More

    ಮಂಡ್ಯ ಅಂಚೆ ಇಲಾಖೆಯಲ್ಲಿ ಪ್ರತಿನಿಧಿಗಳ ಆಯ್ಕೆಗೆ ಜೂ.6ರಂದು ಸಂದರ್ಶನ: ಜಿಲ್ಲೆಯಲ್ಲಿ ವಾಸವಿರುವ ಅಭ್ಯರ್ಥಿಗಳಿಗಷ್ಟೇ ಅವಕಾಶ

    ಮಂಡ್ಯ: ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತಿನಿಧಿಗಳ ನೇಮಕಾತಿಗಾಗಿ ಜೂ.6ರಂದು ಬೆಳಗ್ಗೆ 10.30ಕ್ಕೆ ನಗರದ ವಿ.ವಿ ರಸ್ತೆಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.
    ನೇಮಕಾತಿಗೆ ಕನಿಷ್ಟ 18 ವರ್ಷ ವಯಸ್ಸಾಗಿದ್ದು, 10ನೇ ತರಗತಿ ತೇರ್ಗಡೆ ಹೊಂದಿರಬೇಕು. ಜಿಲ್ಲೆಯಲ್ಲಿ ವಾಸವಾಗಿರುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ. ಅರ್ಹರು 10ನೇ ತರಗತಿಯ ಅಂಕಪಟ್ಟಿ, ಪಾನ್‌ಕಾರ್ಡ್, ಆಧಾರ್‌ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಮೂರು ಭಾವಚಿತ್ರದೊಂದಿಗೆ ಅಂದು ಭಾಗವಹಿಸಬಹುದು. ಈ ಉದ್ಯೋಗವು ಸರ್ಕಾರದ ಯಾವುದೇ ಭತ್ಯೆ ಒಳಗೊಂಡಿರುವುದಿಲ್ಲ. ಬದಲಿಗೆ ಪ್ರತಿನಿಧಿಗಳು ಮಾರಾಟ ಮಾಡಿದ ಉತ್ಪನ್ನಗಳ ಆಧಾರದ ಮೆಲೆ ಕಮಿಷನ್ ರೂಪದಲ್ಲಿ ಪ್ರೋತ್ಸಾಹಧನವನ್ನು ನೀಡಲಾಗುವುದು. ಮಾಹಿತಿಗೆ ಮೊ.ಸಂ 9483658775 ಯನ್ನು ಸಂಪರ್ಕಿಸಬಹುದು ಎಂದು ಮಂಡ್ಯ ವಿಭಾಗ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts