'ನಾನು ಕೋಳಿಮರಿಯಲ್ಲ': ಒವೈಸಿ ಹೀಗೆ ಹೇಳಿದ್ದೇಕೆ?

oyc
Published on

ನವದೆಹಲಿ: ಇತ್ತೀಚಿಗೆ ಮೃತಪಟ್ಟ ದರೋಡೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಕುಟುಂಬ ಸದಸ್ಯರನ್ನು ಭೇಟಿಯಾದ ನಂತರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿಗೆ ಕೊಲೆ ಬೆದರಿಕೆಗಳು ಬಂದಿವೆ.

ವಿಷಯದಲ್ಲಿ ಬೆದರಿಕೆ ಹಾಕಿರುವ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ಮೇಲ್ವಿಚಾರಣೆ ಮಾಡುವಂತೆ ಒವೈಸಿ ಚುನಾವಣಾ ಆಯೋಗವನ್ನು (ಇಸಿಐ) ಒತ್ತಾಯಿಸಿದ್ದಾರೆ.

ಎಕ್ಸ್‌ನಲ್ಲಿನ ವೀಡಿಯೊದಲ್ಲಿ, ಒವೈಸಿ ತನಗೆ ಬೆದರಿಕೆ ಹಾಕಿರುವವರ ಬಗ್ಗೆ ಮಾತನಾಡಿದ್ದು, ನಾನು ಕೋಳಿಯ ಮರಿಯಲ್ಲ. ನಾನು ಅಷ್ಟು ಸುಲಭವಾಗಿ ಹೆದರಿ ಹಿಂದೆ ಹೋಗುವುದಿಲ್ಲ. ನಾನು ಬೆನ್ನು ತಿರುಗಿಸುವುದಿಲ್ಲ, ನಿಮ್ಮ ಅಪ್ಪ ಬಂದರೂ ನಾನು ಹೋರಾಡುತ್ತೇನೆ ಎಂದು ಹೇಳಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಸಾದುದ್ದೀನ್ ಒವೈಸಿ, ದೇಶದಲ್ಲಿ ಬೆದರಿಕೆ ಹಾಕಿರುವವರಿಗೆ ಉತ್ತೇಜಿಸುವ ವಾತಾವರಣವು ಸೃಷ್ಟಿಯಾಗಿದೆ. ಶಾಶ್ವತವಾಗಿ ಬದುಕುವವರು ಯಾರೂ ಇಲ್ಲಿಲ್ಲ. ಬಹಿರಂಗವಾಗಿ ಇಂತಹ ಬೆದರಿಕೆಗಳನ್ನು ಹಾಕುತ್ತಿರುವವರು, ಚುನಾವಣಾ ಆಯೋಗವು ಅದನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ನೋಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ಈ ಮಧ್ಯೆ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರು ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಎಲ್ಲರೂ ಎಐಎಂಐಎಂ ಅಧ್ಯಕ್ಷರ ಬಗ್ಗೆ ಭಯಭೀತರಾಗಿದ್ದಾರೆ. ಬೆದರಿಕೆ ಆರೋಪವು ಕೇವಲ ರಾಜಕೀಯ ನಾಟಕವಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net