More

    ಏಮ್ಸ್‌ಗಾಗಿ ಶಾಸಕ ಶಿವನಗೌಡ ನಾಯಕ ಮನೆ ಮುತ್ತಿಗೆ ಯತ್ನ

    ಅರಕೇರಾ: ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ಪಟ್ಟಣದ ಶಾಸಕ ಕೆ.ಶಿವನಗೌಡ ನಾಯಕ ನಿವಾಸದ ಮೇಲೆ ರಾಯಚೂರು ಏಮ್ಸ್ ಹೋರಾಟ ಸಮಿತಿ ಮುಖಂಡರು ಭಾನುವಾರ ಮುತ್ತಿಗೆ ಹಾಕಲು ಯತ್ನಿಸಿದರು.

    ಅರಕೇರಾದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಿಂದ ಪಾದಯಾತ್ರೆ ಮೂಲಕ ಪಟ್ಟಣಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಶಾಸಕರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೋಲಿಸರು ಬಿಗಿ ಬಂದೋಬಸ್ತ್ ಮೂಲಕ ಪ್ರತಿಭಟನಾಕಾರರನ್ನು ಹೊರಗಡೆ ತಡೆ ಹಿಡಿದರು. ಮನೆಮುಂದೆ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಶಾಸಕರು, ಸಚಿವರು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕಳಸ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ರಾಯಚೂರು ಜಿಲ್ಲೆಗೆ ಭಾರಿ ಅನ್ಯಾಯ ಮಾಡಿದ್ದು, ನಮ್ಮ ಭಾಗದ ಜನರ ಬೇಡಿಕೆ ಈಡೇರಿಸುವಲ್ಲಿ ನಿರ್ಲಕ್ಷಿಸಿದೆ. ಈ ಹಿಂದೆ ಜಿಲ್ಲೆಗೆ ಐಐಐಟಿ ಮಂಜೂರು ಮಾಡುವಂತೆ ಒತ್ತಾಯಿಸಿ, ನಿರಂತರ ಹೋರಾಟ ಮಾಡಿದಾಗ ಕೊನೇ ಕ್ಷಣದಲ್ಲಿ ಬಿಜೆಪಿ ನಾಯಕರು ಅದನ್ನು ಧಾರವಾಡಕ್ಕೆ ಕೊಂಡೊಯ್ದರು.

    ಐಐಐಟಿಗೆ ಆದ ಅನ್ಯಾಯ ಸರಿಪಡಿಸಲು ಏಮ್ಸ್ ನೀಡುವಂತೆ ಐದು ತಿಂಗಳಿನಿಂದ ಹೋರಾಡಲಾಗುತ್ತಿದೆ. ಜಿಲ್ಲೆಗೆ ಭೇಟಿ ನೀಡಿದ್ದ ಅಂದಿನ ಸಿಎಂ ಯಡಿಯೂರಪ್ಪ, ರಾಯಚೂರಿಗೆ ಐಐಐಟಿಯಲ್ಲಿ ಅನ್ಯಾಯವಾಗಿದ್ದು, ಏಮ್ಸ್ ಮಂಜೂರು ಮಾಡುತ್ತೇವೆಂದು ಭರವಸೆ ನೀಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ರಾಯಚೂರಿಗೆ ಆಗಮಿಸಿದ್ದಾಗ ನಿಮಗೆ ಏಮ್ಸ್ ನೀಡುತ್ತೇವೆ. ಹೋರಾಟ ಸಮಿತಿ ಒಳಗೊಂಡ ನಿಯೋಗವನ್ನು ಕೇಂದ್ರ ಆರೋಗ್ಯ ಸಚಿವರ ಬಳಿ ಕರೆದೊಯ್ಯುತ್ತೇವೆ ಎಂದಿದ್ದರು. ಆದರೆ ಕೊಟ್ಟ ಮಾತು ಈಡೇರಿಸಿಲ್ಲ ಎಂದರು.

    ಏಮ್ಸ್‌ಗಾಗಿ ಶಾಸಕ ಶಿವನಗೌಡ ನಾಯಕ ಮನೆ ಮುತ್ತಿಗೆ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts