ಐಐಎಂಗಳಲ್ಲಿ ಮಹಾತ್ಮ ಗಾಂಧಿ ನಾಷನಲ್ ಫೆಲೋಶಿಪ್​ಗೆ ಅರ್ಜಿ ಆಹ್ವಾನ; ಮಾರ್ಚ್ 27 ಕೊನೆಯ ದಿನಾಂಕ

blank

ಬೆಂಗಳೂರು/ನವದೆಹಲಿ : ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಬಯಕೆ ಹೊಂದಿರುವ ಯುವಜನರಿಗೆ ಐಐಎಂಗಳಲ್ಲಿ ವಿಶೇಷ ತರಬೇತಿ ಪಡೆಯುವ ಅವಕಾಶ ಲಭ್ಯವಾಗಿದೆ. ಕೂಡಲೇ ಮಹಾತ್ಮ ಗಾಂಧಿ ನಾಷನಲ್ ಫೆಲೋಶಿಪ್​ ಪಡೆಯಲು ಅರ್ಜಿ ಹಾಕಿ ಈ ವಿನೂತನ ಕೋರ್ಸ್​ನ ಪ್ರಯೋಜನ ಪಡೆಯಬಹುದು.

blank

ಜಿಲ್ಲಾ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಕೌಶಲ್ಯ ಯೋಜನೆಯನ್ನು ಉತ್ತೇಜಿಸಲು ರೂಪಿಸಿರುವ ಈ ಎರಡು ವರ್ಷಗಳ ಬ್ಲೆಂಡೆಡ್​ ಪ್ರೋಗ್ರಾಂನಲ್ಲಿ, ಪ್ರಾಯೋಗಿಕ ಕೆಲಸದೊಂದಿಗೆ ಐಐಎಂಗಳಲ್ಲಿ ತರಗತಿಗಳನ್ನು ತೆಗೆದುಕೊಳ್ಳುವ ವಿನೂತನ ಅವಕಾಶವಿದೆ. ಅಭಿವೃದ್ಧಿಯ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಲು ಸಹಾಯಕವಾಗಿ ಈ ಫೆಲೋಶಿಪ್​ಗೆ ಆಯ್ಕೆಯಾದವರಿಗೆ ಐಐಎಂ ಫಾಕಲ್ಟಿಯ ಮಾರ್ಗದರ್ಶನದಲ್ಲಿ ಅಕಾಡೆಮಿಕ್ ಇನ್ಪುಟ್ಸ್​ ನೀಡಲಾಗುವುದು. ಜೊತೆಯಲ್ಲೇ ಡಿಸ್ಟ್ರಿಕ್ಟ್​ ಇಮ್ಮರ್ಷನ್ಸ್​ ಅಡಿ ಪ್ರಾಯೋಗಿಕ ಅನುಭವ ಪಡೆಯಬಹುದು.

ಇದನ್ನೂ ಓದಿ: ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿ ; ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನರಸಿಂಹಮೂರ್ತಿ ಸಲಹೆ

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಗಾರಿಕೆ ಸಚಿವಾಲಯ ಮತ್ತು ಒಂಭತ್ತು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್(ಐಐಎಂ)​ಗಳು ಜಂಟಿಯಾಗಿ ಈ ಫೆಲೋಶಿಪ್​ಗೆ ಅರ್ಜಿ ಆಹ್ವಾನಿಸಿವೆ. ಬೆಂಗಳೂರಿನ ಐಐಎಂ ಅಡ್ಮಿಷನ್ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಮಾರ್ಚ್ 27 ರವರೆಗೆ ಅಧಿಕೃತ ವೆಬ್​ಸೈಟ್​ ಆದ iimb.ac.in/mgnf ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿದಾರರು 21 ರಿಂದ 30 ವರ್ಷ ವಯಸ್ಸಿನ ಭಾರತೀಯ ನಾಗರೀಕರಾಗಿರಬೇಕು. ಯಾವುದೇ ಗುರುತಿಸಲ್ಪಟ್ಟ ವಿವಿಯಿಂದ ಪದವಿ ಹೊಂದಿರಬೇಕು. ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಾಗಿ ಆಯಾ ರಾಜ್ಯದ ಅಧಿಕೃತ ಭಾಷೆಯಲ್ಲಿ ಪರಿಣತಿ ಹೊಂದಿರಬೇಕು. ಮಾರ್ಚ್ 27 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. (ಏಜೆನ್ಸೀಸ್)

VIDEO | ಅಮ್ಮನೊಂದಿಗೆ ಪುಟ್ಟ ಕಂದನ ಜುಗಲ್​ಬಂದಿ !

“ಹಿಂದೆ ಮಹಿಳೆಯರ ಸೊಂಟ ನಂಬರ್ 8 ರಂತೆ ಇರುತ್ತಿತ್ತು, ಈಗ ಡ್ರಮ್ಮಿನಂತಾಗಿದ್ದಾರೆ” ಎಂದ ಡಿಎಂಕೆ ಅಭ್ಯರ್ಥಿ

ಹ್ಯಾಪಿ ಶಾಪಿಂಗ್ : ಕರೊನಾ ಲಸಿಕೆ ಪಡೆದವರಿಗೆ ಡಿಸ್ಕೌಂಟ್ ಕೂಪನ್​ !

Share This Article
blank

ಬಿಸಾಡುವ ಮುನ್ನ ತಿಳಿಯಿರಿ Watermelon Seeds ಪವರ್​​: ಇದರಲ್ಲಿದೆ 5 ನಂಬಲಾಗದ ಆರೋಗ್ಯ ಪ್ರಯೋಜನೆಗಳು

Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

blank