More

    ಕರಸೇವಕನ ಬಂಧನ ಸರಿಯಲ್ಲ

    ಭದ್ರಾವತಿ: ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಜೆ ನಗರದ ಮಾಧವಾಚಾರ್ ವೃತ್ತದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
    ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಕರಸೇವಕನನ್ನು ಬಂಽಸಲಾಗಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನಾವೂ ಸಂಭ್ರಮಾಚರಣೆ ಮಾಡಿದ್ದೇವೆ. ನಮ್ಮ ಮೇಲೂ ಅಂದು ಕೇಸು ದಾಖಲಿಸಲಾಗಿದೆ. ನಮ್ಮನ್ನೂ ಬಂಽಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
    ಸರ್ಕಾರ ಪಿಎಫ್‌ಐ-ಎಸ್‌ಡಿಪಿಐ ಸಂಘಟನೆಗಳು ಮೇಲಿನ ಕೇಸುಗಳನ್ನು ವಾಪಸ್ ಪಡೆದು ಹಿಂದು ಸಂಘಟನೆಗಳ ಮೇಲಿನ ಕೇಸುಗಳನ್ನು ತೆರೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯ, ಹರಿಪ್ರಸಾದ್ ಪ್ರಚೋದನಾತ್ಮನಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದೇ ಹೇಳಿಕೆಗಳನ್ನು ಬೇರೆ ಪಕ್ಷದ ಸಂಘಟನೆಗಳ ಮುಖಂಡರು ಕೊಟ್ಟರೆ ಅವರನ್ನು ಬಂಽಸುತ್ತಾರೆ ಎಂದು ದೂರಿದರು.
    ವಿಶ್ವ ಹಿಂದು ಪರಿಷತ್ ಪ್ರಾಂತೀಯ ಉಪಾಧ್ಯಕ್ಷ ಹಾ.ರಾಮಪ್ಪ, ಬಿಜೆಪಿ ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಕೆ.ಎನ್.ಶ್ರೀಹರ್ಷ, ಕದಿರೇಶ್, ಬಿ.ಕೆ.ಶ್ರೀನಾಥ್, ಸುರೇಶಪ್ಪ, ಚನ್ನೇಶ್, ಮಂಜುನಾಥ್ ರಾವ್, ಸಿಮೆಂಟ್ ಮಂಜಣ್ಣ, ಎಂ.ಪ್ರಭಾಕರ್, ಗೋಕುಲ್ ಕೃಷ್ಣ, ಧನುಷ್, ಯಶೋದಾ, ರೇಖಾ, ಲತಾ, ಮಂಜುಳಾ, ಶಕುಂತಲಾ, ಅನ್ನಪೂರ್ಣಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts