More

    ಇವರ ಕಲಾಕೃತಿಯನ್ನು ಜರ್ಮನಿಯ ಚಾನ್ಸೆಲರ್​ಗೆ ಮೋದಿ ಗಿಫ್ಟ್ ಕೊಟ್ಟ ನಂತರ ಕಲಾವಿದನ ಬಾಳೇ ಬದಲಾಯಿತು!

    ಉತ್ತರಪ್ರದೇಶ: ದಿಲ್ಶಾದ್ ಹುಸೇನ್ ಎನ್ನುವ ಕುಶಲಕರ್ಮಿ ಅನೇಕ ದಶಕಗಳಿಂದ ಹಿತ್ತಾಳೆ ಪಾತ್ರೆಗಳನ್ನು ಕೈಯಿಂದ ಕೆತ್ತನೆ ಮಾಡುತ್ತಿದ್ದಾರೆ. ಆದರೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ, ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಡ್ ಅವರಿಗೆ ನಿಕಲ್ ಲೇಪಿತ “ಮಟ್ಕಾ” ವನ್ನು ಉಡುಗೊರೆಯಾಗಿ ನೀಡಿದ ನಂತರ ಈ ಕುಶಲಕರ್ಮಿಯ ಕಲಾತ್ಮಕ ಪಾತ್ರೆಗಳಿಗೆ ಭಾರಿ ಬೇಡಿಕೆ ಬಂದಿದ್ದು ಜನಪ್ರಿಯವಾಗಿದೆ.

    “ಪ್ರಧಾನಿಯವರು ಅದನ್ನು ಜರ್ಮನ್ ಚಾನ್ಸೆಲರ್‌ಗೆ ಪ್ರಸ್ತುತಪಡಿಸಲು ಆಯ್ಕೆ ಮಾಡಿದ ನಂತರ ‘ಮಟ್ಕಾ’ದ ಜನಪ್ರಿಯತೆಯು ಹಲವು ಪಟ್ಟು ಹೆಚ್ಚಾಗಿದೆ. ಈಗ ನಾನು ಹೆಚ್ಚಿನ ಸಂಖ್ಯೆಯಲ್ಲಿ ಆರ್ಡರ್​ಗಳನ್ನು ಪಡೆಯುತ್ತಿದ್ದೇನೆ.” ಎಂದು 75 ವರ್ಷದ ಹುಸೇನ್ ತಿಳಿಸಿದರು.

    ಕಳೆದ ವರ್ಷ G7 ಶೃಂಗಸಭೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಜರ್ಮನಿಯ ಚಾನ್ಸೆಲರ್‌ಗೆ ಮೊರಾದಾಬಾದ್‌ನಿಂದ ನಿಕಲ್ ಲೇಪಿತ ಕೈಯಿಂದ ಕೆತ್ತಿದ ಹಿತ್ತಾಳೆ ಹಡಗನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನು ಉತ್ತರ ಪ್ರದೇಶದ “ಪೀತಲ್ ನಗರಿ” ಅಥವಾ ಹಿತ್ತಾಳೆ ನಗರ ಎಂದೂ ಕರೆಯುತ್ತಾರೆ.

    ಹುಸೇನ್ ಅವರಿಗೆ ಇತ್ತೀಚೆಗೆ ಅವರ ಕಲಾತ್ಮಕ ಕೆಲಸಕ್ಕಾಗಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಅಜ್ಜನ ಮಾರ್ಗದರ್ಶನದಲ್ಲಿ ಕಸುಬನ್ನು ಕಲಿತೆ ಎಂದು ಹುಸೇನ್​ ಹೇಳಿದರು.

    ಅವರು ಆರು ವರ್ಷಗಳ ಹಿಂದೆ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ “ಶಿಲ್ಪ ಗುರು” ಪ್ರಶಸ್ತಿಯನ್ನು ಪಡೆದಿದ್ದರು. ಹುಸೇನ್ ಅವರು ಇತ್ತೀಚೆಗೆ ಮುಂಬೈನಿಂದ ಆರ್ಡರ್​ ಪಡೆದಿದ್ದು ಒಂದಕ್ಕೆ 18,000 ರೂ. ದರದಲ್ಲಿ ತಮ್ಮ ಕಲಾಕೃತಿಗಳನ್ನು ತಲುಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts