More

    ಡಾ. ಕುಡ್ತಲಕರ್ ಮರು ನೇಮಕಕ್ಕೆ ಖಂಡನೆ

    ಕಾರವಾರ: ಬಾಣಂತಿ ಗೀತಾ ಬಾನಾವಳಿ ಸಾವಿನ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಡಾ.ಶಿವಾನಂದ ಕುಡ್ತಲಕರ್ ಅವರಿಗೆ ಜಿಪಂ ಸಿಇಒ ಎಂ.ರೋಶನ್ ನೇತೃತ್ವದ ಸಮಿತಿ ಕ್ಲೀನ್ ಚಿಟ್ ನೀಡಿರುವುದು ಹಾಗೂ ಕುಡ್ತಲಕರ್ ಅವರನ್ನು ಜಿಲ್ಲಾ ಸರ್ಜನ್ ಆಗಿ ಮರು ನೇಮಕ ಮಾಡಿರುವುದನ್ನು ಖಂಡಿಸಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

    ಕೋಡಿಬಾಗದ ಕೊಂಕಣ ಖಾರ್ವಿ ಸಮಾಜದ ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಗೀತಾ ಮನೆಯ ಸಮೀಪದಿಂದ ಹೊರಟು ಎಂಜಿ ರಸ್ತೆಯಲ್ಲಿ ಮೌನ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

    ಜಿಪಂ ಸಿಇಒ ನೇತೃತ್ವದ ಸಮಿತಿಯು ತನಿಖೆ ವೇಳೆ ಮೃತಳ ಕುಟುಂಬದ ಸದಸ್ಯರ ಹೇಳಿಕೆ ಪಡೆದಿಲ್ಲ. ಆ ಸಮಿತಿ ನೀಡಿದ ವರದಿಯ ಬಗ್ಗೆ ನಮ್ಮ ಸಹಮತವಿಲ್ಲ. ಇದರಿಂದ ಪ್ರತ್ಯೇಕ ನ್ಯಾಯಾಂಗ ತನಿಖೆ ನಡೆಸಬೇಕು. ಡಾ.ಶಿವಾನಂದ ಕುಡ್ತಲಕರ್ ಅವರನ್ನು ಯಾವುದೇ ಕಾರಣಕ್ಕೂ ಜಿಲ್ಲಾ ಆಸ್ಪತ್ರಗೆ ಮರು ನೇಮಕ ಮಾಡಬಾರದು. ಡಾ.ಕುಡ್ತಲಕರ್ ವಿರುದ್ಧ ಠಾಣೆಯಲ್ಲಿ ದಾಖಲಾದ ದೂರಿನ ತನಿಖೆಯಾಗಬೇಕು. ಗೀತಾ ಬಾನಾವಳಿ ಮರಣೋತ್ತರ ಪಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರಿಗೆ ಮನವಿ ಸಲ್ಲಿಸಿದರು.

    ಗೀತಾ ಬಾನಾವಳಿ ಪತಿ ಶಿವನಾಥ ಬಾನಾವಳಿ, ನಗರಸಭೆ ಸದಸ್ಯರಾದ ರೋಶನಿ ಮಾಳ್ಸೇಕರ್, ಸ್ನೇಹಲ್ ಹರಿಕಂತ್ರ, ಸುವಿಧಾನ ಓಂ ಉಳ್ವೇಕರ್, ಶಿಲ್ಪಾ ನಾಯ್ಕ, ಮುಖಂಡರಾದ ವಿನಾಯಕ ಹರಿಕಂತ್ರ, ರಾಘು ನಾಯ್ಕ, ಸುಲಕ್ಷಾ ಬಾನಾವಳಿ, ಕಿಶೋರ ಕುಡ್ತಲಕರ್, ಗಣೇಶ ಹರಿಕಂತ್ರ, ಗಣಪತಿ ಬಾನಾವಳಿ, ಉಲ್ಲಾಸ ಅಸ್ನೋಟಿಕರ್ ಪ್ರತಿಭಟನೆಯಲ್ಲಿದ್ದರು.

    ಗೀತಾ ಬಾನಾವಳಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಜಿಪಂ ಸಿಇಒ ಎಂ.ರೋಶನ್ ನೇತೃತ್ವದ ಸಮಿತಿ ಜಿಲ್ಲಾಡಳಿತಕ್ಕೆ ನೀಡಿರುವ ವರದಿಯು ಪೊಲೀಸರ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರೋಶನ್ ನೇತೃತ್ವದ ಸಮಿತಿ ನೀಡಿದ ವರದಿಯನ್ನು ನಾವು ಯಾರಿಗೂ ನೀಡಿಲ್ಲ. ನೀಡುವುದೂ ಇಲ್ಲ. ಡಾ.ಕುಡ್ತಲಕರ್ ಅವರನ್ನು ಮರು ನೇಮಕ ಮಾಡಿದ್ದು ಸರ್ಕಾರದ ತೀರ್ವನ. ಈ ಎಲ್ಲ ಘಟನೆಯ ಬಗ್ಗೆ ನಾನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ವರದಿ ನೀಡುತ್ತೇನೆ.
    | ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts