More

  ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ; ಕಾರಣ?

  ರಾಯಚೂರು: ಕೋಪದ ಕೈಗೆ ಮನಸ್ಸನ್ನು ಕೊಟ್ಟಾಗ ಎಂಥ ಘೋರ ಕೃತ್ಯಗಳು ನಡೆದುಬಿಡುತ್ತವೆ ಎಂಬುದಕ್ಕೆ ಈ ಪ್ರಕರಣವೂ ಒಂದು ನಿದರ್ಶನ. ಇಲ್ಲೊಬ್ಬ ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ರಾಯಚೂರು ಜಿಲ್ಲೆಯಲ್ಲಿ ಈ ಭೀಕರ ಕೊಲೆ ನಡೆದಿದೆ.

  ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಈ ಪ್ರಕರಣ ನಡೆದಿದೆ. ಪುರುಷೋತ್ತಮ ರಾಜ್ (28) ಕೊಲೆಗೀಡಾದ ವ್ಯಕ್ತಿ. ಈತನ ತಮ್ಮ ಭೀಮ ಕೊಲೆ ಆರೋಪಿ. ಮಾನ್ವಿಯ ಸೋನಿಯಾ ಗಾಂಧಿನಗರದ ವಾರ್ಡ್ ನಂ. 9ರಲ್ಲಿನ ಮನೆಯಲ್ಲಿ ಈ ಪ್ರಕರಣ ನಡೆದಿದೆ.

  ಅಣ್ಣ ದಿನ ಕುಡಿದು ಬಂದು ಕಿರಿಕ್ ಮಾಡುತ್ತಿದ್ದ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಇದೇ ವಿಚಾರವಾಗಿ ತಮ್ಮ ಭೀಮ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿದ್ದ ಕೊಡಲಿಯಿಂದ ಕೊಚ್ಚಿ ಕೊಲೆಗೈದ ತಮ್ಮ, ಬಳಿಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮಾನ್ವಿಯ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.

  ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts