More

    ನೈಜೀರಿಯಾಕ್ಕಾಗಿ ಆ್ಯಪ್​ ಅಭಿವೃದ್ಧಿಪಡಿಸಿದ್ದವ ತುಂಡು, ತುಂಡಾಗಿ ಹೋದ!

    ನವದೆಹಲಿ: ಆತ ಬಾಂಗ್ಲಾದೇಶಿ ಮೂಲದ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥ. ನೈಜೀರಿಯಾದ ಗೋಕಾಡಾ ರೈಡ್​ ಆ್ಯಪ್​ ಅನ್ನು ಅಭಿವೃದ್ಧಿಪಡಿಸಿಕೊಟ್ಟಿದ್ದ. ಆದರೆ, ನ್ಯೂಯಾರ್ಕ್​ನ ತನ್ನ ಐಷಾರಾಮಿ ಬಂಗೆಯಲ್ಲೇ ಕೊಲೆಯಾಗಿ ತುಂಡು ತುಂಡಾಗಿ ಹೋಗಿದ್ದಾನೆ. ಆತನ ರುಂಡ ಒಂದು ಕಡೆ ಬಿದ್ದಿದ್ದರೆ, ಮುಂಡ ಇನ್ನೊಂದು ಕಡೆ ಬಿದ್ದಿತ್ತು. ಅಲ್ಲದೆ ಕೈ-ಕಾಲನ್ನು ಕೂಡ ಕತ್ತರಿಸಿ ಪ್ಲಾಸ್ಟಿಕ್​ ಕವರ್​ಗಳಿಗೆ ತುಂಬಲಾಗಿತ್ತು!

    ಫಹೀಂ ಸಲೇಹ್​ (33) ಕೊಲೆಯಾದವ. ನ್ಯೂಯಾರ್ಕ್​ನ ಈಸ್ಟ್​ ಸೈಡ್​ನಲ್ಲಿರುವ ತನ್ನ ಅಪಾರ್ಟ್​ಮೆಂಟ್​ನಲ್ಲೇ ಆತ ಕೊಲೆಗೀಡಾಗಿದ್ದಾನೆ. ಈತನ ಕೊಲೆಗಾರರು ಬಳಿಕ ಈತನ ದೇಹವನ್ನು ಪವರ್​ಸಾ ಬಳಸಿ ತುಂಡು ತುಂಡಾಗಿ ಕತ್ತರಿಸಿದ್ದಾರೆ. ಕೈ-ಕಾಲುಗಳನ್ನು ಪ್ಲಾಸ್ಟಿಕ್​ ಚೀಲಗಳಿಗೆ ತುಂಬಿದ್ದಾರೆ. ರುಂಡವನ್ನು ತುಂಡು ಮಾಡಿದ್ದು, ಮುಂಡವನ್ನು ಬೇರ್ಪಡಿಸುವಷ್ಟರಲ್ಲಿ ಮೃತನ ಸಹೋದರಿ ಅಪಾರ್ಟ್​ಮೆಂಟ್​ಗೆ ಬಂದಿದ್ದಾಳೆ. ಇದರಿಂದ ಬೆದರಿದ ಕೊಲೆಗಾರರು ಅಪಾರ್ಟ್​ಮೆಂಟ್​ನ ಮತ್ತೊಂದು ಬಾಗಿಲ ಮೂಲಕ ಓಡಿ ಹೋಗಿದ್ದಾರೆ ಎಂದು ನ್ಯೂಯಾರ್ಕ್​ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ತಿರುಪತಿ ದೇವಸ್ಥಾನದ 15 ಅರ್ಚಕರಿಗೆ ಕರೊನಾ ಸೋಂಕು

    ಫಹೀಂನ ಕತ್ತರಿಸಿದ ದೇಹದ ಭಾಗಗಳೆಲ್ಲವೂ ಕೃತ್ಯ ನಡೆದ ಸ್ಥಳದಲ್ಲೇ ಪತ್ತೆಯಾಗಿವೆ. ಈತನನ್ನು ಏಕೆ ಕೊಲೆ ಮಾಡಲಾಯಿತು, ಕೊಲೆಗಾರರು ಯಾರೆಂಬ ಬಗ್ಗೆ ತನಿಖೆ ಈಗಾಗಲೆ ಆರಂಭವಾಗಿದೆ ಎಂದು ಹೇಳಿದ್ದಾರೆ.

    ಕೊಲೆಗಾರ ಫಹೀಂಗೆ ಪರಿಚಿತನಾಗಿದ್ದ. ಕಪ್ಪುಬಣ್ಣದ ಸೂಟ್​, ಮಾಸ್ಕ್​ ಮತ್ತು ಗ್ಲೌಸ್​ ಧರಿಸಿದ್ದ ಆತನನ್ನು ಲಿಫ್ಟ್​ನಲ್ಲಿ ಅವರೇ ಕರೆತಂದಿರುವುದು ಸಿಸಿ ಕ್ಯಾಮರಾದ ದೃಶ್ಯಗಳಿಂದ ಖಚಿತಪಟ್ಟಿದೆ ಎಂದು ತಿಳಿಸಿದ್ದಾರೆ.

    ಕಡಿಮೆ ಅವಧಿಯ ಸೇವೆ ಸಲ್ಲಿಸಿದ ಸೈನಿಕರಿಗೂ ಪಿಂಚಣಿ- ಕೇಂದ್ರದ ಮಹತ್ತರ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts