More

    ಮಹಿಳಾ ಉದ್ಯಮಿಗಳಿಗಿರಲಿ ಮನೆಯವರ ಪ್ರೋತ್ಸಾಹ – ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಭಿಮತ – ವಿಘ್ನೇಶ್ ಮೆಡಿಕಲ್ಸ್ ಉದ್ಘಾಟನೆ


    ಪುತ್ತೂರು: ಮಹಿಳೆಯರು ಮನೆಗೆ ಸೀಮಿತವಾಗದೆ ಸಮಾಜಕ್ಕೆ ಕೊಡುಗೆ ನೀಡಲು ಮುಂದಾದಾಗ ಮನೆಯವರು ಪ್ರೋತ್ಸಾಹ ಹಾಗೂ ಧೈರ್ಯ ತುಂಬುವುದು ಅತಿ ಅಗತ್ಯವಾಗಿದೆ. ಸ್ಪರ್ಧಾತ್ಮಕ ಸಮಾಜದಲ್ಲಿ ಮಹಿಳೆಯರು ಧೈರ್ಯ ಮಾಡಿಕೊಂಡು ಸಂಸ್ಥೆ ರಚನೆಗೆ ಮುಂದಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.


    ಪುಣಚ ಪರಿಯಾಲ್ತಡ್ಕ ಪ್ರಗತಿ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಪ್ರಾರಂಭಗೊAಡ ವಿಘ್ನೇಶ್ ಮೆಡಿಕಲ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.


    ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್. ಆರ್. ರಂಗಮೂರ್ತಿ ನೂತನ ಮೆಡಿಕಲ್ ಉದ್ಘಾಟಿಸಿ ಶುಭಹಾರೈಸಿದರು.

    ಮಹಿಳಾ ಉದ್ಯಮಿಗಳಿಗಿರಲಿ ಮನೆಯವರ ಪ್ರೋತ್ಸಾಹ - ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಭಿಮತ - ವಿಘ್ನೇಶ್ ಮೆಡಿಕಲ್ಸ್ ಉದ್ಘಾಟನೆ


    ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ, ಗ್ರಾಮಕ್ಕೆ ಸೇವೆ ನೀಡಬೇಕೆಂಬ ಉದ್ದೇಶದಿಂದ ಬೇರೆ ಕಡೆ ಬೇಡಿಕೆಯಿದ್ದರೂ ಪುಣಚದಲ್ಲಿ ಮೆಡಿಕಲ್ ಪ್ರಾರಂಭಿಸಲಾಗಿದೆ. ಈ ಮೂಲಕ ಗ್ರಾಮ ನಿವಾಸಿಗಳಿಗೆ ಉತ್ತಮ ಆರೋಗ್ಯ ಲಭಿಸಬೇಕೆಂಬ ಆಶಯವನ್ನು ಇಟ್ಟುಕೊಳ್ಳಲಾಗಿದೆ ಹೊರತು ಯಾವುದೇ ಪೈಪೋಟಿಗಾಗಿ ಅಲ್ಲ ಎಂದು ತಿಳಿಸಿದರು.


    ಮೆಡಿಕಲ್ಸ್ ಉದ್ಘಾಟನೆ ಅಂಗವಾಗಿ ಬೆಳಗ್ಗೆ ಕಲ್ಲುಕುಟ್ಟಿಮೂಲೆ ಸೂರ್ಯ ಭಟ್ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು.


    ಶ್ರೀದೇವಿ ಪ್ರೌಢ ಶಾಲೆ ಅಧ್ಯಕ್ಷ ಜಯಶ್ಯಾಮ್ ನೀರ್ಕಜೆ, ಪುಣಚ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಕಟ್ಟಡ ಮಾಲೀಕ ನಾರಾಯಣ ಪೂಜಾರಿ, ವಕೀಲ ಉಲ್ಲಾಸ್, ಹಿರಿಯ ವಕೀಲ ಶಿವಪ್ರಸಾದ್ ಇ., ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್, ಕಮಲಾಕ್ಷಿ, ಕುಪ್ಲ್ಲುಚ್ಚಾರ್ ನಾರಾಯಣ ಭಟ್, ನಿವೃತ್ತ ಮುಖ್ಯಶಿಕ್ಷಕ ಹರ್ಷ ಶಾಸ್ತಿç, ಗುತ್ತಿಗೆದಾರ ಸಂತೋಷ್, ಅವಿನಾಶ್, ಮಹೇಶ್, ಸಚ್ಚಿದಾನಂದ ಶಾಸ್ತಿç ನೆಕ್ಕರೆ, ಯಶಸ್ವಿನಿ ಶಾಸ್ತಿç, ಪೂರ್ಣಶ್ರೀ ವರ್ಮುಡಿ, ನಿತಿನ್ ಶಂಕರ ವರ್ಮುಡಿ, ಉಮಾದೀಪಿಕಾ, ಅಥರ್ವ ವಿಘ್ನೇಶ್, ಡಾ. ಗೌರಿಶಂಕರ ಸಿ.ಕೆ., ಶ್ರೇಯಸ್ವಿ ವಿ., ಆದ್ಯ ಪ್ರಾಪ್ತಿ, ಅನ್ಯ ಪ್ರಣತಿ, ವರ್ಮುಡಿ ಶ್ರೀಕೃಷ್ಣ ಭಟ್, ವರ್ಮುಡಿ ಶಂಕರಿ, ವಕೀಲ ಸತ್ಯನಾರಾಯಣ ವರ್ಮುಡಿ, ಅನೂಪ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.


    ಮೆಡಿಕಲ್ ಮಾಲಕಿ ಪ್ರಜ್ಞಾ ಕೆ. ಸ್ವಾಗತಿಸಿದರು. ಸಚಿನ್ ಕೇಶವ ವರ್ಮುಡಿ ವಂದಿಸಿದರು. ಮೆಡಿಕಲ್ ಸಹಾಯಕಿ ವಿಶಾಲಾಕ್ಷಿ ಸಹಕರಿಸಿದರು.


    ಗುಣಮಟ್ಟದ ಔಷಧ:
    ಮೆಡಿಕಲ್ಸ್ನಲ್ಲಿ ಅಲೋಪತಿ ಹಾಗೂ ಆಯುರ್ವೇದ ಔಷಧಗಳು ಲಭ್ಯವಿರಲಿವೆ. ಪ್ರಸಿದ್ಧ ಕಂಪನಿಗಳ ಎಲ್ಲ ಔಷಧಗಳು ಸಿಗುವ ಜತೆಗೆ ಜನರಿಗೆ ಬೇಕಾದ ಔಷಧಗಳನ್ನು ತರಿಸಿಕೊಡಲಾಗುವುದು. ಪ್ರಾಣಿಗಳಿಗೆ ಬೇಕಾದ ಔಷಧಗಳೂ ಲಭ್ಯವಿವೆ. ಅತ್ಯುತ್ತಮ ಸೇವೆಯೊಂದಿಗೆ, ಶ್ರೇಷ್ಠ ಗುಣಮಟ್ಟದ ಔಷಧಗಳು ಲಭಿಸಲಿದೆ.


    ಅಂತಾರಾಷ್ಟಿçÃಯ ಮಟ್ಟದ ಆರ್ಥಿಕ ತಜ್ಞರಾಗಿರುವ ವರ್ಮುಡಿಯವರು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅನುಭವವನ್ನು ಹೊಂದಿದ್ದಾರೆ. ಅಡಕೆ ಮಾರುಕಟ್ಟೆ ತಜ್ಞರಾಗಿ ಬೆಳೆಗಾರರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ. ಅವರ ಕುಟುಂಬದ ಹೊಸ ಉದ್ಯಮಕ್ಕೆ ಶುಭವನ್ನು ಹಾರೈಸುತ್ತೇನೆ.
    | ಎಸ್. ಆರ್.ರಂಗಮೂರ್ತಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts