ಚೆನ್ನೈ: ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಗಳು ಜಲಾವೃತವಾಗಿವೆ. ಮಿಚಾಂಗ್ ಚಂಡಮಾರುತದ ಚೆನ್ನೈ ಜನರ ನಿದ್ದೆಗೆಡಿಸಿದೆ. ಈ ವೇಳೆ ನಟಿ ನಮಿತಾ ಅವರ ಮನೆ ಜಲಾವೃತಗೊಂಡಿದೆ.
ನಟಿ ನಮಿತಾ ಮನೆಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ. ಚೆನ್ನೈ ಸಮೀಪದಲ್ಲಿರುವ ಪಲ್ಲಿಕರಣ ನಾರಾಯಣಪುರಂ ಕೆರೆ ಒಡೆದು, ನಮಿತಾ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿ ಆರು ಅಡಿಗಳಷ್ಟು ನೀರು ತುಂಬಿದೆ.
ನಮಿತಾ ವಾಸವಿದ್ದ ಪಳ್ಳಿಕರಣ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ನಟಿ ನಮಿತಾ ವಾಸವಿದ್ದಾರೆ. ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕೂಡಲೇ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿ, ಬಚಾವ್ ಆಗಿದ್ದಾರೆ.
ನಟಿ ನಮಿತಾ 2017ರಲ್ಲಿ ಚೆನ್ನೈ ಮೂಲದ ತೆಲುಗು ವ್ಯಕ್ತಿ ವೀರೇಂದ್ರ ಚೌಧರಿ ಜೊತೆ ಹಸೆಮಣೆ ಏರಿದರು. ತಿರುಪತಿಯಲ್ಲಿ ಇಬ್ಬರೂ ಸಪ್ತಪದಿ ತುಳಿದದ್ದರು. ಮದುವೆಯ ನಂತರ ನಮಿತಾ ಸಿನಿಮಾದಲ್ಲಿ ಹೆಚ್ಚು ಸಕ್ರೀಯರಾಗಿರಲಿಲ್ಲ. 2002ರಲ್ಲಿ ನಮಿತಾ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭ ಮಾಡಿದರು. ಗುಜರಾತ್ ಮೂಲದ ನಟಿ ನಮಿತಾ ಖ್ಯಾತಿಗಳಿಸಿದ್ದು ದಕ್ಷಿಣ ಭಾರತದಲ್ಲಿ. ತೆಲುಗಿನ ಸೊಂತಮ್ ಸಿನಿಮಾ ಮೂಲಕ ನಮಿತಾ ಮೊದಲ ಬಾರಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗು, ತಮಿಳು ಮಾತ್ರವಲ್ಲದೇ ಕನ್ನಡ ಸಿನಿಮಾರಂಗದಲ್ಲೂ ಮಿಂಚುತ್ತಿದ್ದಾರೆ.
2015ರ ಮಳೆಗಿಂತ ಈ ವರ್ಷ ಹೆಚ್ಚು ಮಳೆ ಸುರಿದಿದ್ದು , ಭಾರಿ ಪ್ರವಾಹದಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಕಳೆದೆರಡು ದಿನಗಳಿಂದ ಜನರನ್ನು ಬೆದರಿಸುತ್ತಿದ್ದ ಮಿಚಾಂಗ್ ಚಂಡಮಾರುತ ಇದೀಗ ಆಂಧ್ರಪ್ರದೇಶದತ್ತ ಸಾಗಿ ಕರಾವಳಿಯನ್ನು ದಾಟಿದ್ದು, ಜನರು ನಿರಾಳರಾಗಿದ್ದಾರೆ. ಚೆನ್ನೈನಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ. ನಿಂತ ಮಳೆ ನೀರು ತೆಗೆಯುವ ಕಾರ್ಯ ಚುರುಕುಗೊಂಡಿದ್ದು, ಸಂತ್ರಸ್ತರಿಗೆ ಆಹಾರ ಒದಗಿಸಲಾಗಿದೆ.
ಮಹಿಳೆಯರು ಹೆಚ್ಚು ಮಕ್ಕಳನ್ನು ಮಾಡ್ಕೊಳ್ಳಿ…ಕಣ್ಣೀರು ಹಾಕಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್