More

    ವಾಹನದಡಿಗೆ ಸಿಲುಕಿ ಸಾಯುವ ಜೀವಿಗಳಿಗೆ ಈತ ಮುಕ್ತಿದಾತ

    ಕೋಟ: ಇತ್ತೀಚಿಗಿನ ದಿನಗಳಲ್ಲಿ ವಾಹನಗಳ ಅಡಿಗೆ ಬಿದ್ದು ಬಲಿಯಾಗುತ್ತಿರುವ ಪ್ರಾಣಿಗಳನ್ನು ವಿಲೇವಾರಿ ಮಾಡುವ ಕಾರ್ಯಕ್ಕೆ ಯಾರೂ ಮುಂದಾಗುತ್ತಿಲ್ಲ. ಇಂಥದರಲ್ಲಿ ಕೋಟದ ದಿನೇಶ್ ಗಾಣಿಗ ಮಾಡುವ ಸಾಮಾಜಿಕ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
    ರಾಷ್ಟ್ರೀಯ ಹೆದ್ದಾರಿಯಿಂದ ತೊಡಗಿ ಎಲ್ಲ್ಲ ಒಳ ರಸ್ತೆಗಳಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳು ಅಪಘಾತಕ್ಕೀಡಾಗಿ ಸತ್ತರೆ ಅಲ್ಲಿಗೆ ಧಾವಿಸಿ ಅವುಗಳ ಕಳೇಬರವನ್ನು ಮಣ್ಣಿನಡಿ ಹೂಳುತ್ತಾರೆ.
    ತೆಕ್ಕಟ್ಟೆಯ ಹೆದ್ದಾರಿ ಸಮೀಪ ಇತ್ತೀಚಿಗೆ ರಸ್ತೆ ಮಧ್ಯೆ ಸತ್ತು ಬಿದ್ದಿದ್ದ ನಾಯಿಯನ್ನು ಅಲ್ಲೆ ಸಮೀಪ ಮಣ್ಣು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೋಟ, ಸಾಲಿಗ್ರಾಮ, ಸಾಸ್ತಾನ, ಬ್ರಹ್ಮಾವರ, ಉಡುಪಿ, ಮಂಗಳೂರು, ರಾಯಚೂರು, ವಿಜಯಪುರ, ಹಾಸನ, ಸಕಲೇಶಪುರ, ಹೀಗೆ ನಮ್ಮ ರಾಜ್ಯದಲ್ಲಿ ಅಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ದೆಹಲಿ, ಬೇರೆ ಬೇರೆ ಭಾಗಗಳ ಹೆದ್ದಾರಿಗಳಲ್ಲಿ ಸಂಚರಿಸುವ ಸಂದರ್ಭ ಅಪಘಾತಕ್ಕೀಡಾಗಿ ಸತ್ತ ಪ್ರಾಣಿ ಪಕ್ಷಿಗಳನ್ನು ಅಲ್ಲೆ ಮಣ್ಣು ಮಾಡುವ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
    ಚಿಕ್ಕ ವಯಸ್ಸಿನಲ್ಲಿಯೇ ಪರಿಶ್ರಮದ ಮೂಲಕ ಮೇಲೆದ್ದು ಬಂದ ದಿನೇಶ್ ಗಾಣಿಗ ಪ್ರಸ್ತುತ ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ, ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಪಟುವಾಗಿ ಎರಡೆರಡು ಬಾರಿ ಸ್ಪರ್ಧಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಉದ್ಯಮ ರಂಗ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಆರಂಭದಲ್ಲಿ ಪತ್ರಿಕಾ ವಿತರಕನಾಗಿ ಕಾರ್ಯನಿರ್ವಹಿಸಿದ್ದ ದಿನೇಶ್ ಗಾಣಿಗ, ಇಂದು ವಿವಿಧ ಕ್ಷೇತ್ರಗಳಲ್ಲ್ಲಿ ಸಾಧನೆ ಮಾಡಿದ್ದಾರೆ. ಅದೆಷ್ಟೊ ನಿರುದ್ಯೋಗಿ ಯುವಕರಿಗೆ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ ಅಶಕ್ತ ಕುಟುಂಬಗಳಿಗೆ ಮಿಡಿಯುವ ಮನ ಇವರದ್ದಾಗಿದೆ.

    ಹೆದ್ದಾರಿಗಳಲ್ಲಿ ಸತ್ತು ಬಿದ್ದಿರುವ ಪ್ರಾಣಿ, ಪಕ್ಷಿಗಳ ಮೇಲೆ ವಾಹನ ಹತ್ತಿಸಿ ಹೋಗುವ ಪರಿ ಕಣ್ಣೆದುರಲ್ಲೆ ಕಂಡಾಗ ಬಾರಿ ಬೇಸರವಾಯಿತು. ಬಳಿಕ ರಸ್ತೆ ಹಾಗೂ ಇನ್ನಿತರ ಭಾಗಗಳಲ್ಲಿ 200ಕ್ಕೂ ಅಧಿಕ ಸತ್ತು ಬಿದ್ದ ಪ್ರಾಣಿ ಪಕ್ಷಿಗಳನ್ನು ಮಣ್ಣು ಮಾಡಿದ ಸಾಮಾಜಿಕ ಕಾರ್ಯದಲ್ಲಿ ತೃಪ್ತಿ ಇದೆ.
    | ದಿನೇಶ್ ಗಾಣಿಗ
    ಕೋಟ ಸಾಮಾಜಿಕ ಕಾರ್ಯಕರ್ತ

    ಹೋರಾಟಗಾರನಾಗಿ, ಉದ್ಯಮಿಯಾಗಿ ಗುರುತಿಸಿಕೊಂಡಿರುವ ದಿನೇಶ್ ಗಾಣಿಗ ಅವರನ್ನು ಪ್ರಸ್ತುತ ಸತ್ತ ಪ್ರಾಣಿಗಳಿಗೆ ಮುಕ್ತಿಗಾಣಿಸುವ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿದುಕೊಂಡು ಸಂಪರ್ಕಿಸಿದ್ದೇನೆ. ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿ.
    |ರಾಮನಾಥ ನಾಯಕ್
    ಕರ್ಣಾಟಕ ಬ್ಯಾಂಕ್ ಉದ್ಯೋಗಿ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts