More

    ದಂಡ ಕಟ್ಟಲು ದುಡ್ಡಿಲ್ಲ- ಕಟ್ಟದಿದ್ರೆ ಭಾರತಕ್ಕೆ ಬಿಡಲ್ಲ: ದುಬೈನಲ್ಲಿ ಕಾರ್ಮಿಕರು ವಿಲವಿಲ

    ದುಬೈ: ಉದ್ಯೋಗ ಅರಸಿ ದುಬೈಗೆ ಹೋಗಿದ್ದ ರಾಜಸ್ಥಾನದ ಕಾರ್ಮಿಕರು ಇದೀಗ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೀಸಾ ಅವಧಿ ಮುಗಿದರೂ ದುಬೈನಲ್ಲಿಯೇ ಉಳಿದುಕೊಂಡಿರುವ ಇವರು ಇದೀಗ ಭಾರತಕ್ಕೆ ಬರಲಾಗದೆ ವಿಲವಿಲ ಒದ್ದಾಡುವಂತಾಗಿದೆ.

    ಸೀಮಿತ ಅವಧಿಯ ವೀಸಾ ಪಡೆದು ದುಬೈಗೆ ಹೋಗಿರುವ ಕಾರ್ಮಿಕರು ಆ ಅವಧಿ ಮುಗಿದ ತಕ್ಷಣ ವಾಪಸ್‌ ತವರಿಗೆ ಮರಳಬೇಕು. ಆದರೆ ಈ ಕಾರ್ಮಿಕರು ಅಲ್ಲಿಯೇ ಉಳಿದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ದಂಡ ವಿಧಿಸಲಾಗಿದೆ. ಅದನ್ನು ಪಾವತಿಸಲು ಸಾಧ್ಯವಾಗದವರಿಗೆ ಭಾರತಕ್ಕೆ ಮರಳುವ ಅವಕಾಶವನ್ನು ದುಬೈ ಸರ್ಕಾರ ನಿರಾಕರಿಸಿದೆ.

    ವಿಶೇಷ ವಿಮಾನದ ಮೂಲಕ ಜೈಪುರಕ್ಕೆ ಮರಳಲು ಜುಲೈ 17 ರಂದು 40 ಕಾರ್ಮಿಕರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರಲ್ಲಿ ಹತ್ತು ಮಂದಿ ಮಾತ್ರವೇ ದಂಡವನ್ನು ಪಾವತಿಸಿ ದೇಶಕ್ಕೆ ಮರಳಿದ್ದಾರೆ. ಉಳಿದವರ ಬಳಿ ಹಣವಿಲ್ಲದೇ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ.

    ಇದನ್ನೂ ಓದಿ: ಕರೊನಾ ಸಂಕಷ್ಟ; ದೆಹಲಿ, ಅಹಮದಾಬಾದ್​, ದೆಹಲಿಯಿಂದ ಬರುತ್ತಿದೆ ಶುಭಸುದ್ದಿ; ಏನದು?

    ‘ನಮಗೆ ದಂಡ ಪಾವತಿ ಮಾಡಬೇಕೆಂಬ ಮಾಹಿತಿ ಇರಲಿಲ್ಲ. 2 ಲಕ್ಷದವರೆಗೂ ದಂಡ ವಿಧಿಸಲಾಗಿದೆ. ಇಷ್ಟು ದೊಡ್ಡ ಮೊತ್ತ ನಮ್ಮ ಬಳಿ ಇಲ್ಲ’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

    ನಾಲ್ಕು ದಿನಗಳಿಂದ ಕಾರ್ಮಿಕರು ವಿಮಾನ ನಿಲ್ದಾಣದಲ್ಲಿಯೇ ನೆಲೆಸಿದ್ದ ಕಾರ್ಮಿಕರ ನೆರವಿಗೆ ಸದ್ಯ ದುಬೈನಲ್ಲಿನ ಭಾರತೀಯ ರಾಯಭಾರಿ ಕಚೇರಿ ಬಂದಿದೆ. ಈ ಕಾರ್ಮಿಕರಿಗೆ ಸದ್ಯ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಆದರೆ ದಂಡದ ವಿವಾದ ಇನ್ನೂ ಬಗೆಹರಿದಿಲ್ಲ.

    ಈ ಕಾರ್ಮಿಕರಿಗೆ ಜುಲೈ 27 ರಂದು ಭಾರತಕ್ಕೆ ಮರಳಲು ಮತ್ತೊಂದು ವಿಶೇಷ ವಿಮಾನದಲ್ಲಿ ಟಿಕೆಟ್‌ ಕಾಯ್ದಿರಿಸಲಾಗಿದ್ದು, ಅಲ್ಲಿಯವರೆಗೆ ಪರಿಸ್ಥಿತಿ ಏನಾಗುವುದೋ ಎಂದು ಕಾದುನೋಡಬೇಕಿದೆ.

    ಮೂರು ವರ್ಷದ ಬಾಲಕಿಯ ಅತ್ಯಾಚಾರ ಮಾಡಿ ಕೊಂದು ಎಸೆದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts