More

    ಹುಬ್ಬಳ್ಳಿಗೆ ಎಂಟ್ರಿ ಕೊಟ್ಟ ಅರವಿಂದ ಕೇಜ್ರಿವಾಲ್; ಸಾರ್ವತ್ರಿಕ ಚುನಾವಣೆಗೆ ಭರ್ಜರಿ ಸ್ಕೆಚ್

    ಹುಬ್ಬಳ್ಳಿ: ಮಧ್ಯರಾತ್ರಿ ಹುಬ್ಬಳ್ಳಿಗೆ ಬಂದಿಳಿದಿರುವ ಅರವಿಂದ ಕೇಜ್ರಿವಾಲ್‌ ಹಾಗೂ ಭಗವಂತ ಮಾನ್ ಗೆ ವಾಣಿಜ್ಯನಗರಿ ಬೆಂಗಳೂರಿನಲ್ಲಿ ಆಪ್ ಮುಖಂಡರು ಅದ್ದೂರಿಯಾಗಿ ಸ್ವಾಗತ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಅರವಿಂದ ಕೇಜ್ರೀವಾಲ್ ಆಗಮಿಸಿದ್ದು ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ವಾಸ್ತವ್ಯ ಹೂಡಿದ್ದಾರೆ.

    ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿಯಿಂದ ದಾವಣಗೆರೆಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿರುವ ಅರವಿಂದ ಕೇಜ್ರಿವಾಲ್‌ ಈ ಬಾರಿ ಕರ್ನಾಟಕದಲ್ಲಿಯೂ ಖಾತೆ ತೆಗೆಯಲು ಆಪ್ ಭರ್ಜರಿ ಪ್ಲ್ಯಾನ್‌ ಹಾಕಿಕೊಂಡಿದ್ದಾರೆ. 2023ರ ವಿಧಾನಸಭಾ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡ ಆಪ್ ಪಕ್ಷ ಭಾರಿ ತಯಾರಿ ನಡೆಸಿದೆ. ಸಾರ್ವತ್ರಿಕ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ರಾಜ್ಯಕ್ಕೆ ಅರವಿಂದ ಕೇಜ್ರಿವಾಲ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ಕರ್ನಾಟಕದ ಮಧ್ಯ ಭಾಗದಿಂದಲೇ ಪಕ್ಷ ಸಂಘಟನೆಗೆ ‌ಮುಂದಾಗಿದ್ದಾರೆ.

    ದಾವಣಗೆರೆಯಲ್ಲಿ ನಡೆಯುವ ಬ್ಲಾಕ್ ಸದಸ್ಯರ ಪ್ರಮಾಣ ವಚನದ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಭಾಗಿಯಾಗಲಿದ್ದು ಈ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ.

    ದಾವಣಗೆರೆ ಕಾರ್ಯಕ್ರಮಕ್ಕೂ ಮುಂಚೆ ಹುಬ್ಬಳ್ಳಿಯಲ್ಲಿ ಪಕ್ಷದ ಮುಖಂಡರು ಮತ್ತು ಟಿಕೆಟ್ ಆಕಾಂಕ್ಷಿಗಳ ಜೊತೆಗೆ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಲಿರುವ ಕೇಜ್ರಿವಾಲ್‌ ಸಭೆ ನಡೆಸಲಿದ್ದಾರೆ.

    ಈ ಮೂಲಕ ಕರ್ನಾಟಕದಲ್ಲಿ ಖಾತೆ ಓಪನ್ ಮಾಡಲು ಮಾಸ್ಟರ್ ಪ್ಲ್ಯಾನ್‌ ಹೆಣೆಯಲು ಆಪ್ ಮುಖಂಡ ಮುಂದಾಗಿದ್ದಾರೆ.  ಇಂದು ಅಭ್ಯರ್ಥಿಗಳ‌ ಮೊದಲ ಪಟ್ಟಿ ಬಿಡುಗಡೆ ಮಾಡಲಿರುವ ಆಮ್ ಆದ್ಮಿ ಪಾರ್ಟಿ ಮುಂಬರುವ ಚುನಾವಣೆಯಲ್ಲಿ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನ ಅಖಾಡಕ್ಕೆ ಇಳಿಸಲು ಚಿಂತನೆ ನಡೆಸಿದ್ದಾರೆ. ಒಟ್ಟಿನಲ್ಲಿ ಆಪ್ ಪಕ್ಷದ ಕಾರ್ಯರ್ತರಲ್ಲಿ ಹುಮ್ಮಸ್ಸು ಮೂಡಿರುವುಂತು ಸತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts