More

    5 ದಶಕಗಳಲ್ಲೇ ಪಾಕ್​​​ ಹಣದುಬ್ಬರ ಗರಿಷ್ಠ: ಆಹಾರಕ್ಕಾಗಿ ನೂಕು ನುಗ್ಗಲು, ಕಾಲ್ತುಳಿತಕ್ಕೆ 20 ಮಂದಿ ಬಲಿ

    ಇಸ್ಲಮಾಬಾದ್​: ಪಾಕಿಸ್ತಾನದ ಹಣದುಬ್ಬರ ಮಾರ್ಚ್​ ತಿಂಗಳಲ್ಲಿ 35.37 ಪರ್ಸೆಂಟ್​ಗೆ ತಲುಪಿದ್ದು, 50 ವರ್ಷಗಳಲ್ಲೇ ಇದು ಅತ್ಯಧಿಕ ಹಣದುಬ್ಬರವಾಗಿದೆ. ಈ ಕಠಿಣ ಸಂದರ್ಭದಲ್ಲಿ ಅಗತ್ಯವಿರುವ ಹಣಕಾಸಿನ ನೆರವನ್ನು ಕೋರಲು ಪಾಕ್​ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಷರತ್ತುಗಳನ್ನು ಪೂರೈಸಲು ಪರದಾಡುತ್ತಿದೆ.

    ಶನಿವಾರ ಪಾಕ್​ ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶಗಳ ಪ್ರಕಾರ ತಿಂಗಳಿನಿಂದ ತಿಂಗಳಿಗೆ ಹಣದುಬ್ಬರ 3.72 ರಷ್ಟು ಏರಿಕೆಯಾಗುತ್ತಿದೆ. ಕಳೆದ ವರ್ಷದ ಸರಾಸರಿ ಹಣದುಬ್ಬರ ದರವು 27.26 ರಷ್ಟಿತ್ತು. ವರ್ಷಗಳವರೆಗಿನ ಆರ್ಥಿಕ ದುರುಪಯೋಗ ಮತ್ತು ದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯು ಪಾಕಿಸ್ತಾನದ ಆರ್ಥಿಕತೆಯನ್ನು ಕುಸಿತದ ಅಂಚಿಗೆ ತಳ್ಳಿದೆ. ಜಾಗತಿಕ ಇಂಧನ ಬಿಕ್ಕಟ್ಟು ಮತ್ತು 2022ರಲ್ಲಿ ದೇಶದ ಮೂರನೇ ಒಂದು ಭಾಗವನ್ನು ಮುಳುಗಿಸಿದ ವಿನಾಶಕಾರಿ ಪ್ರವಾಹದಿಂದ ಪಾಕ್​ನಲ್ಲಿ ಆರ್ಥಿಕ ದುಸ್ಥಿತಿ ಉಲ್ಬಣಗೊಂಡಿದೆ.

    ಇದನ್ನೂ ಓದಿ: ಹೆಂಡತಿ ಜತೆ ಜಗಳಕ್ಕೆ ಬೇಸತ್ತು 26 ಲಕ್ಷ ರೂಪಾಯಿಯೊಂದಿಗೆ ಗೋವಾಗೆ ಹೊರಟರೂ ಗ್ರಹಚಾರ ಕೆಟ್ಟಿತ್ತು!

    ಸದ್ಯಕ್ಕೆ ಅಸ್ತಿತ್ವದಲ್ಲಿರುವ ಸಾಲವನ್ನು ತೀರಿಸಲು ದೇಶಕ್ಕೆ ಶತಕೋಟಿ ಡಾಲರ್ ಹಣಕಾಸು ಅಗತ್ಯವಿದೆ. ಆದರೆ, ವಿದೇಶಿ ವಿನಿಮಯ ಮೀಸಲು ಕಡಿಮೆಯಾಗಿದೆ ಮತ್ತು ಪಾಕ್​ನ ರೂಪಾಯಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿಯುತ್ತಿದೆ. ಇದರಿಂದ ಪಾಕಿಸ್ತಾನ ಬಡತನದ ಕೂಪಕ್ಕೆ ಸಿಲುಕಿದ್ದು, ಬಡ ಪಾಕಿಸ್ತಾನಿಗಳು ಆರ್ಥಿಕ ಪ್ರಕ್ಷುಬ್ಧತೆಯ ತೀವ್ರತೆಯನ್ನು ಅನುಭವಿಸುತ್ತಿದ್ದಾರೆ. ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಪಡಿತರ ವಿತರಣಾ ಕೇಂದ್ರಗಳಲ್ಲಿ ಆಹಾರಕ್ಕೆ ಜನರು ಮುಗಿಬೀಳುತ್ತಿದ್ದಾರೆ. ಇಂದು ರಂಜಾನ್​ ಮಾಸವಾಗಿರುವುದರಿಂದ ಆಹಾರ ಪಡೆಯಲು ಜನರ ನೂಕು ನುಗ್ಗಲು ಜಾಸ್ತಿಯಾಗಿದ್ದು, ಇದರಿಂದ ಉಂಟಾದ ಕಾಲ್ತುಳಿತಕ್ಕೆ ಈವರೆಗೂ ಕನಿಷ್ಠ 20 ಜನರು ಮೃತಪಟ್ಟಿದ್ದಾರೆ.

    ಹಣದುಬ್ಬರವು ಏರುತ್ತಿರುವ ರೀತಿ ನೋಡಿದರೆ, ಬರಗಾಲದಂತಹ ಪರಿಸ್ಥಿತಿಯು ಕುದಿಯುತ್ತಿದೆ ಎಂದು ನಾನು ನಂಬುತ್ತೇನೆ ಎಂದು ಕರಾಚಿ ಮೂಲದ ವಿಶ್ಲೇಷಕ ಶಾಹಿದಾ ವಿಜಾರತ್ ಹೇಳಿದ್ದಾರೆ. (ಏಜೆನ್ಸೀಸ್​)

    ಜಿಲ್ಲಾ ಪಂಚಾಯಿತಿ ಮುಂದೆ 2 ಲಕ್ಷ ರೂ. ನೋಟುಗಳನ್ನು ಚೆಲ್ಲಾಡಿದ ಸದಸ್ಯನ ನಡೆಗೆ ಭಾರೀ ಮೆಚ್ಚುಗೆ!

    ಆಟಿಸಂ ಮಕ್ಕಳು ಬುದ್ಧಿಮಾಂದ್ಯರಲ್ಲ: ಸಮಸ್ಯೆ ಗುರುತಿಸಿ, ಆರಂಭದಲ್ಲೇ ಚಿಕಿತ್ಸೆ ಕೊಡಿಸಲು ಪಾಲಕರಿಗೆ ಸಲಹೆ

    ಧರ್ಮದ ಸತ್ವಪರೀಕ್ಷೆ ಎದುರಿಸಿ ಮಹಾತ್ಮರಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts