More

    ಹಿಮೋಫಿಲಿಯಾ ಭಯ; ಕಾಯಿಲೆ ಬಂದರೆ ಪಡೆಯಬೇಕು ತಿಂಗಳಿಗೆರಡು ಬಾರಿ ಹೊಸ ರಕ್ತ

    ಬೆಂಗಳೂರು: ದೇಹದಲ್ಲಿ ರಕ್ತ ಹೆಪ್ಪುಗಟ್ಟದೆ ಸಣ್ಣ ಪುಟ್ಟ ಗಾಯಗಳಿಗೂ ತೀವ್ರ ರಕ್ತಸ್ರಾವ ಆಗುವ ಸಮಸ್ಯೆ ಹಿಮೋಫಿಲಿಯಾ. ವಂಶವಾಹಿನಿಯಾಗಿ ತಾಯಿಯಿಂದ ಮಕ್ಕಳಿಗೆ ಬರುತ್ತದೆ. 10 ಸಾವಿರ ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಬರುತ್ತದೆ. ಸಾಯೋವರೆಗೂ ಪ್ರತಿ ತಿಂಗಳು 2 ಬಾರಿ ಹೊಸ ರಕ್ತ ಪಡೆಯಲೇಬೇಕು.

    ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅನುಗುಣವಾಗಿ ಹಿಮೋಫಿಲಿಯಾ ಎ, ಬಿ, ಸಿ ಎಂದು ವಿಂಗಡಿಸಲಾಗಿದೆ. ಹಿಮೋಫಿಲಿಯಾ ಎ ಮತ್ತು ಬಿ ಪುರುಷರಲ್ಲಿ ಮಾತ್ರ ಕಂಡು ಬರುತ್ತದೆ. ಹಿಮೋಫಿಲಿಯಾ ಸಿ ಅಪರೂಪದಲ್ಲಿ ಕಂಡು ಬರುತ್ತದೆ. ನಮ್ಮ ದೇಹಕ್ಕೆ ಗಾಯವಾದಾಗ ರಕ್ತ ಬರುವುದು ಸಹಜ, ಆದರೆ ರಕ್ತ ಬೇಗನೆ ಹೆಪ್ಪುಗಟ್ಟುವ ಗುಣವೂ ಇರುವುದರಿಂದ ಚಿಕ್ಕ-ಪುಟ್ಟ ಗಾಯಾವಾದಾಗ ಭಯ ಪಡಬೇಕಾಗಿಲ್ಲ. ಆದರೆ, ಹಿಮೋಫಿಲಿಯಾ ರೋಗ ಇರುವವರಲ್ಲಿ ರಕ್ತ ಹೆಪ್ಪುಗಟ್ಟುವುದಿಲ್ಲ. ಆದ್ದರಿಂದ ಒಂದು ಚಿಕ್ಕ ಗಾಯವಾದರೂ ತುಂಬಾ ರಕ್ತಸ್ರಾವ ಉಂಟಾಗಿ ಸಾವು ಕೂಡ ಸಂಭವಿಸಬಹುದು.

    ಹಿಮೋಫಿಲಿಯಾ ಭಯ; ಕಾಯಿಲೆ ಬಂದರೆ ಪಡೆಯಬೇಕು ತಿಂಗಳಿಗೆರಡು ಬಾರಿ ಹೊಸ ರಕ್ತವಿಶ್ವ ಹಿಮೋಫಿಲಿಯಾ ಸಂಘಟನೆಯ (ಡಬ್ಲು್ಯಎಫ್​ಎಚ್) ಸಂಸ್ಥಾಪಕರಾದ ಫ್ರಾ್ಯಂಕ್ ಸ್ಕಾನ್ಬೆಲ್ ಸ್ಮರಣೆಯೊಂದಿಗೆ 1989ರಿಂದ ಪ್ರತಿ ವರ್ಷ ಏಪ್ರಿಲ್ 17ರಂದು ವಿಶ್ವ ಹಿಮೋಫಿಲಿಯಾ ದಿನ ಆಚರಿಸಲಾಗುತ್ತದೆ. ಜನರಲ್ಲಿ ಹಿಮೋಫಿಲಿಯಾ (ಕುಸುಮ ರೋಗ) ಅಥವಾ ವಿವಿಧ ರೀತಿಯ ರಕ್ತಸ್ರಾವ ರೋಗಗಳ ಕುರಿತು ಜಾಗೃತಿ ಮೂಡಿಸಿ ಉತ್ತಮ ಚಿಕಿತ್ಸೆ ದೊರಕಿಸಿ, ಅವರ ಬದುಕನ್ನು ಉತ್ತಮಗೊಳಿಸುವುದು ಈ ದಿನದ ಆಶಯ. ಹೈಮೊ ಎಂಬ ಗ್ರೀಕ್ ಪದದಿಂದ ಹುಟ್ಟಿಕೊಂಡ ಈ ಶಬ್ದಕ್ಕೆ ರಕ್ತ ಎಂಬ ಅರ್ಥವಿದೆ. ಫೀಲಿಯಾ ಎಂದರೆ ಪ್ರೀತಿ. ರಕ್ತವನ್ನು ಪ್ರೀತಿಸುವ ಕಾಯಿಲೆ ಎಂದು ಇದರ ಅರ್ಥ.

    ಎಷ್ಟು ವಿಧಗಳಿವೆ?: ಹಿಮೋಫಿಲಿಯಾದಲ್ಲಿ ಎ,ಬಿ, ಸಿ ಎಂಬ 3 ವಿಧಗಳಿವೆ. ರಕ್ತಹೆಪ್ಪುಗಟ್ಟಲು ನೆರವಾಗುವ 13 ಫ್ಯಾಕ್ಟರ್​ಗಳಲ್ಲಿ 8ನೇ ಫ್ಯಾಕ್ಟರ್ ಅಥವಾ ಘಟಕ ಕಡಿಮೆ ಇದ್ದರೆ ಅದನ್ನು ಟೈಪ್ ಎ ಎಂದು, 9ನೇ ಫ್ಯಾಕ್ಟರ್ ಕಡಿಮೆ ಇದ್ದರೆ ಟೈಪ್ ಬಿ ಎಂದು ಕರೆಯಲಾಗುತ್ತದೆ. ಟೈಪ್ ಎ ಹಿಮೋಫಿಲಿಯಾ ಹೆಚ್ಚಾಗಿ ಕಾಣಿಸುತ್ತದೆ. ಬಿ ಮತ್ತು ಸಿ ಹಿಮೋಫಿಲಿಯಾ ಕಾಯಿಲೆ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ರೋಗದ ತೀವ್ರತೆಗೆ ತಕ್ಕಂತೆ ಸೌಮ್ಯ, ಸಾಧಾರಣ ಮತ್ತು ತೀವ್ರ ಹಿಮೋಫಿಲಿಯಾ ಎಂದು ವಿಂಗಡಿಸಲಾಗುತ್ತದೆ.

    ರೋಗ ಲಕ್ಷಣಗಳು: ಗಂಟು, ಕೀಲು, ಸ್ನಾಯು ಮತ್ತು ಮಾಂಸಖಂಡಗಳಲ್ಲಿ ರಕ್ತಸ್ರಾವ. ಮೂಗಿನಲ್ಲಿ ರಕ್ತಸ್ರಾವ, ಹಲ್ಲಿನ ವಸಡಿನಲ್ಲಿ ರಕ್ತಸ್ರಾವ. ಸಂಧುನೋವು, ಊತ, ಕೆಲವರಿಗೆ ಮಲ ಮತ್ತು ಮೂತ್ರದಲ್ಲಿಯೂ ರಕ್ತ ಸ್ರಾವವಾಗಬಹುದು. ಮಿದುಳಿನಲ್ಲಿ ರಕ್ತಸ್ರಾವ. ಇವುಗಳಲ್ಲಿ ಕೆಲವೊಂದು ರಕ್ತಸ್ರಾವಗಳು ಮಾರಣಾಂತಿಕವಾಗಿವೆ. ಹಾಗಾಗಿ ತಕ್ಷಣವೇ ಚುಚ್ಚುಮದ್ದು ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಇದನ್ನು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ, ಆದರೆ ಚಿಕಿತ್ಸೆ ಮೂಲಕ ರಕ್ತಸ್ರಾವವನ್ನು ಕಡಿಮೆ ಮಾಡಬಹುದು.

    ಆಹಾರ ಕ್ರಮ ಹೀಗಿರಲಿ: ಹಣ್ಣುಗಳು ಹಾಗೂ ತರಕಾರಿಗಳು ಅಧಿಕವಿರಲಿ, ಅದರಲ್ಲೂ ಬ್ರೊಕೋಲಿ, ಸಿಹಿ ಗೆಣಸು ಹೆಚ್ಚು ಬಳಸಬೇಕು. ಪೊ›ಟೀನ್ ಆಹಾರಗಳಾದ ಮೀನು, ಚಿಕನ್, ಟರ್ಕಿ ಕೋಳಿ, ಮೊಟ್ಟೆ, ಬೀನ್ಸ್, ನಟ್ಸ್, ಟೋಫು ಇವುಗಳನ್ನು ತಿನ್ನಬೇಕು. ಧಾನ್ಯಗಳನ್ನು ತಿನ್ನಬೇಕು. ಕೊಬ್ಬು ಕಡಿಮೆ ಇರುವ ಹಾಲು ಕುಡಿಯಿರಿ. ನೀರನ್ನು ಚೆನ್ನಾಗಿ ಕುಡಿಯಬೇಕು. ಊಟದ ತಟ್ಟೆಯಲ್ಲಿ ಬಣ್ಣ-ಬಣ್ಣದ ಆಹಾರಗಳಿರಲಿ, ಅಂದರೆ ಸೊಪ್ಪುಗಳು, ತರಕಾರಿಗಳಿರಲಿ. ಬೇಯಿಸಿದ ಮಾಂಸಾಹಾರ ಸೇವಿಸಿ, ಕರಿದ ಮಾಂಸಾಹಾರ ದೂರವಿಡಿ. ಬೆಣ್ಣೆ ಹಣ್ಣು, ಆಲೀವ್, ವಾಲ್​ನಟ್ಸ್, ಸೋಯಾಬೀನ್ ಇವುಗಳನ್ನು ಸೇವಿಸಿ. ಕ್ಯಾಲ್ಸಿಯಂ ಹಾಗೂ ಕಬ್ಬಿಣದಂಶ ಅಧಿಕವಿರುವ ಆಹಾರ ಸೇವಿಸಿ. ಕ್ಯಾಲ್ಸಿಯಂ ಅಧಿಕವಿರುವ ಆಹಾರ ಕಡಿಮೆ ಕೊಬ್ಬಿನ ಚೀಸ್, ಗ್ರೀಕ್ ಯೋಗರ್ಟ್ ಸೋಯಾ ಹಾಲು ಮತ್ತು ಆರೇಂಜ್ ಜ್ಯೂಸ್, ಬಾದಾಮಿ ಹಾಗೂ ಕಬ್ಬಿಣದಂಶ ಅಧಿಕವಿರುವ ಆಹಾರ, ಕೆಂಪು ಮಾಂಸ, ಲಿವರ್ ಬೀನ್ಸ್, ಬಟಾಣಿ, ಕೋಳಿ ಮಾಂಸ, ಒಣದ್ರಾಕ್ಷಿ, ಏಪ್ರಿಕಾಟ್, ವಿಟಮಿನ್ ಸಿ ಇರುವ ಆಹಾರಗಳು, ಕಿತ್ತಳೆ, ಟೊಮೆಟೊ, ಕೆಂಪು ಹಾಗೂ ಹಸಿರು ದುಂಡು ಮೆಣಸು, ಕರ್ಬೂಜು, ಕಲ್ಲಂಗಡಿ ಸ್ಟ್ರಾಬೆರಿ ಸೇವಿಸಬಹುದು ಎನ್ನುತ್ತಾರೆ ತಜ್ಞರು.

    ದೇಶದಲ್ಲಿ ಸೋಂಕಿನ ಪ್ರಮಾಣ ಈಗಿರುವುದೇ ನಿಖರವಲ್ಲ; ಅಸಲಿ ಸಂಖ್ಯೆ ಅದಕ್ಕಿಂತಲೂ 5-10 ಪಟ್ಟು ಅಧಿಕ ಎನ್ನುತ್ತಿದ್ದಾರೆ ಇವರು…

    ದಂಪತಿಗೆ ಸೋಂಕು; ಕ್ವಾರಂಟೈನ್ ಕೇಂದ್ರದಲ್ಲೇ ವಿವಾಹ‌ ವಾರ್ಷಿಕೋತ್ಸವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts