More

    ಅಂತರಂಗ: ಕೋಪಗೊಳ್ಳದಿರುವುದು

    ಅಂತರಂಗ: ಕೋಪಗೊಳ್ಳದಿರುವುದುಕನ್ನಡದಲ್ಲಿನ ಒಂದು ಗಾದೆಮಾತು ಇದೆ. “ಸಿಟ್ಟು ತನ್ನ ವೈರಿ, ಶಾಂತಿ ಪರರ ವೈರಿ’. ಇನ್ನೂ ಒಂದು ಮಾತಿದೆ& ಸಿಟ್ಟು ಬಂದಾಗ ಹತ್ತು ಅಂಕಿಯನ್ನು ಎಣಿಸಬೇಕು. ಇಷ್ಟಕ್ಕೂ ಶಾಂತವಾಗದಿದ್ದರೆ, ನೂರು ಅಂಕಿ ಎಣಿಸಬೇಕು ಎಂಬುದು. ಕೋಪದ ಬಗ್ಗೆ ವೀರ ವಿರಾಗಿಣಿ ಮಹಾದೇವಿ ಅಕ್ಕ, ಲೋಕದಲ್ಲಿ ಹುಟ್ಟಿದ ಬಳಿಕ ಒಳ್ಳೆಯವರಿಂದ ಸ್ತುತಿ, ದುಷ್ಟರಿಂದ ನಿಂದೆ ಬರುವುದು ಅನಿವಾರ್ಯ. ಸ್ತುತಿ ಬಂದಾಗ ಹಿಗ್ಗದೆ, ನಿಂದೆ ಬಂದಾಗ ಕುಗ್ಗದೆ, ಸಮಾಧಾನಿಯಾಗಿ, ಚಿತ್ತ ಸಮತೆಯನ್ನು ಕಾಯ್ದುಕೊಂಡು ಹೋಗಬೇಕು ಎಂದು ತಿಳಿಸುತ್ತಾಳೆ.

    ಕೋಪದಲ್ಲಿ ನಾಲ್ಕು ಪ್ರಕಾರಗಳು. ತಾಮಸ, ರಾಜಸ, ಸಾತ್ವಿಕ ಮತ್ತು ಮಹಾತ್ಮರ ಕೋಪ. ಇವುಗಳಲ್ಲಿ ತಾಮಸ ದನಗಳ ಚರ್ಮದ ಮೇಲೆ ಬರೆ ಎಳೆದಂತೆ, ಹೋಗಲಾರದ್ದು. ಇದು ಪಾಪಿಗಳ ಕೋಪ. ಇನ್ನು ರಾಜಸ ಕೋಪ ಕಲ್ಲಿನ ಮೇಲೆ ಗೆರೆ ಎಳೆದಂತೆ, ಕಾಲ ಗತಿಸಿದಂತೆ ಕಲ್ಲಿನ ಮೇಲಿನ ಗೆರೆ ಅಳುಕುವುದು ಹಾಗೆ ಸಮಾಧಾನದಿಂದ ಕಡಿಮೆ ಆಗುವುದು. ಮೂರನೆಯ ಕೋಪ ಉಸುಕಿನ ಮೇಲೆ ಗೆರೆ ಎಳೆದಂತೆ, ಗಾಳಿ ಬಿಟ್ಟಾಗ ಅಳಿಸಿ ಹೋಗುತ್ತದೆ. ಇದು ಸಾತ್ವಿಕರ ಕೋಪ.

    ಇನ್ನು ನಾಲ್ಕನೆಯದ್ದು ಮಹಾತ್ಮರ ಕೋಪ, ನೀರಿನ ಮೇಲೆ ಗೆರೆ ಎಳೆದಂತೆ. ತಕ್ಷಣವೇ ಹೋಗಿಬಿಡುತ್ತದೆ. ಅಲ್ಲಿ ಸೇಡು, ದ್ವೇಷ ಯಾವುದೂ ಇರುವುದಿಲ್ಲ. ಸಿಟ್ಟು ಜನ್ಮ ಶತ್ರುವಾಗಿದೆ. ಕ್ರೋಧಾಗ್ನಿಯು ವೈರಿಯ ಸಲುವಾಗಿ ಯಾರಲ್ಲ್ಲಿ ಇರುತ್ತದೆಯೋ ಅವರಿಗೇ ಸುಡುತ್ತದೆ. ಅದಕ್ಕೆ ಬಸವಣ್ಣನವರು “ಮನೆಯೊಳಗಣ ಕಿಚ್ಚು ಮನೆಯ ಸುಡುವುದಲ್ಲದೆ, ನೆರೆಮನೆಯ ಸುಡದು’ ಎಂದಿದ್ದಾರೆ. ಸರ್ವಜ್ಞ “ಕೋಪವೆಂಬುದು ಪಾಪದ ನೆಲೆಗಟ್ಟು’ ಎಂದರು. ಪಾಪದ ಅಡಿಪಾಯ ಸಿಟ್ಟು. ಹಿಡಿತ ಕೈ ತಪ್ಪಿದಾಗ ಕಷ್ಟ&ನಷ್ಟಗಳನ್ನು ತಂದೊಡ್ಡುತ್ತದೆ. ಸಿಟ್ಟು ದುಃಖ ದಾರಿದ್ರಗಳ ತಾಯಿಯಂತೆ. ಪ್ರತಿಯೊಬ್ಬರೂ ಶಾಂತಿ ಸಮಾಧಾನದಿಂದ ನಡೆದರೆ ಶಾಂತಿ&ಶಾಂತಿ ಎಂದು ಹಿಂದಿನ ಮಹಾತ್ಮರು, ದೇಶ ಭಕ್ತರು ಹೇಳಿದ್ದು ಸಾರ್ಥಕವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts