More

    ಚೀನಾ ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ 5 ಸುತ್ತಿನ ಮಾತುಕತೆ ವಿಫಲ, ಉದ್ವಿಗ್ನ ಸ್ಥಿತಿ

    ನವದೆಹಲಿ: ಚೀನಾಕ್ಕೆ ಹೊಂದಿಕೊಂಡಿರುವ ವಾಸ್ತವ ಗಡಿರೇಖೆಯಲ್ಲಿ ಲೇಹ್​ನಿಂದ ಲಡಾಖ್​ವರೆಗೆ 4 ಕಡೆಗಳಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಜಟಾಪಟಿ ಸಂಭವಿಸುತ್ತಲೇ ಇದೆ. ಈ ಜಟಾಪಟಿಯನ್ನು ಕೊನೆಗೊಳಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಸೇನಾಧಿಕಾರಿಗಳು 5 ಸುತ್ತಿನ ಮಾತುಕತೆ ನಡೆಸಿದ್ದರೂ ಅವೆಲ್ಲವೂ ವಿಫಲವಾಗಿವೆ ಎನ್ನಲಾಗಿದೆ. ಇದರಿಂದಾಗಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.

    ಈ ಹಿನ್ನೆಲೆಯಲ್ಲಿ ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರ್ವಾನೆ ಶುಕ್ರವಾರ ಲೇಹ್​ಗೆ ದಿಢೀರ್​ ಭೇಟಿ ನೀಡಿ, ಲಡಾಖ್​ನ 14 ಕೋರ್​ನ ಪ್ರಧಾನ ಕೇಂದ್ರಕ್ಕೆ ಭೇಟಿ ನೀಡಿದ್ದರು. ವಾಸ್ತವ ಗಡಿರೇಖೆಯಲ್ಲಿ ಇರುವ ವಿವಾದಾತ್ಮಕ ಸ್ಥಳಗಳಲ್ಲಿನ ಕಾರ್ಯಾಚರಣೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಅಂದಾಜು ಅರ್ಧ ದಿನ ಅಲ್ಲಿದ್ದ ಅವರು 14 ಕೋರ್​ನ ಮುಖ್ಯಸ್ಥರ ಜತೆಗೆ ವಿಸ್ತೃತ ಮಾತುಕತೆ ನಡೆಸಿದರು ಎನ್ನಲಾಗಿದೆ.

    ಇದನ್ನೂ ಓದಿ: ಪಾಕ್​ ವಿಮಾನ ಅಪಘಾತದಲ್ಲಿ ಬದುಕುಳಿದವನಿಗೆ ಇದೆ ಭಾರತದ ಕನೆಕ್ಷನ್​!

    ಸಾಮಾನ್ಯವಾಗಿ ಲೇಹ್​ ಮತ್ತು ಲಡಾಖ್​ ಪ್ರದೇಶಗಳಿಗೆ ಸೇನಾಪಡೆ ಮುಖ್ಯಸ್ಥರು ಭೇಟಿ ಕೊಡುತ್ತಾರೆ ಎಂದರೆ ಆ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿರುತ್ತದೆ. ಆದರೆ, ಈ ಬಾರಿ ಜನರಲ್​ ಎಂ.ಎಂ. ನರ್ವಾನೆ ಅವರ ದಿಢೀರ್​ ಭೇಟಿ ಅಚ್ಚರಿಗೆ ಕಾರಣವಾಗಿದೆ. ಉತ್ತರ ಕಮಾಂಡ್​ನ ಮುಖ್ಯಸ್ಥ ಲೆಫ್ಟಿನೆಂಟ್​ ಜನರಲ್​ ವೈ.ಕೆ. ಜೋಶಿ ಅವರು ಸೇನಾಪಡೆ ಮುಖ್ಯಸ್ಥರಿಗೆ ಸಾಥ್​ ನೀಡಿದ್ದರು. ಆದರೆ ಇವರಿಬ್ಬರು ಸೇನಯ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಲಿಲ್ಲ ಎಂದು ಹೇಳಲಾಗಿದೆ.

    ಭಾರತ ಮತ್ತು ಚೀನಾ ವಾಸ್ತವ ಗಡಿರೇಖೆ ಬಳಿ ಹೆಚ್ಚುವರಿ ಸೇನಾಪಡೆಯನ್ನು ಜಮಾವಣೆಗೊಳಿಸಿವೆ. ಲಡಾಖ್​ನ ಪೂರ್ವ ಭಾಗದ ಪ್ಯಾಂಗಾಂಗ್​ ತ್ಸೋದ ಉತ್ತರ ತಟ, ಡೆಮ್ಚಾಕ್​ ಮತ್ತು ಗಲ್ವಾನ್​ ಕಣಿವೆ ಪ್ರದೇಶ ಸೇರಿ ಒಟ್ಟು ಮೂರು ಸ್ಥಳಗಳಲ್ಲಿ ಉಭಯ ರಾಷ್ಟ್ರಗಳು ಸೇನೆ ಜಮಾವಣೆಗೊಂಡಿರುವುದಾಗಿ ಹೇಳಲಾಗುತ್ತಿದೆ. ಈ ಭಾಗಗಳಲ್ಲಿ ಮೇ 5 ಮತ್ತು 6ರಂದು ಭಾರತ ಮತ್ತು ಚೀನಾದ ಅಂದಾಜು 250 ಯೋಧರು ಪರಸ್ಪರ ಹೊಯ್​ಕೈ ನಡೆಸಿದ್ದರು. ಅಲ್ಲದೆ, ಕಲ್ಲು ತೂರಾಟ ಮಾಡಿದ್ದರಿಂದ, ಕೆಲ ಯೋಧರು ಗಾಯಗೊಂಡಿದ್ದರು. ಆನಂತರದಲ್ಲಿ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.

    PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ನ ವಹಿವಾಟು 1,100 ಕೋಟಿ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts