More

    ಭೂಮನಗುಂಡದಲ್ಲಿ ಬಿಜೆಪಿಗೆ ಮುಖಭಂಗ

    ಅರಕೇರಾ: ಭೂಮನಗುಂಡ ಗ್ರಾಪಂ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಗಳಿಸುವ ಮೂಲಕ ಬಿಜೆಪಿ ಗೆ ಮುಖಭಂಗವಾಗಿದೆ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು.

    ಪಟ್ಟಣದಲ್ಲಿ ಭೂಮನಗುಂಡ ಗ್ರಾಪಂ ಅಧ್ಯಕ್ಷೆ ಸಂಗಮ್ಮ ನರಸನಗೌಡರನ್ನು ಸನ್ಮಾನಿಸಿ ಶನಿವಾರ ಮಾತನಾಡಿದರು. ಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸದಸ್ಯರ ಸಮನ್ವಯದೊಂದಿಗೆ ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕು. ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಮೂಲಕ ಜನಸಾಮಾನ್ಯರನ್ನು ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು.

    ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀದೇವಿ ಆರ್.ನಾಯಕ, ಬ್ಲಾಕ್ ಕಾಂಗ್ರೆಸ್ ಎಸ್‌ಟಿ ಮೋರ್ಚಾ ಅಧ್ಯಕ್ಷ ತಿಮ್ಮಪ್ಪ ನಾಯಕ ಪೊ.ಪಾ, ಗ್ರಾಪಂ ಉಪಾಧ್ಯಕ್ಷ ನರಸಣ್ಣ ನಾಯಕ ಮಲ್ಲಾಪುರ, ಪ್ರಮುಖರಾದ ಬುಡ್ಡಯ್ಯಗೌಡ, ಬಸವರಾಜ ನಾಯಕ, ದುರ್ಗಣ್ಣ ನಾಯಕ ಕುರ್ಲೆ, ನಾಗೇಂದ್ರ ಗುತ್ತೆದಾರ, ಶಿವರಾಜ ಮಲ್ಲಾಪುರ, ಹನುಮಂತ್ರಾಯ ಸಾಹುಕಾರ ಅಡಕಲಗುಡ್ಡ, ಗ್ರಾಪಂ ಸದಸ್ಯರಾದ ಹನುಮಯ್ಯ ನಾಯಕ ಅರಳೆಬಂಡಿ, ಭಗವಂತ್ರಾಯ, ಬಸವರಾಜ ಆರ್.ನಾಯಕ, ರೇಣುಕಾ ಮಲ್ಲಪ್ಪ, ಮಾನಶಮ್ಮ ಮಾರೆಪ್ಪ, ಮಹಾದೇವಿ ಬಸಯ್ಯ, ಲಕ್ಷ್ಮೀ ಹನುಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts