More

    ಭಾರತದ ಸೈಬರ್​ ಭದ್ರತಾ ವ್ಯವಸ್ಥೆಗೆ ವಿದೇಶಿ ಹ್ಯಾಕರ್​ಗಳಿಂದ ಕಂಟಕ; ವೆಬ್​ಸೈಟ್​ಗಳ ಹ್ಯಾಕಿಂಗ್​​ನಲ್ಲಿ ಪಾಕ್​, ಚೀನಾ ಕೈವಾಡ

    ನವದೆಹಲಿ: ಭಾರತದ ಸೈಬರ್​ ಭದ್ರತಾ ವ್ಯವಸ್ಥೆಯ ಪಾಲಿಗೆ ಚೀನಾ, ಪಾಕಿಸ್ತಾನ ಸೇರಿ ಹಲವು ದೇಶಗಳು ಕಂಟಕವಾಗಿವೆ.

    ಕಳೆದ ಐದು ವರ್ಷಗಳಲ್ಲಿ 1 ಲಕ್ಷಕ್ಕೂ ಅಧಿಕ ವೆಬ್​ಸೈಟ್​ಗಳು ಹ್ಯಾಕ್ ಆಗಿದ್ದು, ಬಹುತೇಕ ಪ್ರಕರಣಗಳ ಹಿಂದೆ ಚೀನಾ ಮತ್ತು ಪಾಕಿಸ್ತಾನಗಳು ಇರುವುದು ಪತ್ತೆಯಾಗಿದೆ. ಈ ಎರಡು ದೇಶಗಳನ್ನು ಹೊರತು ಪಡಿಸಿದರೆ ಫ್ರಾನ್ಸ್​, ನೆದರ್​ಲ್ಯಾಂಡ್​, ರಷ್ಯಾ, ತೈವಾನ್​, ಸೆರ್ಬಿಯಾ ಹಾಗೂ ಟುನೇಶಿಯಾ ದೇಶಗಳು ಸಹ ಭಾರತದ ವಿರುದ್ಧ ಸೈಬರ್​ ದಾಳಿ ಮಾಡುತ್ತಿವೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್​ ಮತ್ತು ತಂತ್ರಜ್ಞಾನದ ಸಚಿವಾಲಯ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.

    2015ರಿಂದ ಇಲ್ಲಿಯವರೆಗೆ ಸುಮಾರು 1,29,747 ಭಾರತೀಯ ಪ್ರಮುಖ ವೆಬ್​​ಸೈಟ್​ಗಳು ಹ್ಯಾಕ್​ ಆಗಿವೆ. ಹೀಗೆ ಹ್ಯಾಕ್​ ಆಗುವಲ್ಲಿ ಮುಖ್ಯವಾಗಿ ಪಾಕಿಸ್ತಾನ ಮತ್ತು ಚೀನಾ ಸೇರಿ ವಿದೇಶಿ ಹ್ಯಾಕರ್​ಗಳ ಕೈವಾಡವಿದೆ ಎಂಬುದನ್ನು ಭಾರತೀಯ ಕಂಪ್ಯೂಟರ್​ ತುರ್ತು ಪ್ರತಿಕ್ರಿಯಾ ತಂಡ (ಸಿಇಆರ್​ಟಿ-ಇನ್​) ಪತ್ತೆ ಹಚ್ಚಿದೆ.

    2015ರಲ್ಲಿ 27,205 ಪ್ರಮುಖ ಭಾರತೀಯ ವೆಬ್​ಸೈಟ್​ಗಳು ಹ್ಯಾಕ್​ ಆಗಿದ್ದವು. ಆ ಸಂಖ್ಯೆ 2016ರಲ್ಲಿ 33,000ಕ್ಕೆ ಏರಿತ್ತು. 2017ರಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ 30,067 ಇಂಡಿಯನ್​ ವೆಬ್​​ಸೈಟ್​ಗಳು ಹ್ಯಾಕ್ ಆಗಿದ್ದವು. ಹಾಗೇ 2018ರಲ್ಲಿ 17,560, 2019ರಲ್ಲಿ 21, 767 ವೆಬ್​ಸೈಟ್​ಗಳು ಹ್ಯಾಕ್​ ಆಗಿ, ಅವುಗಳ ಸೈಬರ್​ ಭದ್ರತೆಗೆ ಧಕ್ಕೆಯಾಗಿದೆ.

    ಭಾರತದ ಸೈಬರ್​ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಸೈಬರ್ ಹ್ಯಾಕಿಂಗ್​ ಎಂಬುದು ಒಂದು ತರಹದ ಬೆದರಿಕೆಯೇ ಆಗಿದೆ. ಈ ಬಗ್ಗೆ ಸವಿವರವಾಗಿ ಪಟ್ಟಿ ಮಾಡಿ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿಗೆ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

    ಹಲವು ಸಚಿವಾಲಯಗಳ ಕಚೇರಿಗಳಲ್ಲಿ ಸೈಬರ್​ ಭದ್ರತೆಗೆ ಸಂಬಂಧಪಟ್ಟಂತೆ ಅಣುಕು ಪ್ರದರ್ಶನಗಳ ಮೂಲಕ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts