More

    ಬಿಜೆಪಿ ವಿರುದ್ಧ ಧ್ವನಿ ಎತ್ತಿದಕ್ಕೆ ಪ್ರಕರಣ ದಾಖಲು!: ಸಿಎಂ ರೇವಂತ್ ರೆಡ್ಡಿ

    ತೆಲಂಗಾಣ: ಬಿಜೆಪಿ ಪಕ್ಷದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕಾಗಿ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.

    ಇದನ್ನೂ ಓದಿ: ಜೈಲಾಧಿಕಾರಿ ತಪಾಸಣೆಗೆ ಬಂದಾಗ ಮೊಬೈಲ್‌ ನುಂಗಿದ ಕೈದಿ! ಆಮೇಲೇನಾಯ್ತು ಗೊತ್ತಾ?

    ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಕುರಿತ ವಿಷಯ ಪ್ರಶ್ನಿಸಿದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನನ್ನ ವಿರುದ್ಧ ಸೇಡಿನ ಮನೋಭಾವವನ್ನು ಹೊಂದಿರುವುದಾಗಿ ಸಿಎಂ ರೇವಂತ್ ಅವರು ಆರೋಪಿಸಿದ್ದಾರೆ.

    ಎಡಿಟ್ ಮಾಡಿರುವ ವಿಡಿಯೋವನ್ನು ಬಳಸಿಕೊಂಡು ಸಾಮಾಜಿಕ ತಾಣದಲ್ಲಿ ಬಳಸಿಕೊಂಡಿದ್ದಕ್ಕಾಗಿ ರೇವಂತ್ ರೆಡ್ಡಿ ಮತ್ತು ಇತರ ನಾಲ್ವರು ಕಾಂಗ್ರೆಸ್ ಮುಖಂಡರ ವಿರುದ್ದ ದೆಹಲಿ ಪೊಲೀಸರು ಸಮನ್ಸ್ ಹೊರಡಿಸಿದ ಬಳಿಕ ರೇವಂತ್ ರೆಡ್ಡಿ ಈ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸೂಚನೆ ಮೇರಿಗೆ ನನ್ನ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಬಾರಿಯ ಲೋಕಸಭೆ ಚುನಾವಣೆಯು ತೆಲಂಗಾಣದ ಹೆಮ್ಮೆ ಮತ್ತು ಗುಜರಾತ್ ಪ್ರಾಬಲ್ಯ ನಡುವೆ ಪೈಪೋಟಿಯಾಗಿದೆ. ಮೋದಿ ಅವರನ್ನು ಗೌರವ ನೀಡುತ್ತೇವೆ. ಆದರೆ “ಗುಜರಾತ್​ನಿಂದ ಬಂದು ನಮ್ಮ ತೆಲಂಗಾಣದಲ್ಲಿ ಪ್ರಾಬಲ್ಯ ಸಾಧಿಸಬಹುದು ಎಂದು ಕೇಸರಿ ಪಕ್ಷ ಭಾವಿಸಿದ್ದರೆ ಅದು ನಿಮ್ಮ ದೊಡ್ಡ ತಪ್ಪು ಎಂದ ರೇವಂತ್ ಸಂವಿಧಾನ ಬದಲಾವಣೆ ಮತ್ತು ಮೀಸಲಾತಿ ರದ್ದುಪಡಿಸುವ ಕುರಿತು ನಿಮ್ಮ ಪಕ್ಷ ಷಡ್ಯಂತ್ರ ಮಾಡಿಲ್ಲವೇ ನರೇಂದ್ರ ಮೋದಿ ಅವರೇ ಸುಳ್ಳು ಸುಳ್ಳು ಹೇಳುತ್ತಿದ್ದೀರಾ ಎಂದು ರೇವಂತ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

    ಅಮಿತ್ ಷಾ ಅವರ ಭಾಷಣದ ನಕಲಿ ವಿಡಿಯೋ ಪೋಸ್ಟ್ ಮಾಡಿದ ಫೋನ್ ಸಹಿತ ದಿಲ್ಲಿ ಪೊಲೀಸರ ಐಎಫ್‌ಎಸ್‌ಒ ಘಟಕದ (ಸೈಬರ್ ಘಟಕ) ಮುಂದೆ ಮೇ 1ರಂದು ವಿಚಾರಣೆಗೆ ಹಾಜರಾಗಲು ರೇವಂತ್ ರೆಡ್ಡಿ ಅವರಿಗೆ ಸೂಚನೆ ನೀಡಲಾಗಿದೆ.

    “ಸಾರ್ವಜನಿಕ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುವಂತಹ, ಸಮುದಾಯಗಳ ನಡುವೆ ಸೌಹಾರ್ದತೆ ಕದಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ತಿರುಚಿದ ವಿಡಿಯೋಗಳನ್ನು ಹಂಚಿಕೆ ಮಾಡಲಾಗುತ್ತಿದೆ” ಎಂದು ರೇವಂತ್ ರೆಡ್ಡಿ ವಿರುದ್ದ ದೂರಿನಲ್ಲಿ ತಿಳಿಸಲಾಗಿದೆ. ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಮೇ 13 ರಂದು ಮತದಾನ ನಡೆಯಲಿದೆ.

    ಬಿಜೆಪಿಗೆ ಬಿಗ್ ಶಾಕ್​: ಹಾವೇರಿ ಮಾಜಿ ಶಾಸಕ ನೆಹರು ಓಲೇಕಾರ ಕಾಂಗ್ರೆಸ್ ಸೇರ್ಪಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts