More

    ಕಲೆಗಳ ಉಳಿವಿಗೆ ಪ್ರೋತ್ಸಾಹ ಅಗತ್ಯ

    ಅಳವಂಡಿ: ಸಂಗೀತ, ನಾಟಕ, ಬಯಲಾಟ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹಿಸಿ ಎಂದು ಮಾಜಿ ಗ್ರಾಪಂ ಅಧ್ಯಕ್ಷ ನಿಂಗರಾಜ ಆವೋಜಿ ಹೇಳಿದರು.

    ಇದನ್ನೂ ಓದಿ: ಕಲೆ ದೈವದತ್ತ, ಅದಕ್ಕೆ ವಯೋಮಿತಿ ಇಲ್ಲ

    ಸಮೀಪದ ಬೋಚನಹಳ್ಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಶ್ರೀಬಸವೇಶ್ವರ ಕೋಲಾಟ ಯುವ ಸಾಂಸ್ಕೃತಿಕ ಸಂಘ(ರಿ) ಬೋಚನಹಳ್ಳಿ ಸಂಯುಕ್ತಾಶ್ರಯದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

    ಒತ್ತಡದ ಜೀವನದಲ್ಲಿ ಮನಸು ಶಾಂತವಾಗಿರಲು ಸಂಗೀತ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಸಾಮಾಜಿಕ ಜಾಲತಾಣ ಬಂದಮೇಲೆ ಯುವಕರು ಕಲೆ ಸಂಸ್ಕೃತಿಯನ್ನು ಮರೆತು ಮೊಬೈಲ್‌ನಲ್ಲಿ ಹೆಚ್ಚಾಗಿ ಕಾಲಹರಣ ಮಾಡುತ್ತಿದ್ದಾರೆ. ತಾಂತ್ರಿಕ ಲೋಕದಿಂದ ಹೋರಬಂದು ಕಲೆಗಳನ್ನು ಉಳಿಸಲು ಪ್ರಯತ್ನಿಸಿ ಎಂದರು.

    ಸುಗಮ ಸಂಗೀತ ಕಲಾವಿದರಾದ ನಾಗನಗೌಡ ಪೊಲೀಸ್‌ಪಾಟೀಲ್, ಅಂಬಿಕಾ ಪೂಜಾರ, ಹಾರ್ಮೋನಿಯಂ ರಾಮಪ್ಪ ಪೂಜಾರ, ತಬಲಾ ರಾಮಚಂದ್ರಪ್ಪ ಹೂವಿನಾಳರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

    ಪ್ರಮುಖರಾದ ಜಗದೀಶ ಚಿನ್ನೂರು, ಸಣ್ಣ ಹನುಮಪ್ಪ ತಂಬ್ರಳ್ಳಿ, ಹನುಮೇಶ ಬೆಟಗೇರಿ, ಹನುಮೇಶ ಆವೋಜಿ, ನಾಗರಾಜ ಜೊಳ್ಳಿ, ಸೋಮಯ್ಯ ಹಿರೇಮಠ, ಗವಿಸಿದ್ದಪ್ಪ ಹೂಗಾರ, ಯಮನೂರಪ್ಪ ಗಂಗಣ್ಣವರ, ಸುರೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts