More

    ಮಗುವಿನ ಚಿಕಿತ್ಸೆಗೆ ನೆರವಾದ ಸ್ಟಾರ್ ಫುಟ್‌ಬಾಲ್ ಆಟಗಾರನ ಕೋಪ..!

    ಬೆಲ್‌ಗ್ರೇಡ್: ಮನುಷ್ಯನ ಜೀವನದಲ್ಲಿ ಕೋಪ ತುಂಬಾ ಕೆಟ್ಟದು. ಅದರಿಂದ ಯಾರಿಗೂ ಒಳ್ಳೆದಲ್ಲ. ಇದೀಗ ಅದೇ ಕೋಪ ಮಗುವಿನ ಚಿಕಿತ್ಸೆಗೆ ನೆರವಾಗಿರುವ ಅಚ್ಚರಿ ಘಟನೆಯೊಂದು ನಡೆದಿದೆ. ಫುಟ್‌ಬಾಲ್‌ನ ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೋನಾಲ್ಡೊ ಪಂದ್ಯದ ಇಂಜುರಿ ವೇಳೆ ರೆಫ್ರಿ ಮೇಲಿನ ಕೋಪದಿಂದ ಎಸೆದ ಆರ್ಮ್‌ಬ್ಯಾಂಡ್ ದುಬಾರಿ ಮೊತ್ತಕ್ಕೆ ಸೇಲಾಗಿದೆ. ಕಳೆದ ವಾರ ಪೋರ್ಚುಗಲ್ ತಂಡದ ವಿಶ್ವಕಪ್ ಅರ್ಹತಾ ಪಂದ್ಯದ ವೇಳೆ ರೋನಾಲ್ಡೊ ಎಸೆದ ಬ್ಯಾಂಡ್‌ವೊಂದನ್ನು ಅನಾಮಿಕ ವ್ಯಕ್ತಿಯೊಬ್ಬರು 64 ಸಾವಿರ ಯುರೋ (55.27 ಲಕ್ಷ ರೂ) ನೀಡಿ ಕೊಂಡುಕೊಂಡಿದ್ದಾರೆ ಎಂದು ಸೆರ್ಬಿಯನ್ ರಾಜ್ಯ ಟಿವಿಯೊಂದು ವರದಿ ಮಾಡಿದೆ.

    ಇದನ್ನೂ ಓದಿ: ಟೆನಿಸ್ ದಿಗ್ಗಜ ರೋಜರ್ ಫೆಡರರ್ ಜನ್ಮದಿನಕ್ಕೆ ಸ್ವಿಸ್ ಜನರ ಕಾಣಿಕೆ ಏನು ಗೊತ್ತೇ? 

    ಘಟನೆ ವಿವರ: ಕಳೆದ ಶನಿವಾರ ಪೋರ್ಚುಗಲ್ ಹಾಗೂ ಸೆರ್ಬಿಯಾ ನಡುವಿನ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ 2-2 ರಿಂದ ಪಂದ್ಯ ಡ್ರಾಗೊಂಡಿತು. ಎಂಜುರಿ ವೇಳೆಯಲ್ಲಿ ಬಾರಿಸಿದ ಗೋಲನ್ನು ರೆಫ್ರಿ ನಿರಾಕರಿಸಿದ ಹಿನ್ನೆಲೆಯಲ್ಲಿ ರೋನಾಲ್ಡೊ ಕೋಪದಿಂದ ಆರ್ಮ್‌ಬ್ಯಾಂಡ್ ಅನ್ನು ಮೈದಾನದಲ್ಲಿ ಎಸೆದ ಡ್ರೆಸ್ಸಿಂಗ್ ರೂಂಗೆ ವಾಪಸಾಗಿದ್ದಾರೆ. ಇದನ್ನು ಕಂಡ ಭದ್ರತಾ ಸಿಬ್ಬಂದಿ ಬ್ಯಾಂಡ್ ತೆಗೆದು ಬಿಡ್‌ಗೆ ಇಡುವಂತೆ ಚಾರಿಟಿಗೆ ನೀಡಿದ್ದಾರೆ. ಚಾರಿಟಿಯೂ ಬಿಡ್ ಮೂಲಕ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಹಣ ಸಂಗ್ರಹಿಸಿದೆ.

    ಇದನ್ನೂ ಓದಿ: ದಿಗ್ಗಜ ಸಚಿನ್ ತೆಂಡುಲ್ಕರ್ ಆಸ್ಪತ್ರೆಗೆ ದಾಖಲು: ಟ್ವೀಟ್ ಮಾಡಿದ ತಾರೆ ಹೇಳಿದ್ದೇನು..!

    ಬ್ಲೂ ಆರ್ಮ್‌ಬ್ಯಾಂಡ್‌ಅನ್ನು ಆನ್‌ಲೈನ್ ಮುಖಾಂತರ ಬಿಡ್ಡಿಂಗ್‌ಗೆ ಕೂಗಲಾಗಿತ್ತು. ಬೆನ್ನು ಹುರಿಯಿಂದ ಬಳಲುತ್ತಿರುವ 6 ತಿಂಗಳ ಮಗುವಿನ ಚಿಕಿತ್ಸೆಗೆ ಹಣಸಂಗ್ರಹಿಸುವ ಸಲುವಾಗಿ ಈ ಬಿಡ್ಡಿಂಗ್ ಕೂಗಲಾಯಿತು. ಮೂರು ದಿನಗಳ ಬಿಡ್ಡಿಂಗ್‌ಗೆ ಅವಕಾಶ ನೀಡಲಾಗಿತ್ತಾದರೂ ಕೆಲ ದುಷ್ಕರ್ಮಿಗಳು ನಕಲಿ ಬಿಡ್ ಕೂಗಲು ಯತ್ನಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts