More

    ಕಾಶ್ಮೀರದ ಸಾಂಪ್ರದಾಯಿಕ ಕರಕುಶಲ ಕಲೆಯನ್ನು ಉಳಿಸಿ, ಮಹಿಳಾ ಕುಶಲಕರ್ಮಿಗಳ ಬಾಳಲ್ಲಿ ಬೆಳಕಾದ ಆರಿಫಾ ಮೋದಿಯವರ ಟ್ವಿಟರ್ ಖಾತೆಯಲ್ಲಿ ಹೇಳಿದ್ದೇನು?

    ನವದೆಹಲಿ: ಮಹಿಳಾ ದಿನಾಚರಣೆ ನಿಮಿತ್ತ ಇಂದು ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಏಳು ಸಾಧಕ ಮಹಿಳೆಯರು ಬಳಸಿಕೊಂಡಿದ್ದಾರೆ.

    ಫುಡ್​ಬ್ಯಾಂಕ್​ ಇಂಡಿಯಾದ ಸಂಸ್ಥಾಪಕಿ ಸ್ನೇಹಾ ಮೋಹನ್​ ದಾಸ್​ ಮೊದಲು ತಮ್ಮ ಹಸಿವಿನ ವಿರುದ್ಧದ ಹೋರಾಟವನ್ನು ನರೇಂದ್ರ ಮೋದಿಯವರ ಖಾತೆ ಮೂಲಕ ಹಂಚಿಕೊಂಡಿದ್ದರು. ಅವರಾದ ಮೇಲೆ ಬಾಂಬ್ ಸ್ಫೋಟದಲ್ಲಿ ಬದುಕುಳಿದು, ಅಂಗವೈಕಲ್ಯವನ್ನು ಮೆಟ್ಟಿನಿಂತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮಾಳವಿಕಾ ಅಯ್ಯರ್ ತಮ್ಮ ಯಶೋಗಾಥೆಯನ್ನು ಹಂಚಿಕೊಂಡಿದ್ದರು.

    ಹಾಗೇ ನರೇಂದ್ರ ಮೋದಿಯವರ ಟ್ವಿಟರ್​ ಬಳಸಿಕೊಂಡ ಮೂರನೇ ಮಹಿಳೆ ಶ್ರೀನಗರದ ಉದ್ಯಮಿ ಆರಿಫಾ. ಕಾಶ್ಮೀರದಲ್ಲಿ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಕನಸು ಹೊತ್ತಿದ್ದ ಆರಿಫಾ ಅದನ್ನು ನನಸಾಗಿಸಿಕೊಂಡಿದ್ದಾರೆ.
    ಕಾಶ್ಮೀರದ ಸಾಂಪ್ರದಾಯಿಕ ಕರಕುಶಲತೆಯನ್ನು ಪುನರುಜ್ಜೀವನಗೊಳಿಸಬೇಕು ಎಂದುಕೊಂಡಿದ್ದೆ. ಈ ಮೂಲಕ ಸ್ಥಳೀಯ ಸ್ತ್ರೀಯರಿಗೆ ಉದ್ಯೋಗ ಸೃಷ್ಟಿಸುವುದು, ಮಹಿಳಾ ಸಬಲೀಕರಣ ಸಾಧ್ಯವಾಗಿಸುವುದು ನನ್ನ ಬಹುದೊಡ್ಡ ಆಶಯವಾಗಿತ್ತು.

    ಕಾಶ್ಮೀರದಲ್ಲಿರುವ ಮಹಿಳಾ ಕುಶಲಕರ್ಮಿಗಳ ಆರ್ಥಿಕ ಪರಿಸ್ಥಿತಿಯನ್ನು ನೋಡಿದ ಮೇಲೆ ಇಲ್ಲಿನ ಪ್ರಮುಖ ಸಾಂಪ್ರದಾಯಿಕ ಕ್ರಾಫ್ಟ್ ಆದ ನಮ್ದಾವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ತೊಡಗಿದೆ ಎಂದು ಮೋದಿಯವರ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

    ನಮ್ಮ ಕರಕುಶಲ ವಿನ್ಯಾಸವು ಸಾಂಪ್ರದಾಯಿಕತೆ ಹಾಗೂ ಆಧುನಿಕತೆಯ ಸಮ್ಮಿಳಿತವಾಗಿದೆ. ಆಧುನಿಕ ಮಾರುಕಟ್ಟೆಯಲ್ಲೂ ಬೇಡಿಕೆ ಸೃಷ್ಟಿಯಾಗುವಂತೆ ರೂಪಿಸಲಾಗಿದೆ. ನನ್ನ ಉದ್ಯಮದಲ್ಲಿ ತಯಾರಾದ ಕರಕುಶಲ ವಸ್ತುಗಳ ಮೊದಲ ಪ್ರದರ್ಶನವನ್ನು ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಅನೇಕ ಗ್ರಾಹಕರು ನಮ್ಮ ವಸ್ತುಗಳತ್ತ ಆಕರ್ಷಿತರಾದರು. ಆಗಿನಿಂದಲೂ ಒಳ್ಳೆಯ ವಹಿವಾಟು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ತಮ್ಮ ಬದುಕಿನ ಕತೆಯನ್ನು ಇಡೀ ವಿಶ್ವಕ್ಕೇ ತಿಳಿಸಲು ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರಿಗೆ ಆರಿಫಾ ಧನ್ಯವಾದ ತಿಳಿಸಿದ್ದಾರೆ. ಕಾಶ್ಮೀರ ಹಾಗೂ ಅಲ್ಲಿರುವ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ಮುಂದಿನ ದಿನಗಳಲ್ಲೂ ಅವಿರತವಾಗಿ ಶ್ರಮ ವಹಿಸುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts