More

    ಪ್ರೀತಿಯಲ್ಲಿ ಬೀಳಲು ಕಾಲೇಜು ವಿದ್ಯಾರ್ಥಿಗಳಿಗೆ ರಜೆ: ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ರಯೋಗ

    ಬೀಜಿಂಗ್​: ಕ್ಷೀಣಿಸುತ್ತಿರುವ ಜನಸಂಖ್ಯೆಯು ಚೀನಾಗೆ ಕಳವಳಕಾರಿ ಸಂಗತಿಯಾಗಿದೆ. ಅದರಲ್ಲೂ ಯುವಪಡೆ ಬಲ ಕಡಿಮೆಯಾಗಿದ್ದು, ಚೀನಾದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಮತ್ತೆ ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ತನ್ನೊಳಗೆ ಅನೇಕ ಪ್ರಯೋಗಗಳನ್ನು ಮಾಡುತ್ತಿದೆ. ರಾಜಕೀಯ ಸಲಹೆಗಾರರು ಕೂಡ ಜನನ ಪ್ರಮಾಣ ದರ ಹೆಚ್ಚಿಸಲು ಅನೇಕ ಶಿಫಾರಸುಗಳನ್ನು ಮಾಡುತ್ತಿದ್ದಾರೆ. ಇದೀಗ ಚೀನಾದ ಅನೇಕ ಕಾಲೇಜುಗಳು ರಾಷ್ಟ್ರಕ್ಕೆ ನೆರವಾಗುವಂತಹ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ.

    ಚೀನಾದ 9 ಕಾಲೇಜುಗಳು ವಿದ್ಯಾರ್ಥಿಗಳಿಗೆ ಫಾಲ್​ ಇನ್​ ಲವ್​ (ಪ್ರೀತಿಯಲ್ಲಿ ಬೀಳು) ಎಂಬ ಯೋಜನೆ ಜಾರಿ ಮಾಡಿದ್ದು, ಒಂದು ವಾರಗಳು ಪ್ರೀತಿಯಲ್ಲಿ ಬೀಳಲು ಅವಕಾಶ ನೀಡಿದೆ.

    ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ಮುಂದೆ 2 ಲಕ್ಷ ರೂ. ನೋಟುಗಳನ್ನು ಚೆಲ್ಲಾಡಿದ ಸದಸ್ಯನ ನಡೆಗೆ ಭಾರೀ ಮೆಚ್ಚುಗೆ!

    ಸ್ಥಳೀಯ ಮಾಧ್ಯಮದ ಪ್ರಕಾರ ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನಡೆಸುತ್ತಿರುವ ಒಂಬತ್ತು ಕಾಲೇಜುಗಳಲ್ಲಿ ಒಂದಾದ ಮಿಯಾನ್ಯಾಂಗ್ ಫ್ಲೈಯಿಂಗ್ ವೊಕೇಶನಲ್ ಕಾಲೇಜು, ಮಾರ್ಚ್ 21 ರಂದು ಒಂದು ವಾರಗಳ ವಿರಾಮವನ್ನು ಮೊದಲು ಘೋಷಿಸಿತು. ಇದು ಪ್ರಣಯದ ಮೇಲೆ ನಿರ್ದಿಷ್ಟ ಗುರಿ ಅಥವಾ ಗಮನವನ್ನು ಹೊಂದಿದೆ. ಏಪ್ರಿಲ್ 1 ರಿಂದ ಏಪ್ರಿಲ್ 7 ರವರೆಗೆ ಇರುವ ಸಮಯವು ವಸಂತ ವಿರಾಮವನ್ನು ಆನಂದಿಸುವ ಮೂಲಕ ಪ್ರಕೃತಿಯನ್ನು ಪ್ರೀತಿಸಲು, ಜೀವನವನ್ನು ಪ್ರೀತಿಸಲು ಮತ್ತು ಪ್ರೀತಿಯನ್ನು ಆನಂದಿಸಲು ಕಲಿಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ.

    ವಿದ್ಯಾರ್ಥಿಗಳು ಹಸಿರು ಪರಿಸರ, ನೀರು ಮತ್ತು ಹಸಿರು ಪರ್ವತಗಳನ್ನು ನೋಡಲು ಹೋಗಬಹುದು ಮತ್ತು ವಸಂತಕಾಲದ ಉಸಿರನ್ನು ಅನುಭವಿಸಬಹುದು ಎಂದು ನಾನು ಭಾವಿಸುತ್ತೇನೆ. ಇದು ವಿದ್ಯಾರ್ಥಿಗಳ ಪರಿಧಿಯನ್ನು ವಿಸ್ತರಿಸುತ್ತದೆ ಮತ್ತು ಅವರ ಭಾವನೆಗಳನ್ನು ಬೆಳೆಸುತ್ತದೆ. ಆದರೆ, ತರಗತಿಯಲ್ಲಿ ಬೋಧನಾ ವಿಷಯವನ್ನು ಉತ್ಕೃಷ್ಟಗೊಳಿಸುತ್ತದೆ ಮತ್ತು ಆಳಗೊಳಿಸುತ್ತದೆ ಎಂದು ಮಿಯಾನ್ಯಾಂಗ್ ಫ್ಲೈಯಿಂಗ್ ವೊಕೇಶನಲ್ ಕಾಲೇಜಿನ ಉಪ ಡೀನ್ ಲಿಯಾಂಗ್ ಗುವೊಹುಯಿ ಹೇಳಿದ್ದಾರೆ.

    ಈ ಒಂದು ವಾರದಲ್ಲಿ ವಿದ್ಯಾರ್ಥಿಗಳಿಗೆ ಹೋಮ್‌ವರ್ಕ್ ಸಹ ನೀಡಲಾಗಿದೆ. ಡೈರಿಗಳನ್ನು ಬರೆಯುವುದು, ವೈಯಕ್ತಿಕ ಅಭಿವೃದ್ಧಿಯ ಬಗ್ಗೆ ನಿಗಾ ಇಡುವುದು ಮತ್ತು ಪ್ರಯಾಣದ ವಿಡಿಯೋಗಳನ್ನು ಮಾಡುವುದು ಒಳಗೊಂಡಿರುತ್ತದೆ.

    ಈ ಒಂದು ಪ್ರಯತ್ನವು ಜನನ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಉದ್ದೇಶವನ್ನು ಪೂರೈಸುವ ಪ್ರಯತ್ನವಾಗಿದೆ.

    ಇದನ್ನೂ ಓದಿ: ಹೆಂಡತಿ ಜತೆ ಜಗಳಕ್ಕೆ ಬೇಸತ್ತು 26 ಲಕ್ಷ ರೂಪಾಯಿಯೊಂದಿಗೆ ಗೋವಾಗೆ ಹೊರಟರೂ ಗ್ರಹಚಾರ ಕೆಟ್ಟಿತ್ತು!

    ಕಳೆದ ವರ್ಷ ಚೀನಾ ಅತಿ ಕಡಿಮೆ ಜನನ ಪ್ರಮಾಣ ದರವನ್ನು ಹೊಂದಿದೆ. ಕಳೆದ ಆರು ದಶಕಗಳಲ್ಲೇ ಇದೆ ಮೊದಲು ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. 2022ರ ವರದಿಯ ಪ್ರಕಾರ ಪ್ರತಿ ಸಾವಿರ ಜನರಿಗೆ 6.77 ರಷ್ಟು ಜನನಗಳು ಮಾತ್ರ ಸಂಭವಿಸುತ್ತಿವೆ. ಅದರ ಹಿಂದಿನ ವರ್ಷ ಇದರ ಪ್ರಮಾಣ 7.52 ರಷ್ಟಿತ್ತು. ಇದೀಗ ಕುಸಿತ ಕಂಡಿರುವುದು ಚೀನಾದ ಕಳವಳಕ್ಕೆ ಕಾರಣವಾಗಿದೆ.

    ಚೀನಾ 1980 ಮತ್ತು 2015ರ ನಡುವೆ ಒಂದು ಮಗು ನೀತಿಯನ್ನು ಹೇರಿತ್ತು. ಅಲ್ಲದೆ, ಶಿಕ್ಷಣದ ವೆಚ್ಚವನ್ನು ಭರಿಸಲಾಗದೇ ಅನೇಕರು ಒಂದೇ ಮಗುವಿಗೆ ಸೀಮಿತರಾದರು. ಈ ಎಲ್ಲ ಕಾರಣದಿಂದ ಚೀನಾದಲ್ಲಿ ಜನಸಂಖ್ಯೆ ದಿಢೀರ ಕುಸಿತಕಂಡಿದೆ. ಅಲ್ಲದೆ, ವಯಸ್ಸಾದವರ ಸಂಖ್ಯೆ ಹೆಚ್ಚಿದೆ. ಇದು ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ. ಇದೀಗ ದೇಶದಲ್ಲಿ ಜನನ ಪ್ರಮಾಣವನ್ನು ಹಿಗ್ಗಿಸಲು ಚೀನಾ ಹೊಸ ಪ್ರಯೋಗಕ್ಕೆ ಕೈಹಾಕಿದೆ. (ಏಜೆನ್ಸೀಸ್​)

    ನವದಂಪತಿಗೆ 30 ದಿನ ಸಂಬಳ ಸಹಿತ ರಜೆ! ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ರಯೋಗ

    5 ದಶಕಗಳಲ್ಲೇ ಪಾಕ್​​​ ಹಣದುಬ್ಬರ ಗರಿಷ್ಠ: ಆಹಾರಕ್ಕಾಗಿ ನೂಕು ನುಗ್ಗಲು, ಕಾಲ್ತುಳಿತಕ್ಕೆ 20 ಮಂದಿ ಬಲಿ

    ಆಟಿಸಂ ಮಕ್ಕಳು ಬುದ್ಧಿಮಾಂದ್ಯರಲ್ಲ: ಸಮಸ್ಯೆ ಗುರುತಿಸಿ, ಆರಂಭದಲ್ಲೇ ಚಿಕಿತ್ಸೆ ಕೊಡಿಸಲು ಪಾಲಕರಿಗೆ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts