More

    ಆ್ಯಂಟಿ ಕೋವಿಡ್​ ಡ್ರಗ್​ ರೂಪಿಸಿದ ಡಿಆರ್​ಡಿಒ ! ತುರ್ತು ಬಳಕೆಗೆ ಅನುಮೋದನೆ

    ನವದೆಹಲಿ : ಕರೊನಾ ಎರಡನೇ ಅಲೆಯ ಹೊಡೆತಕ್ಕೆ ತತ್ತರಿಸಿರುವ ಭಾರತೀಯರಿಗೆ ಒಂದು ಆಶಾ ಕಿರಣ ಕಂಡುಬಂದಿದೆ. ಕರೊನಾ ರೋಗಿಗಳ ಚೇತರಿಕೆಗೆ ಸಹಾಯ ಮಾಡುವ ಆ್ಯಂಟಿ ಕೋವಿಡ್​ ಡ್ರಗ್ ಒಂದರ ತುರ್ತು ಬಳಕೆಗೆ ಭಾರತದ ಡ್ರಗ್​ ಕಂಟ್ರೋಲರ್​ ಜನರಲ್ ಅನುಮೋದನೆ ನೀಡಿದ್ದಾರೆ. ಈ ಔಷಧವನ್ನು ಡಿಫೆನ್ಸ್​ ರಿಸರ್ಚ್​ ಅಂಡ್ ಡೆವಲಪ್​ಮೆಂಟ್​ ಆರ್ಗನೈಸೇಷನ್(ಡಿಆರ್​ಡಿಒ) ಮತ್ತು ಹೈದರಾಬಾದ್​ನ ಡಾ.ರೆಡ್ಡೀಸ್ ಲ್ಯಾಬರೇಟರೀಸ್​ ಜಂಟಿಯಾಗಿ ರೂಪಿಸಿವೆ.

    “2-ಡಿಆಕ್ಸಿ-ಡಿ-ಗ್ಲೂಕೋಸ್” ​(2ಡಿಜಿ) ಡ್ರಗ್​ನ ಚಿಕಿತ್ಸೀಯ ಮಾದರಿಯಾಗಿರುವ ಈ ಔಷಧಿಯ ಕ್ಲಿನಿಕಲ್​ ಟ್ರಯಲ್​​ಗಳ ಸಕಾರಾತ್ಮಕ ಫಲಿತಾಂಶಗಳನ್ನು ಪರಿಗಣಿಸಿ ಅನುಮೋದನೆ ನೀಡಲಾಗಿದೆ. ಸಾಚೆಟ್​ನಲ್ಲಿ ಪೌಡರ್​ ರೂಪದಲ್ಲಿ ಬರುವ ಈ ಆ್ಯಂಟಿ ಕೋವಿಡ್​ ಔಷಧಿಯನ್ನು ರೋಗಿಗಳು ನೀರಿನಲ್ಲಿ ಬೆರೆಸಿ ನುಂಗಬಹುದಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಮುಂದುವರೆದ ಭ್ರಷ್ಟಾಚಾರ ಆರೋಪ : ಮಾಜಿ ಪೊಲೀಸ್​ ಕಮಿಷನರ್​ ವಿರುದ್ಧ ವ್ಯಾಪಾರಿಗಳ ಹೇಳಿಕೆ ದಾಖಲು

    ಈ ಆ್ಯಂಟಿ ಕೋವಿಡ್​ ಡ್ರಗ್​ನಲ್ಲಿರುವ ಒಂದು ಮಾಲಿಕ್ಯೂಲ್ ಆಸ್ಪತ್ರೆಗೆ ದಾಖಲಾಗಿರುವ ಕರೊನಾ ರೋಗಿಗಳ ಶೀಘ್ರ ಚೇತರಿಕೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಚಿಕಿತ್ಸಕ ಆಕ್ಸಿಜನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್​ ಟ್ರಯಲ್​ ಫಲಿತಾಂಶಗಳು ತಿಳಿಸಿವೆ.ಈ ಔಷಧಿಯನ್ನು ನೀಡಲಾದ ಹೆಚ್ಚು ಜನ ರೋಗಿಗಳಿಗೆ ಆರ್​ಟಿಪಿಸಿಆರ್​ ಟೆಸ್ಟ್​ಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಡಿಆರ್​ಡಿಒ ಮಾಹಿತಿ ನೀಡಿ ವಿಡಿಯೋ ಒಂದನ್ನು ಟ್ವೀಟ್​ ಮಾಡಿದೆ.

    ಮೇ ಮತ್ತು ಅಕ್ಟೋಬರ್​​ಗಳಲ್ಲಿ 110 ರೋಗಿಗಳ ಮೇಲೆ ಎರಡನೇ ಸುತ್ತಿನ ಟ್ರಯಲ್​ಗಳನ್ನು ನಡೆಸಿದ್ದು,ಕರೊನಾ ರೋಗಿಗಳಿಗೆ ನೀಡಲು ಸುರಕ್ಷಿತವಾಗಿದೆ ಮತ್ತು ಅವರ ಚೇತರಿಕೆಯಲ್ಲಿ ಮಹತ್ವದ ಕೊಡುಗೆ ನೀಡುತ್ತದೆ ಎಂಬುದು ತಿಳದುಬಂತು.ನಂತರ ಆರು ಆಸ್ಪತ್ರೆಗಳಲ್ಲಿ ಮೂರನೇ ಸುತ್ತಿನ ಟ್ರಯಲ್​​ ನಡೆಸಲಾಯಿತು ಮತ್ತು ದೇಶದ ವಿವಿಧೆಡೆಯ 11 ಆಸ್ಪತ್ರೆಗಳಲ್ಲಿ ಡೋಸ್​ ರೇಂಜಿಂಗ್​ ನಡೆಸಲಾಯಿತು ಎಂದು ತಿಳಿದುಬಂದಿದೆ. (ಏಜೆನ್ಸೀಸ್)

    ಕರೊನಾ ಸಮರದಲ್ಲಿ ಸಾಥ್​ ನೀಡಲಿದ್ದಾರೆ 8 ಲಕ್ಷ ಆಯುಷ್​​ ವೈದ್ಯರು

    ಜೈಲಿನಲ್ಲಿ ಜನದಟ್ಟಣೆ : ಚಿಕ್ಕ ಅಪರಾಧಗಳಲ್ಲಿ ಬಂಧನ ಬೇಡ ಎಂದ ಸುಪ್ರೀಂ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts