More

    ರುಚಿ ಹೆಚ್ಚಿಸಿದ ಅಡಿಕೆ ಐಸ್​ಕ್ರೀಂ!

    ಬೆಂಗಳೂರು: ದಿನದಿಂದ ದಿನಕ್ಕೆ ಅಡಿಕೆಯ ಮೌಲ್ಯವರ್ಧನೆ ಹಿನ್ನೆಲೆಯಲ್ಲಿ ಸಾಕಷ್ಟು ಉಪ&ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ಇದೀಗ ಪುತ್ತೂರಿನ ಸುಹಾಸ್​ ಮರಿಕೆ ಎಂಬುವವರು ಅಡಿಕೆಯಿಂದ ಐಸ್​ಕ್ರೀಂ ತಯಾರಿಸಿದ್ದಾರೆ. ಸದ್ಯ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳಕೂಟಕ್ಕೆ ಬಂದಿರುವ ಜನರು ಅಡಿಕೆ ರುಚಿಯ ಐಸ್​ಕ್ರೀಂ ಸವಿದಿದ್ದಾರೆ.

    ಅಡಿಕೆಯನ್ನು ನಾನಾ ಹಂತಗಳಲ್ಲಿ ಸಂಸ್ಕರಿಸಿ, ಐಸ್​ಕ್ರೀಂ ಸಿದ್ಧಪಡಿಸಲಾಗುತ್ತದೆ. ಈ ಸ್ವಾದವನ್ನು ಎಲ್ಲ ವಯೋಮಾನದವರು ಸವಿಯಬಹುದು. ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಇದು ನ್ಯಾಚುರಲ್​ ಐಸ್​ಕ್ರೀಂ ಆಗಿದ್ದು, ಸಹಜ ಬಣ್ಣ ಹೊಂದಿದೆ. ರುಚಿ ಹೆಚ್ಚಿಸುವ ಯಾವುದೇ ಪದಾರ್ಥಗಳನ್ನು ಬಳಸುವುದಿಲ್ಲ ಎನ್ನುತ್ತಾರೆ ಸುಹಾಸ್​ ಮರಿಕೆ.

    ಕರಾವಳಿ ತಿನಿಸಿಗೆ ಮುಗಿಬಿದ್ದ ಜನ…

    ಕರಾವಳಿಯ ತಿಂಡಿ&ತಿನಿಸುಗಳನ್ನು ಸವಿಯಲು ಕಂಬಳಕ್ಕೆ ಬಂದಿದ್ದ ಮಂದಿ ಮುಗಿಬಿದ್ದರು. ಮಂಗಳೂರು ಬನ್ಸ್​, ಬಜ್ಜಿ, ತುಪ್ಪ ದೋಸೆ, ಗೋಳಿ ಬಜೆ, ಪುಂಡಿ ಗಸಿ, ಕೋರಿ ರೊಟ್ಟಿ, ಮೀನಿನ ವಿವಿಧ ಖಾದ್ಯಗಳನ್ನು ಸವಿದರು. ಹೀಗಾಗಿ ಬೆಳಗ್ಗಿನಿಂದಲೇ ಫುಡ್​ಕೋರ್ಟ್​ನಲ್ಲಿ ಹೆಚ್ಚಿನ ಜನರಿದ್ದರು. ಸಂಜೆಯಾಗುತ್ತಿದ್ದಂತೆ ದಟ್ಟಣೆ ಹೆಚ್ಚಾಗುತ್ತಾ ಹೋಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts