More

    ಕರ್ನಲ್​ ಮತ್ತು ನಾಲ್ಕು ಸೈನಿಕರ ಹತ್ಯೆ; ಉಗ್ರರ ದಾಳಿಗೆ ಸೇನಾಧಿಕಾರಿಯ ಪತ್ನಿ-ಪುತ್ರ ಕೂಡ ಬಲಿ

    ಇಂಫಾಲ್​​: ಮಣಿಪುರದಲ್ಲಿ ಭಾರತೀಯ ಸೇನೆಯ ಕಾನ್ವಾಯ್​ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಅಸ್ಸಾಂ ರೈಫಲ್ಸ್​​ನ ಕರ್ನಲ್​​ ಮತ್ತು ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. ಮೃತ ಕರ್ನಲ್​ ವಿಪ್ಲವ್​ ತ್ರಿಪಾಠಿಯೊಂದಿಗೆ ಪ್ರಯಾಣಿಸುತ್ತಿದ್ದ ಅವರ ಪತ್ನಿ ಮತ್ತು ಪುತ್ರ ಕೂಡ ಈ ಘಟನೆಯಲ್ಲಿ ಸಾವಪ್ಪಿದ್ದಾರೆ.

    ಅಸ್ಸಾಂ ರೈಫಲ್ಸ್​​ನ ಕಮಾಂಡಿಂಗ್ ಅಧಿಕಾರಿಯಾದ ಕರ್ನಲ್​ ವಿಪ್ಲವ್​ ತ್ರಿಪಾಠಿ ಅವರು ಇಂದು ಬೆಳಿಗ್ಗೆ ರಾಜ್ಯದ ಚೂರಚಂದ್​ಪುರ್​​ ಜಿಲ್ಲೆಯ ಸಿಂಘತ್​ ಉಪವಿಭಾಗದಲ್ಲಿನ ನಾಗರಿಕಾ ಕ್ರಿಯಾ ಯೋಜನೆಯ ಮೇಲ್ವಿಚಾರಣೆ ಮಾಡಿ ಹೆಡ್​​ ಕ್ವಾರ್ಟರ್ಸ್​​ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಉಗ್ರರ ಗುಂಪೊಂದು ಇಂದು(ನ.13) ಬೆಳಿಗ್ಗೆ 10 ಗಂಟೆ ವೇಳೆಗೆ ಸೇನೆಯ ಕಾನ್ವಾಯ್​ ಮೇಲೆ ಐಇಡಿ ಬ್ಲಾಸ್ಟ್​ ಮಾಡಿ ಗುಂಡು ಹಾರಿಸಿತು ಎನ್ನಲಾಗಿದೆ.

    ಇದನ್ನೂ ಓದಿ: ಕೈ ಪಕ್ಷದಿಂದ ಮತ್ತೊಂದು ಕಪಾಳಮೋಕ್ಷ; ಸಿದ್ದರಾಮಯ್ಯ ಅಭಿಮಾನಿಯ ಕೆನ್ನೆಗೆ ಬಾರಿಸಿದ ಮಾಜಿ ಸಚಿವ…

    ತಮ್ಮ ಪತ್ನಿ-ಪುತ್ರನ ಜೊತೆ ತೆರಳಿದ್ದ ತ್ರಿಪಾಠಿ ಜೊತೆಗಿದ್ದ ಮೂವರು ಪಾರಾ ಮಿಲಿಟರಿ ಸೈನಿಕರು ಮೃತಪಟ್ಟರು. ಅವರ ವಾಹನದ ಚಾಲಕ ಕೂಡ ಕೊಲ್ಲಲ್ಪಟ್ಟಿದ್ದು, ಉಗ್ರರು ಒಟ್ಟು ಏಳು ಜನರನ್ನು ಬಲಿ ಪಡೆದಿದ್ದಾರೆ. ಯಾವುದೇ ಉಗ್ರ ಸಂಘಟನೆಯು ಈ ಅಟ್ಯಾಕ್​ನ ಜವಾಬ್ದಾರಿ ತೆಗೆದುಕೊಂಡಿಲ್ಲ. ಆದರೆ, ಮಣಿಪುರದ ಪೀಪಲ್ಸ್​ ಲಿಬರೇಷನ್​ ಆರ್ಮಿ ಈ ದಾಳಿಯ ಹಿಂದಿದೆ ಎಂದು ಶಂಕಿಸಲಾಗಿದೆ.

    ಕರ್ನಲ್​ ಮತ್ತು ನಾಲ್ಕು ಸೈನಿಕರ ಹತ್ಯೆ; ಉಗ್ರರ ದಾಳಿಗೆ ಸೇನಾಧಿಕಾರಿಯ ಪತ್ನಿ-ಪುತ್ರ ಕೂಡ ಬಲಿ
    ಕರ್ನಲ್​ ವಿಪ್ಲವ್​ ತ್ರಿಪಾಠಿ, ಪತ್ನಿ ಮತ್ತು ಪುತ್ರ

    ಮಣಿಪುರ ಸಿಎಂ ಎನ್​.ಬೀರೆನ್​ ಸಿಂಗ್​ ಪ್ರತಿಕ್ರಿಯಿಸಿದ್ದು, “ಈ ಹೇಡಿತನದ ಹಲ್ಲೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯ ಪೊಲೀಸರು ಮತ್ತು ಪಾರಾಮಿಲಿಟರಿ ಪಡೆಗಳು ಆ ಉಗ್ರವಾದಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕೂಡ ಈ ದಾಳಿಯನ್ನು ಖಂಡಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್)

    1947ರಲ್ಲಿ ಯಾವ ಯುದ್ಧ ನಡೆಯಿತು ಹೇಳಿದರೆ, ಪದ್ಮಶ್ರೀ ವಾಪಸ್​ ಕೊಡುವೆ ಎಂದ ಕಂಗನಾ

    ಪರಿಹಾರದ ಹಣಕ್ಕಾಗಿ ಕಲಹ: ಪಾಲು ಕೊಡದ ಬಾಮೈದನ ಇರಿದು ಕೊಂದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts