More

    ಯೂಟ್ಯೂಬ್ ತೆರಿಗೆ ಲಗಾಮು!; ಚಾನೆಲ್ ಕಂಟೆಂಟ್ ಕ್ರಿಯೇಟರ್ಸ್ ಮೇಲೆ ಪರಿಣಾಮ

    ಯುವ ಜನರ ಮೊಬೈಲ್ ಗೀಳು ಎಲ್ಲರಿಗೂ ತಿಳಿದಿರುವ ವಿಚಾರವೇ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಯುವಕ-ಯುವತಿಯರು ಫೇಸ್​ಬುಕ್, ವಾಟ್ಸ್​ಆಪ್, ಇನ್​ಸ್ಟಾಗ್ರಾಂ, ಟ್ವಿಟರ್, ಯೂಟ್ಯೂಬ್ ಮುಂತಾದ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಯೂಟ್ಯೂಬ್​ನಲ್ಲಿ ಚಾನೆಲ್ ತೆರೆದು ದುಡ್ಡನ್ನೂ ಗಳಿಸುತ್ತಿದ್ದಾರೆ. ಆದರೆ, ಈ ಚಟುವಟಿಕೆಗೆ ತೆರಿಗೆಯ ಲಗಾಮು ಹಾಕಲು ಯೂಟ್ಯೂಬ್​ನ ಒಡೆತನ ಹೊಂದಿರುವ ಗೂಗಲ್ ಮುಂದಾಗಿದೆ. ಇದರಿಂದ ಭಾರತ ಮತ್ತು ಇತರ ರಾಷ್ಟ್ರಗಳಲ್ಲಿ ಯೂಟ್ಯೂಬ್ ಚಾನೆಲ್ ಹೊಂದಿರುವವರಿಗೆ ಕರಭಾರದ ಬರೆ ಬೀಳಲಿದೆ.

    | ಶಶಿಧರ ಗರ್ಗೇಶ್ವರಿ

    ಯೂಟ್ಯೂಬ್ ಮೂಲಕ ವಿಡಿಯೋಗಳನ್ನು ಹರಿಬಿಟ್ಟು ಆದಾಯ ಗಳಿಸುತ್ತಿರುವವರು ಅದರಲ್ಲಿ ತನಗೊಂದಿಷ್ಟು ರಾಜಸ್ವ ನೀಡಲಿ ಎಂಬುದು ಗೂಗಲ್ ಧೋರಣೆ. ಹೀಗಾಗಿ ವಿಡಿಯೋ ಅಪ್​ಲೋಡ್ ಮಾಡುವ ಮೂಲಕ ಲಾಭ ಮಾಡಿಕೊಳ್ಳುತ್ತಿರುವವರು ಅದಕ್ಕೆ ತೆರಿಗೆ ತೆರಬೇಕು ಎಂಬ ನೀತಿಯನ್ನು ಈ ವರ್ಷ ಜೂನ್​ನಿಂದ ಜಾರಿ ಮಾಡಲು ಗೂಗಲ್ ಮುಂದಾಗಿದೆ. ಅಮೆರಿಕದ ವೀಕ್ಷಕರಿಂದ ಲಾಭ ಗಳಿಸುತ್ತಿರುವ ಯೂಟ್ಯೂಬ್​ಚಾನೆಲ್​ಗಳಿಗೆ ಶೇ. 24ರಷ್ಟು ತೆರಿಗೆ ವಿಧಿಸುವುದಾಗಿ ತಿಳಿಸಿದೆ. ಯೂಟ್ಯೂಬ್​ಗೆ ಜಾಹೀರಾತು ಮತ್ತು ಪ್ರಾಯೋಜಿತ ವಿಡಿಯೋಗಳೇ ಆದಾಯದ ಮೂಲ. ಆದರೆ, ಅದು ಇತರ ಮೂಲಗಳನ್ನು ಆದಾಯಕ್ಕೆ ಆಶ್ರಯಿಸುತ್ತಿದೆ. ಚಾನೆಲ್ ಸದಸ್ಯತ್ವ, ಸೂಪರ್ ಚಾಟ್, ಚಾಟ್ ಡೋನೇಷನ್ಸ್, ಯೂಟ್ಯೂಬ್ ಪ್ರೀಮಿಯಮ್ ಸೂಪರ್ ಸ್ಟಿಕರ್ಸ್ ಇತ್ಯಾದಿ. ಈಗ ಕಂಟೆಂಟ್ ಅಪ್​ಲೋಡ್ ಮಾಡುವವರ ಮೇಲೆ ಕರ ಹೇರುವ ಮೂಲಕ ತನ್ನ ಆರ್ಥಿಕ ಸಂಪನ್ಮೂಲವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಿದೆ. ಅಮೆರಿಕದ ಕಂಟೆಂಟ್ ಕ್ರಿಯೇಟರ್​ಗಳಿಗೆ ಕಳೆದ ನವೆಂಬರ್​ನಿಂದಲೇ ಯೂಟ್ಯೂಬ್ ತೆರಿಗೆ ವಿಧಿಸುತ್ತಿದೆ.

    ಬಳಕೆದಾರರ ಸಂಖ್ಯೆ ಏರಿಕೆ: 2005ರಿಂದ ಆರಂಭವಾದ ಯೂಟ್ಯೂಬ್​ಗೆ ಭಾರತದಲ್ಲಿ 2017ರಲ್ಲಿ 16.8 ಕೋಟಿ ಬಳಕೆದಾರರು ಇದ್ದರು. ಅದು 2018ರಲ್ಲಿ 22.9 ಕೋಟಿ, 2019ರಲ್ಲಿ 27.1 ಕೋಟಿ, 2020ರಲ್ಲಿ 30.87 ಕೋಟಿಗೆ ಏರಿತು. ಈ ವರ್ಷ ನಮ್ಮ ದೇಶದ 34.2 ಕೋಟಿ ಜನರು ಯೂಟ್ಯೂಬ್ ಬಳಸುತ್ತಿದ್ದಾರೆ.

    ಯೂಟ್ಯೂಬ್ ತೆರಿಗೆ ಲಗಾಮು!; ಚಾನೆಲ್ ಕಂಟೆಂಟ್ ಕ್ರಿಯೇಟರ್ಸ್ ಮೇಲೆ ಪರಿಣಾಮಏಕೆ ಈ ಕ್ರಮ?: ಯೂಟ್ಯೂಬ್ ಮೂಲಕ ಲಾಭ ಮಾಡಿ ಕೊಳ್ಳುತ್ತಿರು ವವರು ಎಲ್ಲೇ ಇರಲಿ ತಮ್ಮ ಗಳಿಕೆಯಲ್ಲಿ ಶೇ. 24ರಷ್ಟನ್ನು ತೆರಿಗೆಯಾಗಿ (ಭಾರತಕ್ಕೆ ಶೇ. 15) ನೀಡಬೇಕು. ಇದಕ್ಕಾಗಿ ಟ್ಯಾಕ್ಸ್ ಇನ್ಪೋವನ್ನು (ತೆರಿಗೆ ವಿವರ) ಆದಷ್ಟು ಬೇಗ ಸಲ್ಲಿಸಬೇಕು. ಜಾಹಿರಾತಿನಿಂದ ಆದಾಯ ಪಡೆಯುತ್ತಿದ್ದರೆ ಅದರ ವಿವರವನ್ನು ತಪ್ಪದೇ ನಮೂದಿಸಬೇಕು. ಇದರಿಂದ ಚಾನೆಲ್​ನ ಸ್ವರೂಪ ಏನು ಎಂಬುದು ಗೊತ್ತಾಗಲಿದೆ. ಇಷ್ಟು ಪ್ರಮಾಣದ ತೆರಿಗೆ ಸರಿಯಿದೆಯೇ ಅಥವಾ ಇದನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕೆ ಎಂಬುದನ್ನು ನಿರ್ಣಯಿಸಬಹುದು. ಇಲ್ಲದಿದ್ದರೆ ದುಬಾರಿ ತೆರಿಗೆ ತೆರಬೇಕು ಎನ್ನುತ್ತಿದೆ ಗೂಗಲ್. ಮೇ 31ರೊಳಗೆ ಟ್ಯಾಕ್ಸ್ ಇನ್ಪೋ ಸಲ್ಲಿಸದವರನ್ನು ಬಿಜಿನೆಸ್ ಬ್ಲಾಗ್ ವರ್ಗೀಕರಣದಲ್ಲಿ ಗುರುತಿಸಿ ಅವರಿಗೆ ಶೇ. 30ರಷ್ಟು ತೆರಿಗೆ ಹಾಕಲಾಗುವುದು. ಇದನ್ನು ಅವರ ಆದಾಯದಲ್ಲೇ ಮುರಿದುಕೊಳ್ಳಲಾಗುವುದು ಎಂದು ಯೂಟ್ಯೂಬ್ ಚಾನೆಲ್​ಗಳಿಗೆ ಇಮೇಲ್ ಮೂಲಕ ಗೂಗಲ್ ಎಚ್ಚರಿಕೆ ನೀಡಿದೆ.

    ಬೇರೆ ದೇಶಗಳಿಗೆ ಹೋಲಿಸಿ ದರೆ ಏಷ್ಯಾದಲ್ಲಿನ ಕಂಟೆಂಟ್ ಕ್ರಿಯೇಟರ್​ಗಳಿಗೆ ಯೂಟ್ಯೂಬ್ ಕಡಿಮೆ ಆದಾಯ ಕೊಡುತ್ತಿದೆ. ಪ್ರತಿ ಚಾನೆಲ್​ನ ಸದಸ್ಯತ್ವ, ವೀಕ್ಷಣಾ ಸಮಯವನ್ನು ಪರಿಗಣಿಸಿ ತೆರಿಗೆ ವಿಧಿಸಿದರೆ ಅದು ಸ್ವಾಗತಾರ್ಹ. ಆದರೆ ಅದನ್ನು ನೋಡದೆಯೇ ಶೇ. 15 ತೆರಿಗೆ ನೀಡಲೇಬೇಕೆಂದರೆ ಅದು ನಮ್ಮಂಥವರಿಗೆ ಕಷ್ಟವಾಗುತ್ತದೆ. ಕರೊನಾ ಸಂಕಷ್ಟದ ಸಮಯದಲ್ಲಿ ಜನರು ಹೆಚ್ಚಾಗಿ ಯೂಟ್ಯೂಬ್ ಬಳಸಿದ್ದಾರೆ. ಕಂಟೆಂಟ್ ಕ್ರಿಯೇಟರ್​ಗಳ ಸಂಖ್ಯೆ ಹೆಚ್ಚಾಗಿದೆ. ಅದನ್ನೇ ಲಾಭವಾಗಿಸಿಕೊಳ್ಳಲು ಹೊರಟ ಯೂಟ್ಯೂಬ್ ಈ ಮಾರ್ಗ ಹುಡುಕಿಕೊಂಡಿದೆ.

    | ಆಕರ್ಷ್ ಕಮಲ ಕಂಟೆಂಟ್ ಕ್ರಿಯೇಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts