More

    ಸಾಲ ಆ್ಯಪ್​ ಹಗರಣ, ಚೀನಾ ಪ್ರಜೆ ಬಂಧನ; 11 ಆ್ಯಪ್​ ಬಳಕೆ ಬೇಡ ಎಂದ ಪೊಲೀಸರು

    ಹೈದರಾಬಾದ್: ಸಾಲ ನೀಡುವ ಆ್ಯಪ್​​ಗಳ (ಲೋನ್ ಆ್ಯಪ್​) ಮೂಲಕ ವಂಚಿಸಿದ ಹಗರಣ ಸಂಬಂಧ ಚೀನಿ ಪ್ರಜೆಯೊಬ್ಬನ ಸಹಿತ ನಾಲ್ವರನ್ನು ಸೈಬರಾಬಾದ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ತೆಲಂಗಾಣ ಪೊಲೀಸರು ಹೈದರಾಬಾದ್ ಮತ್ತು ಗುರುಗ್ರಾಮಗಳಲ್ಲಿ 16 ಜನರನ್ನು ಬಂಧಿಸಿದ್ದರು.

    ಸೈಬರಾಬಾದ್​ನ ಸೈಬರ್ ಕ್ರೖೆಂ ಪೊಲೀಸರು ಕ್ಯುಬೆವೊ ಟೆಕ್ನಾಲಜಿ ಸಂಸ್ಥೆಯ ಕಾಲ್​ಸೆಂಟರ್ ಮೇಲೆ ದಾಳಿ ನಡೆಸಿ ಅಲ್ಲಿನ ನೌಕರರಾದ ಚೀನಿ ಪ್ರಜೆ ಯೀ ಬಾಯ್ ಆಲಿಯಾಸ್ ಡೆನ್ನಿಸ್, ಸತ್ವ ಪಾಲ್ ಖ್ವಲಿಯಾ, ಅನಿರಿಧ್ ಮಲ್ಹೋತ್ರಾ (ಇಬ್ಬರೂ ರಾಜಸ್ಥಾನದವರು) ಮತ್ತು ಆಂಧ್ರ ಪ್ರದೇಶದ ಮುರತೋಟಿ ರಿಚೀ ಹೇಮಂತ್ ಸೇಠ್​ರನ್ನು ಬಂಧಿಸಿದರು. ಸುಲಭವಾಗಿ ಸಾಲ ನೀಡುವುದಾಗಿ ಆಮಿಷ ತೋರಿಸಿ ಅಪಾರ ಬಡ್ಡಿ ವಿಧಿಸಿ ಜನರನ್ನು ಸುಲಿಗೆ ಮಾಡಲು ಆಪ್​ಗಳನ್ನು ಖದೀಮರು ಬಳಸುತ್ತಿದ್ದರು.

    ನೀತಿ ಸಂಹಿತೆ: ಅಕ್ರಮ ಲೋನ್ ಆಪ್​ಗಳಿಗೆ ಆರ್​ಬಿಐ ಎಚ್ಚರಿಕೆ ನೀಡಿರುವ ಬೆನ್ನಿಗೆ ಐದು ಖಾಸಗಿ ಆನ್​ಲೈನ್ ಹಣಕಾಸು ಸಂಸ್ಥೆಗಳ ಕೂಟವಾದ ಫಿನ್​ಟೆಕ್ ಅಸೋಸಿಯೇಷನ್ ಫಾರ್ ಕನ್ಸ್ಯೂಮರ್ ಎಂಪವರ್​ವೆುಂಟ್ (ಫೇಸ್) ಗ್ರಾಹಕರ ಹಕ್ಕುಗಳು ಮತ್ತು ಹಿತಗಳ ರಕ್ಷಣೆಗಾಗಿ ನೀತಿಸಂಹಿತೆ ರೂಪಿಸಿದೆ.

    ಈ ಆ್ಯಪ್ ಬಳಸದಂತೆ ಸಲಹೆ: ಲೋನ್ ಗ್ರಾಂ, ಕ್ಯಾಶ್ ಟ್ರೇನ್, ಕ್ಯಾಶ್ ಬಸ್ , ಎಎಎ ಕ್ಯಾಶ್, ಸೂಪರ್ ಕ್ಯಾಶ್, ಮಿಂಟ್ ಕ್ಯಾಶ್, ಹ್ಯಾಪಿ ಕ್ಯಾಶ್, ಲೋನ್ ಕಾರ್ಡ್, ರೀಪೇ ಒನ್, ಮನಿ ಬಾಕ್ಸ್, ಮಂಕಿ ಬಾಕ್ಸ್ ಆಪ್​ಗಳನ್ನು ಬಳಸದಂತೆ ಪೊಲೀಸರು ಸಲಹೆ ನೀಡಿದ್ದಾರೆ.

    ಫಲಿತಾಂಶ ನೋಡಲು ಅಭ್ಯರ್ಥಿಯೇ ಇಲ್ಲ; ಗ್ರಾಮ ಪಂಚಾಯತ್ ಚುನಾವಣೆ ಸುತ್ತಮುತ್ತ ಅಭ್ಯರ್ಥಿಗಳಿಬ್ಬರ ಸಾವು!

    ನೈಟ್​ ಕರ್ಫ್ಯೂ ಇಲ್ಲ ಅಂತ ಹೊಸ ವರ್ಷಕ್ಕೆ ಬೇಕಾಬಿಟ್ಟಿ ಓಡಾಡಿದರೆ ಬೀಳುತ್ತೆ ಕೇಸ್​! ಬೆಂಗಳೂರಲ್ಲಿ ನ್ಯೂ ಇಯರ್​ ಪಾರ್ಟಿಗೆ ಬ್ರೇಕ್​!

    ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಮುಕೇಶ್​ ಅಂಬಾನಿ ಈಗ ಟಾಪ್​ 10ನಿಂದಲೇ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts