More

    ಕಲೆ ದೈವದತ್ತ, ಅದಕ್ಕೆ ವಯೋಮಿತಿ ಇಲ್ಲ

    ದಾವಣಗೆರೆ : ಕಲೆ ದೈವದತ್ತವಾಗಿದ್ದು ಅದಕ್ಕೆ ವಯೋಮಿತಿ ಇಲ್ಲ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ್ ಹೇಳಿದರು.
     ನಗರದ ದೃಶ್ಯ ಕಲಾ ಮಹಾವಿದ್ಯಾಲಯದ ದೃಶ್ಯ ವಿಶ್ವ ಕಲಾ ಗ್ಯಾಲರಿಯಲ್ಲಿ ಸೋಮವಾರ ‘ದೃಶ್ಯಾನುಭವ 2023’ ಶೀರ್ಷಿಕೆಯ ಚಿತ್ರಕಲೆ ಮತ್ತು ಅನ್ವಯಿಕ ಕಲಾ ವಿಭಾಗಗಳ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಸಮೂಹ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
     ಕಲಾವಿದ ನಿರಂತರ ಅಭ್ಯಾಸದಲ್ಲಿ ತೊಡಗಬೇಕು, ಅದರಿಂದ ಮಾತ್ರ ಕಲಾ ಪ್ರತಿಭೆ ಪ್ರಬುದ್ಧತೆ ಪಡೆದುಕೊಳ್ಳುತ್ತದೆ. ದಾವಣಗೆರೆ ವಿವಿಯ ದೃಶ್ಯಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭೆ ಅನನ್ಯವಾದುದು. ಕಲಾ ರಚನೆಯನ್ನು ಇಲ್ಲಿಗೇ ಮುಕ್ತಾಯಗೊಳಿಸದೇ ಮುಂದುವರಿಸಬೇಕು. ಅದರ ಮೂಲಕ ಔದ್ಯೋಗಿಕ ಅವಕಾಶಗಳು ದೊರಕುವಂತೆ ಪ್ರಯತ್ನಶೀಲರಾಗಬೇಕು ಎಂದು ಕರೆ ನೀಡಿದರು.
     ಪ್ರಾಚಾರ್ಯ ಡಾ.ಜೈರಾಜ ಚಿಕ್ಕ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ 2023ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಹೊರ ಹೋಗುತ್ತಿರುವ ವಿದ್ಯಾರ್ಥಿಗಳ ಬದ್ಧತೆ, ವಿಧೇಯತೆ, ಸಹಕಾರ ಮನೋಭಾವ ಸ್ಮರಣೀಯವಾದುದು. ಈ ಕಲಾ ಪ್ರದರ್ಶನ ಡಿ. 9ರವರೆಗೆ ಬೆಳಗ್ಗೆ 10.30ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ ಎಂದು ವಿವರಿಸಿದರು.
     ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ರಾಘವೇಂದ್ರ ಪ್ರಸಾದ್, ಡಾ.ರವೀಂದ್ರ ಎಸ್. ಕಮ್ಮಾರ್, ಬೋಧನಾ ಸಹಾಯಕರಾದ ಶಿವಶಂಕರ್ ಸುತಾರ್, ದತ್ತಾತ್ರೇಯ ಎನ್. ಭಟ್ಟ, ಡಾ.ಸಂತೋಷ್ ಕುಮಾರ್ ಕುಲಕರ್ಣಿ, ಡಾ.ಗಿರೀಶ್ ಕುಮಾರ್, ಎಸ್.ಎಚ್. ಹರೀಶ್, ಕೆ.ವಿ.ಪ್ರಮೋದ್, ಡಿ.ಎಚ್. ಸುರೇಶ್, ರಂಗನಾಥ್ ಕುಲಕರ್ಣಿ, ನವೀನ್ ಕುಮಾರ್, ಅರುಣ್ ಕಮ್ಮಾರ್, ನಂದಕುಮಾರ್, ಶಿವಕುಮಾರ್ ಅಜಗಣ್ಣವರ್, ರೇವಣಸಿದ್ದಪ್ಪ, ಮಹಾಲಿಂಗಪ್ಪ ಇತರರು ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts