More

    ಕಂಬಳ ಕೋಣಗಳ ಆರೈಕೆಯೇ ಬಲು ರೋಚಕ; ಇಲ್ಲಿದೆ ವಿವರ…

    ಬೆಂಗಳೂರು: ಕಂಬಳದ ಕೋಣಗಳನ್ನು ಅತಿಯಾದ ಕಾಳಜಿಯಲ್ಲಿ, ಆಹಾರದಲ್ಲಿ ಸ್ವಲ್ಪವೂ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುತ್ತದೆ. ಬೆಳಗ್ಗೆ ಐದು ಗಂಟೆಯಿಂದ ಕೋಣಗಳ ದಿನಚರಿ ಆರಂಭವಾಗುತ್ತದೆ.

    ಮೊದಲು ಬೈಹುಲ್ಲು ಹಾಕಲಾಗುತ್ತದೆ. ಬಳಿಕ ಹುರುಳನ್ನು ಬೇಯಿಸಿ ನೀಡಲಾಗುತ್ತದೆ. ಬೊಜ್ಜು ಬಂದರೆ ಓಟಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಕೆಲವು ಬಾರಿ ಹುರುಳಿಯೊಂದಿಗೆ ತೆಂಗಿನೆಣ್ಣೆ ಸೇವಿಸಲು ನೀಡಲಾಗುತ್ತದೆ. ಮಧ್ಯಾಹ್ನದ ನಂತರ ಬೈ ಹುಲ್ಲು, ಗಂಜಿ ಸೇರಿದಂತೆ ವಿವಿಧ ಪೌಷ್ಟಿಕಾಂಶ ಆಹಾರ ನೀಡಲಾಗುತ್ತದೆ. ಜತೆಗೆ ವಿಟಮಿನ್​ ಹಾಗೂ ಕ್ಯಾಲ್ಸಿಯಂ ಔಷಧ ನೀಡಲಾಗುತ್ತದೆ. ಕೋಣಗಳ ಆಹಾರಕ್ಕೆ ನಿತ್ಯ ರೂ.2 ಸಾವಿರದಷ್ಟು ವೆಚ್ಚವಾಗುತ್ತದೆ. ಕೋಣದ ಆಹಾರ, ಕೆಲಸಗಾರರ ವೇತನ ಸೇರಿ ಮಾಸಿಕ 1ಲಕ್ಷ ರೂ. ಖರ್ಚು ಕೋಣದ ಮಾಲೀಕರಿಗೆ ತಗಲುತ್ತದೆ.

    ಬಿಸಿನೀರ ಸ್ನಾನ, ಎಣ್ಣೆ ಮಸಾಜ್​!

    ಕಂಬಳದ ಕೋಣಗಳಿಗೆ ಬೆಳಗಿನ ಆಹಾರವಾಗುತ್ತಿದ್ದಂತೆ, ಅವುಗಳನ್ನು ಬಿಸಿ ನೀರಿನಲ್ಲಿ ಸ್ನಾನ ಮಾಡಿಸಲಾಗುತ್ತದೆ. ಕೋಣದ ಚರ್ಮದ ಹೊಳಪು ಉಳಿಯಲು, ಹಲಸಿನ ಎಲೆಯನ್ನು ನೀರಿನಲ್ಲಿ ಬೇಯಿಸಿ, ಆ ನೀರನ್ನು ಮೈಮೇಲೆ ಚಿಮುಕಿಸಲಾಗುತ್ತದೆ. ಸ್ನಾನದ ಬಳಿಕ ತೆಂಗಿನ ಎಣ್ಣೆಯಿಂದ ಮಸಾಜ್​ ಮಾಡಲಾಗುತ್ತದೆ. ಬಳಿಕ ಕೋಣಗಳಿಗೆ ಕಂಬಳದ ತರಬೇತಿ ನೀಡಲಾಗುತ್ತದೆ. ಕೋಣಗಳನ್ನು ನೋಡಿಕೊಳ್ಳಲು ನಿತ್ಯ 5 ಮಂದಿಯನ್ನು ಇದ್ದೇ ಇರುತ್ತಾರೆ. ಕೋಣಗಳಿಗೆ ಅನಾರೋಗ್ಯ ಉಂಟಾದಲ್ಲಿ ನಾಟಿ ವೈದ್ಯರಿಂದ ಔಷಧಿ ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts