More

    ಸದಸ್ಯ ಕಾರ್ಯದರ್ಶಿ ಸ್ಥಾನಕ್ಕೆ ಒಬ್ಬರನ್ನು ನೇಮಕ ಮಾಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

    ಬೆಂಗಳೂರು: ಪಕ್ಷಿ ಸಂರಕ್ಷಿತ ವಲಯವಾಗಿರುವ ಯಲಹಂಕದ ಪುಟ್ಟೇನಹಳ್ಳಿ ಕೆರೆ ನಿರ್ವಹಣೆಗೆ ರಚಿಸಲಾಗಿರುವ ರಕ್ಷಿತ ಜಲಾಶಯ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸ್ಥಾನಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅಥವಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಪೈಕಿ ಯಾರಾದರೂ ಒಬ್ಬರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

    ಪುಟ್ಟೇನಹಳ್ಳಿ ಕೆರೆ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಯಲಹಂಕ ಪುಟ್ಟೇನಹಳ್ಳಿ ಕೆರೆ-ಪಕ್ಷಿ ಸಂರಕ್ಷಣಾ ಟ್ರಸ್ಟ್ ಮತ್ತು ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಪಿಐಎಲ್ ಅನ್ನು ಸಿಜೆ ಎ.ಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಸರ್ಕಾರದ ಪರ ವಕೀಲರು, ಕೆರೆ ನಿರ್ವಹಣೆಗೆ ರಕ್ಷಿತ ಜಲಾಶಯ ನಿರ್ವಹಣಾ ಸಮಿತಿಯನ್ನು ಮರುರಚನೆ ಮಾಡಿ ಆ.24ರಂದು ಹೊರಡಿಸಿರುವ ಆದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

    ಇದನ್ನೂ ಓದಿ: ರಷ್ಯಾಕ್ಕೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸರ್ಕಾರದ ಆದೇಶದಲ್ಲಿ ಡಿಸಿಎಫ್ ಹಾಗೂ ಎಸಿಎಫ್ ಇಬ್ಬರನ್ನೂ ಉಲ್ಲೇಖಿಸಲಾಗಿದ್ದು, ಇಬ್ಬರಲ್ಲಿ ಯಾರಾದರೂ ಸದಸ್ಯ ಕಾರ್ಯದರ್ಶಿಯ ಕರ್ತವ್ಯ ನಿರ್ವಹಿಸಬಹುದು ಎಂದು ತಿಳಿಸಿದೆ. ಇದು ಸರಿಯಾದ ಕ್ರಮವಲ್ಲ. ನಿರ್ದಿಷ್ಟವಾಗಿ ಯಾರಾದರೂ ಒಬ್ಬರು ಮಾತ್ರ ಇರಬೇಕು, ಅದರಲ್ಲೂ ಡಿಸಿಎಫ್ ಇರುವುದು ಸೂಕ್ತ ಎಂದರು.

    ಇದನ್ನೂ ಓದಿ: ಸುದೀಪ್​ ಹುಟ್ಟುಹಬ್ಬಕ್ಕೆ ‘ಫ್ಯಾಂಟಮ್​’ ಟೀಸರ್​ ಇಲ್ಲ … ಯಾಕೆ?

    ನ್ಯಾಯಪೀಠ ಪ್ರತಿಕ್ರಿಯಿಸಿ, ಸಮಿತಿಯಲ್ಲಿ ಡಿಸಿಎಫ್ ಅಥವಾ ಎಸಿಎಫ್ ಇಬ್ಬರಲ್ಲಿ ಒಬ್ಬರು ಮಾತ್ರ ಇರುವುದು ಸೂಕ್ತ. ಆದ್ದರಿಂದ, ಆ.24ರ ಆದೇಶ ತಿದ್ದಪಡಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತು. ಜತೆಗೆ, ಸಮಿತಿ ಕಾರ್ಯ ನಿರ್ವಹಣೆ ಕುರಿತ ವರದಿ ಹಾಗೂ ಸೆ. 30ರವರೆಗೆ ಸಮಿತಿ ನಡೆಸಿದ ಸಭೆಗಳು ಮತ್ತು ಕೈಗೊಂಡ ಕ್ರಮಗಳ ಕುರಿತು ಸದಸ್ಯ ಕಾರ್ಯದರ್ಶಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿ ಅ.1ಕ್ಕೆ ವಿಚಾರಣೆ ಮುಂದೂಡಿತು.

    ಅವಹೇಳನಕಾರಿ ಪೋಸ್ಟ್ ಹಾಕಿದ್ದವನ ಬಂಧನ|ಮುನಿರತ್ನ ಬೆಂಬಲಿಗನಿಂದ ಪೊಲೀಸರಿಗೆ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts