More

    ಇದು ವನಿತೆಯರ ಸಮಾಜ; ನಾರಿಯರಿಗೆ ಶಕ್ತಿ ತುಂಬುವ ಕೇಂದ್ರ…

    ಆದರ್ಶ ವನಿತಾ ಸಮಾಜ ಎಂದರೆ ಉತ್ತರ ಕನ್ನಡದ ಶಿರಸಿಯ ನಾರಿಯರಿಗೆ ಶಕ್ತಿ ತುಂಬುವ ಕೇಂದ್ರ. ಸಕ್ರಿಯವಾಗಿ ಸದಾ ಚಲನಶೀಲವಾಗಿರಿಸಿಕೊಳ್ಳಲು ದಾರಿ ತೋರಿದ ಒಂದು ಮಾರ್ಗ. ಹಲವು ವರ್ಷಗಳ ಇತಿಹಾಸವಿರುವ ಆದರ್ಶ ವನಿತಾ ಸಮಾಜದ ಕುರಿತು ಒಂದಿಷ್ಟು ಮಾಹಿತಿ ಕಲೆಹಾಕಿದಾಗ ಸಿಕ್ಕಿದ್ದು ಆಸಕ್ತಿದಾಯಕ ಸಂಘಟನೆಯ ಕತೆ.

    | ಸುಮಾ ಕಂಚೀಪಾಲ್

    ಸಿದ್ದಾಪುರ ತಾಲೂಕು ಕೊರ್ಲಕೈ ಗ್ರಾಮದ ಮಹಿಳೆ ವಾಸಂತಿ 1975ರಲ್ಲೇ ಈ ಮಹಿಳಾ ಸಂಘಟನೆ ಹುಟ್ಟುಹಾಕಲು ಶ್ರಮಿಸಿದವರು. ಶಿರಸಿಯ ಚಿಪಗಿಯ ಸಹ್ಯಾದ್ರಿ ಕಾಲನಿಯಲ್ಲಿ ತಮ್ಮದೇ ಆದ ಒಂದಿಷ್ಟು ಜಾಗಕ್ಕಾಗಿ ಹೋರಾಟಮಾಡಿ ಕಟ್ಟಡ ನಿರ್ಮಾಣ ಮಾಡಿದರು. ಈ ಕಾರ್ಯಕ್ಕೆ ಇವರ ಕುಟುಂಬದ ಸಹಾಯ ಹೆಚ್ಚೇ ಇತ್ತು. ಹದಿನೇಳನೇ ವರ್ಷಕ್ಕೆ ತವರು ಮನೆಬಿಟ್ಟು ಗಂಡನ ಮನೆ ಸೇರಿದ್ದ ವಾಸಂತಿ ಆರ್ಥಿಕವಾಗಿ ಒಂದು ರೂಪಾಯಿ ಕೂಡ ಇಲ್ಲದ ಪೂರ್ವ ಹಂತದಲ್ಲಿ ಮನೆ ಮನೆಗೆ ಎರಡೂವರೆ ವರ್ಷದ ಮಗುವನ್ನು ಕಂಕುಳಲ್ಲಿ ಹೊತ್ತು ಬಿಸಿಲಲ್ಲೇ ತಿರುಗಿ ತಿರುಗಿ ಬೇಕಾಗುವ ಮೊತ್ತ ಸಂಗ್ರಹಿಸಿದರು.

    ಈಗಲೂ ಪ್ರಚಲಿತ: ಮಹಿಳಾ ಸಮಾಜ ನಿರ್ವಣವಾದಾಗ ಮೊದ ಮೊದಲು ಸಭೆ ಸೇರಲು ಕೆಲವರು ಅಂಜುತ್ತಿದ್ದರು. ಸಾಮಾಜಿಕವಾಗಿ ಮಹಿಳೆಯರಿಗೆ ಅಷ್ಟು ಸ್ವಾತಂತ್ರ್ಯವಿಲ್ಲದ ಕಾಲದಲ್ಲಿ ಇವರು ಮಹಿಳಾ ಸಂಘಟನೆ ಮಾಡಿ ಅವರೊಟ್ಟಿಗೆ ಹಲವು ಪರಿಸರ ಚಳವಳಿಯಲ್ಲಿ ಪಾಲ್ಗೊಂಡರು. ಶರಾವತಿ ಅಣೆಕಟ್ಟು, ಗಣಿ, ಕೈಗಾ ಹೀಗೆ ಪರಿಸರದ ಕುರಿತು ಕಾಳಜಿ ತೋರಿದರು. ನಂತರ ಇವರ ಪ್ರಯತ್ನ ನೋಡಿ ರಾಷ್ಟ್ರೀಯ ಉಳಿತಾಯ ಯೋಜನೆ ಮೂಲಕ ಸಹಾಯ ತೊರಕಿತು. ಜಾಗ ದೊರೆತು ಅದರಲ್ಲಿ ಕಟ್ಟಡ ನಿರ್ಮಾಣ ಮಾಡಲಾಯಿತು. ಪ್ರತಿವರ್ಷ ಪ್ರಚಾರ ಮಾಡಿ ಮಹಿಳೆಯರ ಸದಸ್ಯತ್ವ ಮಾಡಿಸಿ ಐನೂರಕ್ಕೂ ಹೆಚ್ಚು ಜನರು ವನಿತಾ ಸಮಾಜವನ್ನು ಸೇರಿವಂತೆ ಮಾಡಿದರು. ಈಗಲೂ ಈ ವನಿತಾ ಸಮಾಜ ಪ್ರಚಲಿತವಾಗಿದ್ದು ಎಷ್ಟೋ ಮಹಿಳೆಯರಿಗೆ ಸಹಾಯಕವಾಗಿದೆ. ಇಪ್ಪತ್ತೆಂಟು ವರ್ಷ ಸಂಸ್ಥಾಪಕ ಅಧ್ಯಕ್ಷರಾಗಿ ವಾಸಂತಿ ಅವರೇ ಕಾರ್ಯನಿರ್ವಹಿಸಿದರು. ನಂತರ ಕಥೆಗಾರ್ತಿ ಭಾಗೀರಥಿ ಹೆಗಡೆ, ಅಹಲ್ಯಾ ಮತ್ತು ಸೀತಾ ಹೆಗಡೆ ಎನ್ನುವವರು ಅಧ್ಯಕ್ಷತೆ ವಹಿಸಿ ಮುಂದುವರಿಸಿಕೊಂಡು ಬಂದಿದ್ದಾರೆ.

    ಸುಮ್ಮನೆ ಕೂರುವ ಜಾಯಮಾನವಲ್ಲ: ಆ ಕಾಲದಲ್ಲೇ ಮೆಟ್ರಿಕ್ ಶಿಕ್ಷಣವನ್ನು ಮುಗಿಸಿದರು. ಮನೆಯಲ್ಲಿ ಸುಮ್ಮನೆ ಕೂರುವ ಬದುಲು ಸದಾ ಕ್ರಿಯಾಶೀಲರಾಗಿ ಕಾರ್ಯೋನ್ಮುಖರಾಗಿರಬೇಕು ಎಂಬ ಹಂಬಲ ಹೆಚ್ಚೇ ಇತ್ತು. ಇದು ವಾಸಂತಿ ಅವರನ್ನು ಮನೆಯಲ್ಲಿ ಕೂರಲು ಬಿಡಲಿಲ್ಲ. ಊರೂರು ತಿರುಗುವುದು, ಕೈಗಾರಿಕೆ, ಕ್ರೋಷಾ, ಕಸೂತಿ, ಅಲಂಕಾರ ವಸ್ತು ತಯಾರಿಕೆ, ಪರಿಸರ ಹೋರಾಟ… ಹೀಗೆ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆ ಮೂಲಕ ಇತರ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಈಗಲೂ ಸಮಾಜಮುಖಿ ಕೆಲಸಗಳು ನಡೆಯುತ್ತಿದ್ದು, ಕರೊನಾ ಸಮಯದಲ್ಲೂ ಮುಂದುವರಿಸಿಕೊಂಡು ಬರಲಾಗಿದೆ.

    ಒಂದೇ ಸೂರಿನಡಿ ಹಲವು ಸೌಲಭ್ಯ: ಹೊಲಿಗೆ, ಶಾರ್ಟ್ ಹ್ಯಾಂಡ್ ಟೈಪಿಂಗ್, ಯೋಗ, ನೃತ್ಯ ಅಭ್ಯಾಸ ಮಾಡಿಸುತ್ತಿದ್ದರು. ಕಟ್ಟಡದ ಬಾಡಿಗೆ ಹಣದಿಂದ ವೆಚ್ಚ ನಿರ್ವಹಣೆ ಮಾಡಿ 2000ದಲ್ಲಿ ಬೆಳ್ಳಿ ಭವನ ಎಂಬ ಹೆಸರಿನಲ್ಲಿ ಸಭಾಭವನ ನಿರ್ವಿುಸಿದರು. ಇಂದಿಗೂ ಇಲ್ಲಿ ನಾಟಕ, ಯಕ್ಷಗಾನ, ಭರತನಾಟ್ಯ, ಭಜನೆ ಮತ್ತು ಸಂಗೀತ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. ಅಡಿಗೆ, ರಂಗೋಲಿ ಸ್ಪರ್ಧೆ, ಸ್ಪೋಕನ್ ಇಂಗ್ಲಿಷ್ ತರಗತಿ, ಬೆಳದಿಂಗಳೂಟ, ಪ್ರಾಣ ಚೈತನ್ಯ ಚಿಕಿತ್ಸೆ, ಸಂಕ್ರಾಂತಿಗೆ ಬಾಗಿನ, ವಾರ್ಷಿಕೋತ್ಸವ ನಡೆಯುತ್ತದೆ. ಸಾಧಕ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ. ಹಾಗೂ ಒಬ್ಬ ಬಡ ವಿದ್ಯಾರ್ಥಿನಿಗೆ ದತ್ತಿ ನಿಧಿ ನೀಡಲಾಗುತ್ತದೆ. ನಿರಂತರವಾಗಿ ಈ ಎಲ್ಲ ಚಟುವಟಿಕೆ ನಡೆದುಕೊಂಡು ಬಂದಿರುವ ಗುಟ್ಟು ಎಂದರೆ ಅದು ಒಗ್ಗಟ್ಟು.

    ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: [email protected]

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts