More

    ಮೆಲ್ಬೋರ್ನ್‌ನಲ್ಲಿ ಜೋಕೋ ಗೆಲುವಿನ ಓಟ: ಸೆಮಿಫೈನಲ್‌ಗೇರಿದ ಹಾಲಿ ಚಾಂಪಿಯನ್ ಸಬಲೆಂಕಾ, ಗೌಫ್

    ಮೆಲ್ಬೋರ್ನ್: ದಾಖಲೆಯ ಗೆಲುವಿನ ಓಟ ವಿಸ್ತರಿಸಿದ ವಿಶ್ವ ನಂ.1 ಆಟಗಾರ ನೊವಾಕ್ ಜೋಕೊವಿಕ್, ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ, ಅಮೆರಿಕದ ಕೋಕೋ ಗೌಫ್ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಮಹಿಳಾ ಸಿಂಗಲ್ಸ್ ಸೆಮೀಸ್‌ನಲ್ಲಿ 2ನೇ ಶ್ರೇಯಾಂಕಿತೆ ಸಬಲೆಂಕಾ ಹಾಗೂ ಕೋಕೋ ಗ್ೌ ಎದುರಾಗಲಿದ್ದು, ಕಳೆದ ಬಾರಿಯ ಯುಎಸ್ ಓಪನ್ ೈನಲ್‌ನ ಪುನರಾವರ್ತನೆ ಎನಿಸಲಿದೆ.

    ಮೆಲ್ಬೋನ್ ಪಾರ್ಕ್‌ನಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಜೋಕೋವಿಕ್ 7-6 (3), 4-6, 6-2, 6-3 ಸೆಟ್‌ಗಳಿಂದ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ಮಣಿಸಿದರು. ಇದರೊಂದಿಗೆ ಆಸ್ಟ್ರೇಲಿಯನ್ ಓಪನ್‌ನ ಕ್ವಾರ್ಟರ್‌ೈನಲ್‌ನಲ್ಲಿ ಜೋಕೊವಿಕ್ ಅಜೇಯರಾಗಿ ಉಳಿದಿದ್ದು, ದಾಖಲೆಯ 11ನೇ ಬಾರಿಗೆ ಸೆಮಿೈನಲ್ ಪ್ರವೇಶಿಸಿದರು. 10 ಬಾರಿ ಮೆಲ್ಬೋರ್ನ್‌ನಲ್ಲಿ ಟ್ರೋಫಿ ಗೆದ್ದಿರುವ ಜೋಕೋಗೆ ಇದು 48ನೇ ಗ್ರಾಂಡ್ ಸ್ಲಾಂ ಸೆಮೀಸ್ ಎನಿಸಿದೆ. 24 ಗ್ರಾಂಡ್ ಸ್ಲಾಂ ಒಡೆಯ ಸೆರ್ಬಿಯಾ ತಾರೆ ಜೋಕೋ, ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆಡಿರುವ ಎಲ್ಲ ಉಪಾಂತ್ಯದಲ್ಲಿ ಗೆಲುವು ದಾಖಲಿಸಿ ಚಾಂಪಿಯನ್ ಆಗಿರುವ ದಾಖಲೆಯನ್ನೂ ಹೊಂದಿದ್ದಾರೆ.

    ಸಬಲೆಂಕಾ-ಗೌಫ್ ಮುಖಾಮುಖಿ: ಯುಎಸ್ ಚಾಂಪಿಯನ್ ಕೋಕೋ ಗೌಫ್ ಕ್ವಾರ್ಟರ್‌ಫೈನಲ್‌ನಲ್ಲಿ 7-6 (6), 6-7 (3), 6-2ರಿಂದ ಯೂಕ್ರೇನ್‌ನ ಮಾರ್ಟಾ ಕೋಸ್ಟ್ಯುಕ್ ವಿರುದ್ಧ ಗೆದ್ದು ಎರಡನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಸನಿಹಕ್ಕೆ ತಲುಪಿದ್ದಾರೆ. 4ನೇ ಶ್ರೇಯಾಂಕಿತೆ 19 ವರ್ಷದ ಕೋಕೋ ಗ್ೌ 3 ಗಂಟೆ 8 ನಿಮಿಷಗಳ ಹೋರಾಟದಲ್ಲಿ ಮಾರ್ಟಾ ಸವಾಲು ಹಿಮ್ಮೆಟ್ಟಿಸಿದರು.

    2023ರ ಸೆಪ್ಟೆಂಬರ್‌ನಲ್ಲಿ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ ನಂತರ ಸತತ 12 ಗ್ರಾಂಡ್ ಪಂದ್ಯಗಳಲ್ಲಿ ಕೋಕೋ ಗ್ೌ ಅಜೇಯವಾಗಿ ಉಳಿದಿದ್ದಾರೆ. ಸತತ ಎರಡನೇ ಬಾರಿಗೆ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿರುವ ಬೆಲಾರಸ್‌ನ ಅರಿನಾ ಸಬಲೆಂಕಾ ದಿನದ ಇನ್ನೊಂದು ಕ್ವಾರ್ಟರ್‌ೈನಲ್‌ನಲ್ಲಿ 6-2, 6-3 ನೇರ ಸೆಟ್‌ಗಳಿಂದ ಜೆಕ್ ಗಣರಾಜ್ಯದ ಬಾರ್ಬೋರಾ ಕ್ರಿಜ್ಸಿಕೋವಾ ಎದುರು ಗೆಲುವು ದಾಖಲಿಸಿ ಸತತ ಎರಡನೇ ವರ್ಷವೂ 4ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಮೆಲ್ಬೋರ್ನ್‌ನಲ್ಲಿ ಸತತ 12ನೇ ಗೆಲುವು ಒಲಿಸಿಕೊಂಡ ಸಬಲೆಂಕಾ, ಸತತ 6ನೇ ಗ್ರಾಂಡ್ ಸ್ಲಾಂನ ಉಪಾಂತ್ಯಕ್ಕೆ ಅರ್ಹತೆ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts