More

    ಸಂಗೀತ-ನೃತ್ಯ ಅಭ್ಯಾಸದಿಂದ ಮಾನಸಿಕ ದೃಢತೆ, ಜೀವನಶ್ರದ್ಧೆ ಹೆಚ್ಚಳ; ಕಲೆಗಳೂ ಕಲಿಕೆಯ ಅಂಗವಾಗಲಿ: ಎಚ್​ಎಸ್​​ವಿ

    ಬೆಂಗಳೂರು: ಶಿಕ್ಷಣದೊಂದಿಗೆ ಸಂಗೀತ, ನೃತ್ಯದಂತಹ ಕಲೆಗಳನ್ನು ಅಭ್ಯಾಸ ಮಾಡುವುದರಿಂದ ಮಾನಸಿಕ ದೃಢತೆ ಮತ್ತು ಜೀವನಶ್ರದ್ಧೆ ಹೆಚ್ಚುತ್ತದೆ ಎಂದು ಖ್ಯಾತ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

    ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಕು.ಹಿತಾರೆಡ್ಡಿ ಅವರ ರಂಗಪ್ರವೇಶ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಈ ಅಭಿಪ್ರಾಯ ವ್ಯಕ್ತಪಡಿಸಿದರು.

    ಸುಮಾರು ಎರಡೂವರೆ ತಾಸುಗಳ ನೃತ್ಯ ಪ್ರದರ್ಶನ ಅಪೂರ್ವವಾಗಿತ್ತು. ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಹಿತಾ ನೃತ್ಯದಲ್ಲಿ ಸಾಧಿಸಿರುವ ಪರಿಣತಿ ವಿಶೇಷವಾಗಿದೆ. ಇದಕ್ಕೆ ಕಾರಣರಾಗಿರುವ ಅವರ ಗುರು ಪೂರ್ಣಿಮಾ ಕೆ. ಗುರುರಾಜ ಅವರು ಅಭಿನಂದನಾರ್ಹರು ಎಂದರು.

    ಸಂಗೀತ-ನೃತ್ಯ ಅಭ್ಯಾಸದಿಂದ ಮಾನಸಿಕ ದೃಢತೆ, ಜೀವನಶ್ರದ್ಧೆ ಹೆಚ್ಚಳ; ಕಲೆಗಳೂ ಕಲಿಕೆಯ ಅಂಗವಾಗಲಿ: ಎಚ್​ಎಸ್​​ವಿ

    ಖಾತ್ಯ ನೃತ್ಯ ಗುರು ವೀಣಾಮೂರ್ತಿ, ಲೇಖಕಿ ಡಾ.ಅನುಪಮಾ ಕೈಲಾಶ್, ಯಕ್ಷಗಾನ ವಿದ್ವಾಂಸ ಡಾ. ಆನಂದರಾಮ ಉಪಾಧ್ಯ, ಸಂಗೀತ ಶಿಕ್ಷಕಿ ಪ್ರೇಮಾ ಉಪಾಧ್ಯ ಕೂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಟುವಾಂಗದಲ್ಲಿ ವಿದ್ವಾನ್ ಶ್ರೀವತ್ಸ, ವಿದ್ವಾನ್ ಮಹೇಶ್ವರಯ್ಯ, ವಿದ್ವಾನ್ ಲಿಂಗರಾಜು, ವಿದ್ವಾನ್ ಪರೇಶ್ ಆಚಾರ್ ಅವರಿದ್ದು, ನೃತ್ಯ ಕಳೆಗಟ್ಟಲು ಕಾರಣರಾದರು. ಹಿತಾ ಪಾಲಕರಾದ ಡಾ.ರವೀಂದ್ರನಾಥ ರೆಡ್ಡಿ ಹಾಗೂ ಮಂಜುಳಾ ಗೌರವ ಸಲ್ಲಿಸಿದರು.

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ರಾತ್ರಿ ಇಡೀ ಆಟ ಬೇಕೇ?; ಕಾಲಮಿತಿ ಯಕ್ಷಗಾನ ಸಾಕೇ?

    ಫೇಸ್​ಬುಕ್​ನಲ್ಲೇನಿದು ಒಳಗೊಂದು, ಹೊರಗೊಂದು?!; ಆಗಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts