More

    ಪ್ರಧಾನಿ ಮೋದಿ ಕೋವಿಡ್​​19 ನ್ನು ಸಮರ್ಥವಾಗಿ ನಿಭಾಯಿಸಿ ಉನ್ನತ ಮಟ್ಟದ ರಾಜಕೀಯ ಬದ್ಧತೆ ಮೆರೆದಿದ್ದಾರೆ: ಕೇಂದ್ರ ಸಚಿವ ಹರ್ಷವರ್ಧನ್

    ನವದೆಹಲಿ: ಕೋವಿಡ್ 19 ನಿಯಂತ್ರಿಸುವಲ್ಲಿ ಪ್ರಧಾನಿ ಮೋದಿಯವರು ಸಕ್ರಿಯವಾಗಿ, ಜವಾಬ್ದಾರಿಯುತವಾಗಿ ಹಾಗೂ ವೈಯಕ್ತಿಕ ಮೇಲ್ವಿಚಾರಣೆ ನಡೆಸಿ ವ್ಯವಸ್ಥಿತ ಕಾರ್ಯ ನಿರ್ವಹಿಸಿದ್ದಾರೆ. ಆ ಮೂಲಕ ಭಾರತ ಉನ್ನತ ಮಟ್ಟದ ರಾಜಕೀಯ ಬದ್ಧತೆಯೊಂದಿಗೆ ಕೋವಿಡ್ 19 ಸವಾಲನ್ನು ಯಶಸ್ವಿಯಾಗಿ ನಿಯಂತ್ರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಿ. ಹರ್ಷವರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ)ಯ ಆರೋಗ್ಯ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಜಗತ್ತು ಹಿಂದೆಂದೂ ಕಂಡು ಕೇಳರಿಯದ ದುರಂತವನ್ನು ಇಂದು ಎದುರಿಸುತ್ತಿದೆ. ಕೋವಿಡ್ 19 ಇಡೀ ಭೂಗ್ರಹದ ಮೇಲೆ ಪರಿಣಾಮ ಬೀರಿದೆ. ದೇಶದಲ್ಲಿ ಇದುವರೆಗೆ 1. 25 ಮಿಲಿಯನ್ ಪ್ರಕರಣಗಳು ಕಂಡುಬಂದಿದ್ದು, ಮತ್ತು 30,000 ಕ್ಕೂ ಹೆಚ್ಚು ಸಾವು ಪ್ರಕರಣಗಳು ವರದಿಯಾಗಿವೆ ಎಂದು ಭಾರತದ ಸ್ಥಿತಿಗತಿ ವಿವರಿಸಿದರು.
    ಭಾರತದಲ್ಲಿ ಒಂದು ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಪ್ರಕರಣಗಳು ಮತ್ತು ಸಾವು ಸಂಭವಿಸಿವೆ. ಭಾರತದಲ್ಲಿ ಚೇತರಿಕೆಯ ಪ್ರಮಾಣವು ಶೇ 63.45 ರಷ್ಟಿದ್ದು, ಮರಣ ಪ್ರಮಾಣವು ಜಗತ್ತಿನ ಶೇ.2.3 ರಷ್ಟು (ಅತಿ ಕಡಿಮೆ) ಕಂಡುಬಂದಿದೆ” ಎಂದು ಅವರು ಹೇಳಿದರು.

    ಇದನ್ನೂ ಓದಿ: ಇಂದೂ ಐದು ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ; ಶತಕ ಮೀರಿದ ಕೋವಿಡ್​ ಸಾವು

    ವಿಶ್ವ ಆರೋಗ್ಯ ಸಂಸ್ಥೆ (WHO) ಕರೊನಾವೈರಸ್​​ನ್ನು ಅಂತಾರಾಷ್ಟ್ರೀಯ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವುದಕ್ಕಿಂತ ಸಾಕಷ್ಟು ಮುಂಚೆಯೇ ಭಾರತ ಈ ವೈರಸ್ ನಿಯಂತ್ರಿಸುವಲ್ಲಿ ಸಾಕಷ್ಟು ಸಿದ್ಧತೆ ಕೈಗೊಂಡಿತ್ತು ಎಂದು ಅವರು ತಿಳಿಸಿದರು.
    ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು “ದಿಟ್ಟ ಹೆಜ್ಜೆ” ಎಂದು ಕರೆದ ಅವರು, ಸತತ ಮೂರು ಲಾಕ್‌ಡೌನ್‌ಗಳು ತಾಂತ್ರಿಕ ಜ್ಞಾನ, ಪ್ರಯೋಗಾಲಯದ ಸಾಮರ್ಥ್ಯಗಳು ಮತ್ತು ಆಸ್ಪತ್ರೆಯ ಮೂಲಸೌಕರ್ಯಗಳನ್ನು ನಿರ್ಮಿಸಲು ದೇಶಕ್ಕೆ ಅಗತ್ಯವಾದ ಸಮಯ ಮತ್ತು ಅವಕಾಶವನ್ನು ಒದಗಿಸಿದೆ ಎಂದು ಹೇಳಿದರು.
    ಭಾರತವು 15,000 ಕ್ಕೂ ಹೆಚ್ಚು COVID-19 ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದ್ದು, ಒಟ್ಟು 1.4 ದಶಲಕ್ಷ ಐಸೋಲೇಷನ್ ಹಾಸಿಗೆಯ ಸಾಮರ್ಥ್ಯವನ್ನು ಹೊಂದಿದೆ ಎಂದರು.

    ಇದನ್ನೂ ಓದಿ: ದಂಡ ಕಟ್ಟಲು ದುಡ್ಡಿಲ್ಲ- ಕಟ್ಟದಿದ್ರೆ ಭಾರತಕ್ಕೆ ಬಿಡಲ್ಲ: ದುಬೈನಲ್ಲಿ ಕಾರ್ಮಿಕರು ವಿಲವಿಲ

    “ನಾವು ನಮ್ಮ ಕೈಲಾದಷ್ಟು ಮಾಡಿದ್ದೇವೆ ಮತ್ತು ನಾವು ಉತ್ತಮವಾಗಿ ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಭವಿಷ್ಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ, ”ಎಂದು ಅವರು ಹೇಳಿದರು.
    ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಭಾರತೀಯ ಸಾಂಪ್ರದಾಯಿಕ ಔಷಧದ ಪದ್ಧತಿಯನ್ನು ಶ್ಲಾಘಿಸಿದರಲ್ಲದೆ ಸಾಂಪ್ರದಾಯಿಕ ಔಷಧದ ಬಗ್ಗೆ ಪ್ರತ್ಯೇಕ ಉಪಗುಂಪು ಸ್ಥಾಪಿಸಲು ಎಲ್ಲಾ ಸದಸ್ಯ ರಾಷ್ಟ್ರಗಳ ಬೆಂಬಲವನ್ನು ಕೋರಿದರು.
    ಭಾರತದಲ್ಲಿ ಒಂದೇ ದಿನಕ್ಕೆ 49,310 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 12,87,945 ಕ್ಕೆ ತಲುಪಿದೆ ಮತ್ತು ಚೇತರಿಕೆ ಪ್ರಮಾಣ 8,17,208 ಕ್ಕೆ ಏರಿದೆ.

    ರಾಷ್ಟ್ರವಿರೋಧಿ ಮತ್ತು ಧರ್ಮನಿಂದನೆಯ ಪಠ್ಯಕ್ರಮವಿರುವ ಪುಸ್ತಕಗಳನ್ನು ನಿಷೇಧಿಸಿದ ಪಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts