More

    ನವದಂಪತಿಗೆ 30 ದಿನ ಸಂಬಳ ಸಹಿತ ರಜೆ! ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ರಯೋಗ

    ಬೀಜಿಂಗ್​: ಕ್ಷೀಣಿಸುತ್ತಿರುವ ಜನಸಂಖ್ಯೆಯು ಚೀನಾಗೆ ಕಳವಳಕಾರಿ ಸಂಗತಿಯಾಗಿದೆ. ಅದರಲ್ಲೂ ಯುವಪಡೆ ಬಲ ಕಡಿಮೆಯಾಗಿದ್ದು, ಚೀನಾದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಮತ್ತೆ ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ತನ್ನೊಳಗೆ ಅನೇಕ ಪ್ರಯೋಗಗಳನ್ನು ಮಾಡುತ್ತಿದೆ.

    ಕಳೆದ ವರ್ಷ ಚೀನಾ ಅತಿ ಕಡಿಮೆ ಜನನ ಪ್ರಮಾಣ ದರವನ್ನು ಹೊಂದಿದೆ. ಕಳೆದ ಆರು ದಶಕಗಳಲ್ಲೇ ಇದೆ ಮೊದಲು ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. 2022ರ ವರದಿಯ ಪ್ರಕಾರ ಪ್ರತಿ ಸಾವಿರ ಜನರಿಗೆ 6.77 ರಷ್ಟು ಜನನಗಳು ಮಾತ್ರ ಸಂಭವಿಸುತ್ತಿವೆ. ಅದರ ಹಿಂದಿನ ವರ್ಷ ಇದರ ಪ್ರಮಾಣ 7.52 ರಷ್ಟಿತ್ತು. ಇದೀಗ ಕುಸಿತ ಕಂಡಿರುವುದು ಚೀನಾದ ಕಳವಳಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಬಾಯ್​​ಫ್ರೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ 19ರ ಯುವತಿ; ಇದಕ್ಕಾಗಿ ಮಾಡಿದ್ದು ಮಾತ್ರ ಹೇಯ ಕೃತ್ಯ!

    ಚೀನಾ 1980 ಮತ್ತು 2015ರ ನಡುವೆ ಒಂದು ಮಗು ನೀತಿಯನ್ನು ಹೇರಿತ್ತು. ಅಲ್ಲದೆ, ಶಿಕ್ಷಣದ ವೆಚ್ಚವನ್ನು ಭರಿಸಲಾಗದೇ ಅನೇಕರು ಒಂದೇ ಮಗುವಿಗೆ ಸೀಮಿತರಾದರು. ಈ ಎಲ್ಲ ಕಾರಣದಿಂದ ಚೀನಾದಲ್ಲಿ ಜನಸಂಖ್ಯೆ ದಿಢೀರ ಕುಸಿತಕಂಡಿದೆ. ಅಲ್ಲದೆ, ವಯಸ್ಸಾದವರ ಸಂಖ್ಯೆ ಹೆಚ್ಚಿದೆ. ಇದು ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ. ಇದೀಗ ದೇಶದಲ್ಲಿ ಜನನ ಪ್ರಮಾಣವನ್ನು ಹಿಗ್ಗಿಸಲು ಚೀನಾ ಹೊಸ ಪ್ರಯೋಗಕ್ಕೆ ಕೈಹಾಕಿದೆ.

    ಕಮ್ಯೂನಿಷ್ಟ್​ ಪಾರ್ಟಿಯ ಮುಖವಾಣಿ ಪೀಪಲ್ಸ್​ ಟೈಲಿ ಹೆಲ್ತ್​ ಮಾಧ್ಯಮ ಪ್ರಕಾರ ಚೀನಾದ ಕೆಲವು ಪ್ರಾಂತ್ಯಗಳು ಮದುವೆಗಳನ್ನು ಉತ್ತೇಜಿಸುತ್ತಿವೆ. ಹೊಸದಾಗಿ ಮದುವೆಯಾಗುವ ದಂಪತಿಗೆ 30 ದಿನಗಳ ಸಂಬಳ ಸಹಿತ ರಜೆಗಳನ್ನು ಘೋಷಣೆ ಮಾಡಿವೆ. ಇದರ ಉದ್ದೇಶ ಜನನ ಪ್ರಮಾಣವನ್ನು ಹೆಚ್ಚು ಮಾಡಲು.

    ಈ ಮೊದಲು ಚೀನಾದಲ್ಲಿ ಮದುವೆಗೆ ಕೇವಲ 3 ದಿನಗಳು ಮಾತ್ರ ರಜೆ ನೀಡಲಾಗುತ್ತಿತ್ತು. ಆದರೀಗ ಕೆಲವು ಪ್ರಾಂತ್ಯಗಳು ಫೆಬ್ರವರಿಯಿಂದ 30 ದಿನಗಳ ರಜೆ ಘೋಷಿಸಿವೆ. ಗಮನಾರ್ಹ ಸಂಗತಿ ಏನೆಂದರೆ, ಆ 30 ದಿನ ಸಂಬಳ ಸಹಿತ ರಜಾ ದಿನವಾಗಿರಲಿವೆ.

    ಇದನ್ನೂ ಓದಿ: ರೂಪಾ ಮೌದ್ಗಿಲ್ ಕರೆ ಮಾಡಿ 25 ನಿಮಿಷ ಮಾತಾಡಿದ್ರು: ಆರ್​​ಟಿಐ ಕಾರ್ಯಕರ್ತ ಗಂಗರಾಜು ಸ್ಫೋಟಕ ಹೇಳಿಕೆ

    ಮದುವೆ ಆಗಿ ಮಕ್ಕಳು ಮಾಡಿಕೊಳ್ಳಲು ಪ್ರೇರಣೆಯಾಗಿ 30 ದಿನಗಳ ರಜೆಯನ್ನು ನೀಡಲಾಗುತ್ತದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕೆಲವು ಪ್ರಾಂತ್ಯಗಳು 30 ದಿನ ರಜೆ ನೀಡಿದರೆ, ಇನ್ನೂ ಕೆಲವು ಪ್ರಾಂತ್ಯಗಳು ಕೇವಲ 10 ದಿನ ರಜೆಗಳನ್ನು ನೀಡುತ್ತಿವೆ. (ಏಜೆನ್ಸೀಸ್​)

    2024ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್​ನಲ್ಲಿ ಭಾರತೀಯ ಮೂಲದ ವಿವೇಕ್​ ರಾಮಸ್ವಾಮಿ ಸ್ಪರ್ಧೆ!

    ನಟಿ ಶುಭಾ ಪೂಂಜಾ ಮನೆಯಲ್ಲಿ ನಡೆದ ಅತ್ಯಂತ ನೋವಿನ ಸಂಗತಿ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts