More

    ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ

    ಮುಂಬೈ: ಎರಡು ವರ್ಷ ಹಳೆಯ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ ಅವರನ್ನು ಬುಧವಾರ ಬಂಧಿಸಿದ್ದಾರೆ. ಗೋಸ್ವಾಮಿ ವಿರುದ್ಧ 53 ವರ್ಷದ ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ ಮಾಡಲು ಪ್ರಚೋದಿಸಿದ ಆರೋಪವನ್ನು ಪೊಲೀಸರು ಹೊರಿಸಿದ್ದಾರೆ.

    ಇಂದು ಬೆಳಗ್ಗೆಯೇ ಗೋಸ್ವಾಮಿ ನಿವಾಸಕ್ಕೆ ತೆರಳಿದ್ದ ಆಲಿಬಾಗ್​ ಪೊಲೀಸರ ತಂಡ, ಅರ್ನಬ್ ಗೋಸ್ವಾಮಿ ಅವರನ್ನು ತಳ್ಳಿಕೊಂಡು ಪೊಲೀಸ್​ ವ್ಯಾನ್​ಗೆ ಏರಿಸುತ್ತಿದ್ದ ದೃಶ್ಯ ಕಂಡಬಂದಿತ್ತು. ಪೊಲೀಸರು ಹಲ್ಲೆ ನಡೆಸಿದ್ದಾಗಿ ಗೋಸ್ವಾಮಿ ಆರೋಪಿಸಿದ್ದು, ರಿಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿದೆ.

    ಇದನ್ನೂ ಓದಿ: ಶೇ. 53 ಮತದಾನ ದಾಖಲು: ಬಿಹಾರದ 2ನೇ ಹಂತದ ಚುನಾವಾಣೆ, ಕಣದಲ್ಲಿ ಪ್ರತಿಷ್ಠಿತರು

    ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮರು ತನಿಖೆ ಆಗ್ರಹಿಸಿ ಅನ್ವಯ್ ನಾಯ್ಕ್ ಅವರ ಪುತ್ರಿ ಅದ್ನ್ಯಾ ನಾಯ್ಕ್​ ಹೊಸದಾಗಿ ನೀಡಿದ ದೂರನ್ನು ಆಧರಿಸಿ ಈ ವರ್ಷ ಮೇ ತಿಂಗಳಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮರು ತನಿಖೆಗೆ ಆದೇಶ ನೀಡಿದ್ದರು. ದೂರಿನಲ್ಲಿ ಅವರು, ಬಾಕಿ ಪಾವತಿ ವಸೂಲಿ ಮಾಡಿಕೊಡಲು ನೆರವಾಗುವಂತೆ ಅಲಿಬಾಗ್​ ಪೊಲೀಸರಿಗೆ ದೂರು ನೀಡಿದರೂ ಅವರು ಗೋಸ್ವಾಮಿ ಚಾನೆಲ್​ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಇದೇ ಕಾರಣಕ್ಕೆ ತನ್ನ ತಂದೆ ಮತ್ತು ಅಜ್ಜಿ 2018ರ ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು ಎಂದು ಆರೋಪಿಸಿದ್ದರು. (ಏಜೆನ್ಸೀಸ್)

    ತುರ್ತುಪರಿಸ್ಥಿತಿಯನ್ನು ನೆನಪಿಸುವಂತಿದೆ ಗೋಸ್ವಾಮಿ ಬಂಧನ: ಕೇಂದ್ರ ಸಚಿವ ಜಾವಡೇಕರ್

    ಹಾಸನ ಹೊರವಲಯದಲ್ಲಿ ಮೊಳಗಿತು ಗುಂಡಿನ ಸದ್ದು​ : ಪಿಎಸ್​ಐ ಮೇಲೆ ಹಲ್ಲೆ ನಡೆಸಿದ ರೌಡಿ ಶೀಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts