ್ತುವರಿಗೆ ತೆರವುಗೊಳಿಸಿ 2500 ಕೆರೆಗಳಿಗೆ ಮರುಜೀವ: ಸಚಿವ ಅಶ್ವತ್ಥನಾರಾಯಣ ಹೇಳಿಕೆ

    ಮಾಗಡಿ : ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಕೆರೆಗಳು ಸೇರಿ ರಾಜ್ಯದ 2500 ಕೆರೆಗಳ ಒತ್ತುವರಿ ತೆರವುಗೊಳಿಸಿ ಮರು ಜೀವ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

    ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ಶ್ರೀ ವಿಶ್ವೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಕೆಂಪಾಪುರ ಗ್ರಾಮದಲ್ಲಿರುವ ಕೆಂಪೇಗೌಡರ ಸಮಾಧಿಯನ್ನು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ ಮ್ಯೂಸಿಯಂ, ಕೆರೆ ಅಭಿವೃದ್ಧಿ, ಉದ್ಯಾನ ನಿರ್ಮಾಣಕ್ಕೆ ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಸಹಕಾರ ನೀಡಲಾಗುವುದು ಎಂದರು.

    ವಿಧಾನ ಪರಿಷತ್ ಸದಸ್ಯ ಆ.ದೇವೇಗೌಡ ಅವರು ಶಿಥಿಲಗೊಂಡಿದ್ದ ದೇವಾಲಯವನ್ನು ಎಲ್ಲರ ಸಹಕಾರದಿಂದ ಜೀರ್ಣೋದ್ಧಾರ ಮಾಡಿ, ಕಾಶಿಯಿಂದಲೇ ವಿಶ್ವನಾಥನ ವಿಗ್ರಹ ತಂದು ಪ್ರತಿಷ್ಠಾಪಿಸಲಾಗಿದೆ. ಗ್ರಾಮಸ್ಥರು ದೇವಾಲಯವನ್ನು ಕಾಪಾಡಿಕೊಂಡು ಹೋಗಲಿ. ಅಂಕನಹಳ್ಳಿ ಮಠದಲ್ಲಿ ನಮ್ಮ ತಂದೆ ಕೆಲಸ ವಾಡಿದ್ದು, ಮಠದೊಂದಿಗೆ ನಮ್ಮ ಸಂಬಂಧ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದರು.

    ಆ.ದೇವೇಗೌಡ ಮಾತನಾಡಿ, ಕೆಂಪೇಗೌಡರು ನಿರ್ಮಿಸಿದ್ದ ಈ ದೇವಾಲಯ ಶಿಥಿಲಗೊಂಡಿದ್ದರಿಂದ ಜೀರ್ಣೋದ್ದಾರ ಮಾಡಲಾಗಿದೆ, ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರದಿಂದ ಈ ದೇವಾಲಯ ಸೇರಿ ಕೆಂಪೇಗೌಡರು ನಿರ್ಮಿಸಿರುವ ಕೆರೆ, ಕಟ್ಟೆ, ದೇವಾಲಯಗಳನ್ನು ಜೀರ್ಣೋದ್ದಾರಗೊಳಿಸಲಿ ಎಂದರು.

    ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಸ್ಫಟಿಕಪುರಿ ಮಠದ ನಂಜಾವದೂತ ಸ್ವಾಮೀಜಿ, ಗದ್ದುಗೆ ಮಠ ಮಹಾಂತ ಸ್ವಾಮೀಜಿ, ಕಂಚುಗಲ್ಲು ಬಂಡೇಮಠ ಬಸವಲಿಂಗಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ, ಹಿತ್ತಲಹಳ್ಳಿ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಗುಮ್ಮಸಂದ್ರ ಮಠ ಚಂದ್ರಶೇಖರ ಸ್ವಾಮೀಜಿ, ಚಿಲುಮೆ ಮಠ ಬಸವಲಿಂಗಸ್ವಾಮೀಜಿ, ಭಕ್ತ ಮುನೇಶ್ವರ ಕ್ಷೇತ್ರದ ರಂಗನಾಥಾನಂದ ಸ್ವಾಮೀಜಿ, ಶಾಸಕ ಎ.ಮಂಜುನಾಥ್, ವಾಜಿ ಸಚಿವ ಎಚ್.ಎಂ.ರೇವಣ್ಣ, ಎಪಿಎಂಸಿ ನಿರ್ದೆಶಕ ಮಂಜುನಾಥ್ ಇತರರು ಇದ್ದರು.

    3 ಸಾವಿರ ಎಕರೆಯಲ್ಲಿ ಕೈಗಾರಿಕೆ : ತಾಲೂಕಿನ ಮರೂರು ಬಳಿ 3 ಸಾವಿರ ಎಕರೆಯಲ್ಲಿ ಕೈಗಾರಿಕೆ ಪ್ರದೇಶ ನಿರ್ಮಿಸಿ ಕೈಗಾರಿಕೆಗಳನ್ನು ಆರಂಭಿಸಲಾಗುವುದು. ಇದಕ್ಕೆ ಸಾಕಷ್ಟು ಬೇಡಿಕೆ ಇದ್ದು, ಶಾಸಕ ಎ. ಮಂಜುನಾಥ್ ಸಹ ಆಸಕ್ತಿ ಹೊಂದಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಕೃಷಿ ಜತೆಗೆ ಕೈಗಾರಿಕೆಗೆ ಒತ್ತು ನೀಡಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts