More

    ಕರ್ನಾಟಕದ ವಿವಿಧ ಜಿಲ್ಲಾ ಅಭ್ಯರ್ಥಿಗಳಿಗೆ ಸೆಪ್ಟೆಂಬರ್​ನಲ್ಲಿ ಸೇನಾ ನೇಮಕಾತಿ ರ್ಯಾಲಿ- ನೋಂದಣಿ ಕಡ್ಡಾಯ

    ಬೆಂಗಳೂರು: ಸೇನಾ ನೇಮಕಾತಿ ರ್ಯಾಲಿ ಸೆಪ್ಟೆಂಬರ್ 19 ರಿಂದ ಮಾರ್ಚ್ 31 ರವರೆಗೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆನ್​ಲೈನ್ ನೋಂದಣಿ ಮಾಡಬಹುದಾಗಿದೆ.
    ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟ್ರೇಡ್ಸ್ ಮನ್ – 10 ನೇ ತರಗತಿ ಪಾಸ್, 8 ನೇ ತರಗತಿ ಪಾಸ್, ಸೋಲ್ಜರ್ ಕ್ಲರ್ಕ್​/ ಸ್ಟೋರ್​ಕೀಪರ್ ಟೆಕ್ನಿಕಲ್/ ಇನ್ವೆಂಟರಿ ಮ್ಯಾನೇಜ್​ಮೆಂಟ್ ಮತ್ತು ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್ / ನರ್ಸಿಂಗ್ ಅಸಿಸ್ಟೆನ್ಸ್ ವೆಟರಿನರಿ ಹುದ್ದೆಗಳಿಗೆ ಈ ರ್ಯಾಲಿ ನಡೆಯಲಿದೆ.

    ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ. ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಜಿಲ್ಲೆಗಳ ಅರ್ಹ ಪುರುಷ ಅಭ್ಯರ್ಥಿಗಳಿಗೆ ಈ ರ್ಯಾಲಿ ಸೆಪ್ಟೆಂಬರ್ 19 ಮತ್ತು ಮಾರ್ಚ್​​ 31ರ ಅವಧಿಯಲ್ಲಿ ನಡೆಯಲಿದೆ.

    ಇದನ್ನೂ ಓದಿ:  ಪ್ರಧಾನಿ ಮೋದಿ ಕೋವಿಡ್​​19 ನ್ನು ಸಮರ್ಥವಾಗಿ ನಿಭಾಯಿಸಿ ಉನ್ನತ ಮಟ್ಟದ ರಾಜಕೀಯ ಬದ್ಧತೆ ಮೆರೆದಿದ್ದಾರೆ: ಕೇಂದ್ರ ಸಚಿವ ಹರ್ಷವರ್ಧನ್

    ಆನ್​ಲೈನ್ ನೋಂದಣಿ ಕಡ್ಡಾಯವಾಗಿದ್ದು, ಜುಲೈ 24 ರಿಂದ ಸೆಪ್ಟೆಂಬರ್ 6 ವರೆಗೆ ನೋಂದಣಿ ಮಾಡಲು ಅವಕಾಶವಿದೆ. ರ್ಯಾಲಿ ನಡೆಯುವ 15 ದಿನ ಮುಂಚಿತವಾಗಿ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಅಡ್ಮಿಟ್ ಕಾರ್ಡ್ ನೀಡಲಾಗುತ್ತದೆ. ಅದರಲ್ಲಿರುವ ಮಾಹಿತಿ ಪ್ರಕಾರ ನಿಗದಿತ ದಿನಾಂಕ, ಸಮಯ, ಸ್ಥಳಕ್ಕೆ ರ್ಯಾಲಿಗೆ ಹಾಜರಾಗಬೇಕು. ಈ ಸಮಯದಲ್ಲಿ ಅರ್ಜಿ ಸಲ್ಲಿಕೆ ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ https://bit.ly/3jB64Nw ಅಥವಾ https://joinindianarmy.nic.in/ ನೋಡಬಹುದು.

    ದಂಡ ಕಟ್ಟಲು ದುಡ್ಡಿಲ್ಲ- ಕಟ್ಟದಿದ್ರೆ ಭಾರತಕ್ಕೆ ಬಿಡಲ್ಲ: ದುಬೈನಲ್ಲಿ ಕಾರ್ಮಿಕರು ವಿಲವಿಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts