More

    ಸಿಟ್ಟಾದ ಟೆನಿಸ್ ತಾರೆ ಜೋಕೊವಿಕ್ ಕೋರ್ಟ್‌ನಲ್ಲಿ ಮಾಡಿದ್ದೇನು ಗೊತ್ತೇ?

    ರೋಮ್: ಸೆರ್ಬಿಯಾದ ವಿಶ್ವ ನಂ.1 ಆಟಗಾರ ನೊವಾಕ್ ಜೋಕೊವಿಕ್ ಕೋರ್ಟ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನಸೆಳೆಯುವ ಆಟಗಾರ. ಸಿಂಗಲ್ಸ್ ವಿಭಾಗದಲ್ಲಿ 18 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿರುವ ಜೋಕೋ ಅದೆಷ್ಟೋ ಯುವಕರಿಗೆ ಮಾದರಿಯಾಗಿದ್ದಾರೆ. ಆದರೆ, ಕೋರ್ಟ್‌ನಲ್ಲಿ ತಾಳ್ಮೆ ಕಳೆದುಕೊಳ್ಳುವುದು ಕೂಡ ಜೋಕೋಗೆ ಸಾಮಾನ್ಯವಾಗಿದೆ. ಶನಿವಾರ ಮತ್ತೊಮ್ಮೆ ಇಂಥ ಪ್ರಸಂಗಕ್ಕೆ ಜೋಕೋ ಸಾಕ್ಷಿಯಾಗಿದ್ದಾರೆ. ಕೋರ್ಟ್‌ನಲ್ಲಿ ತಾವು ಮಾಡಿಕೊಳ್ಳುತ್ತಿದ್ದ ಎಡವಟ್ಟಿಗೆ ರಾಕೆಟ್ ಬಿಸಾಡಿದ ಘಟನೆ ಜರುಗಿದೆ. ಜೋಕೋ ಹಾಗೂ ಸ್ಟೇಪಾನೊಸ್ ಸಿಸಿಪಾಸ್ ನಡುವಿನ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದ ವೇಳೆ ಈ ಘಟನೆ ನಡೆದಿದೆ.

    ಇದನ್ನೂ ಓದಿ: ಸನ್​ರೈಸರ್ಸ್ ತಂಡದ ನಾಯಕತ್ವ ತ್ಯಜಿಸುವಾಗ ಡೇವಿಡ್​ ವಾರ್ನರ್​ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?, 

    ಶುಕ್ರವಾರ ಆರಂಭಗೊಂಡ ಜೋಕೋ ಹಾಗೂ ಸ್ಟೇಪಾನೊಸ್ ಸಿಸಿಪಾಸ್ ನಡುವಿನ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯ ಮಳೆಯಿಂದಾಗಿ ಶನಿವಾರಕ್ಕೆ ಮುಂದೂಡಲಾಗಿತ್ತು. ಶುಕ್ರವಾರ ಆಟ ನಿಂತಾಗ ಜೋಕೋ 4-6, 1-2 ರಿಂದ ಹಿನ್ನಡೆಯಲ್ಲಿದ್ದರು. ಮಳೆಯಿಂದಾಗಿ ಪಂದ್ಯ ಶನಿವಾರವೂ ಮೂರುವರೆ ಗಂಟೆಗಳ ಕಾಲ ತಡವಾಗಿ ಪಂದ್ಯ ಆರಂಭಗೊಂಡಿತು. ಎರಡನೇ ಸೆಟ್‌ನಲ್ಲಿ ಜೋಕೋ ತಿರುಗೇಟು ನೀಡುವ ಮೂಲಕ 7-5 ರಿಂದ ಜಯ ದಾಖಲಿಸಿದರು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಕೆಲವೊಂದು ತಪ್ಪುಗಳಿಂದ ನೆಟ್‌ಗೆ ಸತತವಾಗಿ ಚೆಂಡು ಹೊಡೆದ ಫಲವಾಗಿ ಆರಂಭದಲ್ಲೇ 1-2 ರಿಂದ ಹಿನ್ನಡೆ ಅನುಭವಿಸಿದರು. ಇದರಿಂದ ಬೇಸತ್ತ ಜೋಕೋ ರಾಕೆಟ್‌ಅನ್ನು ಕೋರ್ಟ್ ಬದಿಯಲ್ಲಿದ್ದ ಜಾಹೀರಾತು ಫಲಕ್ಕೆ ಎಸೆದು ಕೋಪವನ್ನು ಹೊರಹಾಕಿದರು. ಈ ವೇಳೆ ಚೇರ್ ಅಂಪೈರ್ ಜೋಕೋಗೆ ಎಚ್ಚರಿಕೆ ನೀಡಿದರು. ಅಂತಿಮವಾಗಿ ಜೋಕೋ ಪಂದ್ಯದಲ್ಲಿ ಜಯದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದರು.

    ಇದನ್ನೂ ಓದಿ: ತುಗೂಯ್ಯಾಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್​ ಭವಿಷ್ಯ

    ಇದಕ್ಕೂ ಮೊದಲು ಎರಡನೇ ಸುತ್ತಿನ ಪಂದ್ಯದ ವೇಳೆ ಮಳೆ ಬಂದರೂ ಆಟ ಸ್ಥಗಿತಗೊಳಿಸದ ಕಾರಣ ಅಂಪೈರ್ ಮೇಲೆ ಜೋಕೋ ರೇಗಿದ್ದರು. ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ಲೈನ್ ಜಡ್ಜ್‌ಗೆ ಅಕಸ್ಮಿಕವಾಗಿ ಚೆಂಡು ಹೊಡೆದು ಅನರ್ಹಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts