More

    ನಾಗಾರ್ಜುನ ಜತೆ ಆಶಿಕಾ; ನಾ ಸಾಮಿ ರಂಗ ಗ್ಲಿಂಪ್ಸ್ ರಿಲೀಸ್

    ಕನ್ನಡದ ‘ಕ್ರೇಜಿ ಬಾಯ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಆಶಿಕಾ ರಂಗನಾಥ್, ‘ಮುಗುಳು ನಗೆ’, ‘ರ‌್ಯಾಂಬೊ 2’, ‘ಕೋಟಿಗೊಬ್ಬ 3’ ಸೇರಿ ಹಲವು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಆ ಬಳಿಕ ಕಲ್ಯಾಣ್ ರಾಮ್ ಮುಖ್ಯ ಭೂಮಿಕೆಯಲ್ಲಿದ್ದ, ರಾಜೇಂದ್ರ ರೆಡ್ಡಿ ನಿರ್ದೇಶನದ ‘ಅಮಿಗೊಸ್’ ಸಿನಿಮಾ ಮೂಲಕ ತೆಲುಗು ಚಿತ್ರರಂಗದಲ್ಲಿ ಡೆಬ್ಯೂ ಮಾಡಿದರು.

    ಇದೀಗ ಎರಡನೇ ಸಿನಿಮಾದಲ್ಲೇ 64 ವರ್ಷದ ತೆಲುಗಿನ ಸ್ಟಾರ್ ನಟ ನಾಗಾರ್ಜುನ ಅಕ್ಕಿನೇನಿ ಜತೆ ಅಭಿನಯಿಸುತ್ತಿರುವ ಸಂಭ್ರಮದಲ್ಲಿದ್ದಾರೆ 27 ವರ್ಷದ ಆಶಿಕಾ. ಚಿತ್ರದ ಹೆಸರು ‘ನಾ ಸಾಮಿ ರಂಗ’. ವಿಜಯ್ ಬಿನ್ನಿ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಸೋಮವಾರ (ಡಿ.4) ಆಶಿಕಾ ಲುಕ್‌ನ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ‘ವರಲಕ್ಷ್ಮಿ’ ಪಾತ್ರವನ್ನು ಮಾಡುತ್ತಿರುವ ಆಶಿಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಕನ್ನಡಿ ಮುಂದೆ ಕುಳಿತು ನಾಗಾರ್ಜುನ್ ಅವರ ಸ್ಟೈಲ್ ಅನುಕರಣೆ ಮಾಡುತ್ತಿರುವ ದೃಶ್ಯ ಗ್ಲಿಂಪ್ಸ್‌ನಲ್ಲಿದೆ. ನಾಗಾರ್ಜುನ ನಾಯಕನಾಗಿರುವ ತೆಲುಗಿನ 81ನೇ ಚಿತ್ರವಿದು.

    ಪ್ರಸನ್ನ ಕುಮಾರ್ ಸಂಭಾಷಣೆ ಜತೆಗೆ ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ಈ ಚಿತ್ರಕ್ಕಿದೆ. ಮುಂದಿನ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು ಎನ್ನಲಾಗಿದೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts