More

    ಮುಟ್ಟಿನ ಸಮಯದಲ್ಲಿ ಕರೊನಾ ಲಸಿಕೆ ಪಡೆಯಬಹುದೇ ? ಇಲ್ಲಿದೆ ಉತ್ತರ

    ನವದೆಹಲಿ : ಮೇ 1 ರಿಂದ 18 ರಿಂದ 45 ವರ್ಷ ವಯಸ್ಸಿನವರಿಗೆ ಕರೊನಾ ಲಸಿಕಾ ಅಭಿಯಾನವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ, ಮಹಿಳೆಯರು ಮುಟ್ಟಿನ ದಿನಗಳಲ್ಲಿ ಲಸಿಕೆ ಪಡೆಯಬಹುದೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಅನುಮಾನಕ್ಕೆ ಪೂರಕವಾಗಿ, ವಾಟ್ಸಾಪ್​ ಮತ್ತು ಇತರ ಜಾಲತಾಣಗಳಲ್ಲಿ ಈ ಬಗ್ಗೆ ಹಲವು ಸಂದೇಶಗಳು ಹರಿದಾಡುತ್ತಿವೆ. ಇದೆಲ್ಲಕ್ಕೂ ಈಗ ಅಧಿಕೃತ ಉತ್ತರ ಲಭಿಸಿದೆ.

    “ಮಹಿಳೆಯರು ಮುಟ್ಟಿನ ಸಮಯದಲ್ಲಿ ಕರೊನಾ ಲಸಿಕೆ ಪಡೆಯಬಹುದೇ ಎಂಬ ಪ್ರಶ್ನೆಗಳು ಮೂಡಿಬರುತ್ತಿವೆ. ಇದಕ್ಕೆ ಹೌದು ಎಂಬುದೇ ಉತ್ತರ. ಮುಟ್ಟಿನ ದಿನಗಳಲ್ಲಿ ಲಸಿಕೆ ಪಡೆಯಬಹುದು. ಲಸಿಕೆ ಪಡೆಯುವುದನ್ನು ಮುಂದಕ್ಕೆ ಹಾಕಲು ಯಾವುದೇ ಕಾರಣಗಳಿಲ್ಲ” ಎಂದು ಕೇಂದ್ರ ನೀತಿ ಆಯೋಗದ ಆರೋಗ್ಯ ಸದಸ್ಯ ಡಾ. ವಿ.ಕೆ.ಪೌಲ್ ತಿಳಿಸಿದ್ದಾರೆ.

    ಇದನ್ನೂ ಓದಿ: “ಬೆಡ್​ ಇದ್ದಲ್ಲಿ ಯಾವ ಆಸ್ಪತ್ರೆಯೂ ಅಡ್ಮಿಷನ್ ನಿರಾಕರಿಸುವಂತಿಲ್ಲ” ; ಖಾಸಗಿ ಆಸ್ಪತ್ರೆ ವೆಚ್ಚ ಭರಿಸಲಿದೆ ಸರ್ಕಾರ !

    ಡಾ.ಪೌಲ್ ಅವರು ಇಂದು ದೇಶದಲ್ಲಿ ಕರೊನಾ ಪರಿಸ್ಥಿತಿಯ ಬಗ್ಗೆ ಎಚ್ಚರ ವಹಿಸುವ ಬಗ್ಗೆ ಮತ್ತು ಲಸಿಕಾ ಅಭಿಯಾನದ ಬಗ್ಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕರೊನಾ ಉಲ್ಬಣವಾಗಿರುವ ಈ ಸಂದರ್ಭದಲ್ಲಿ ಲಸಿಕಾ ಅಭಿಯಾನಕ್ಕೆ ಹೊಡೆತ ಬೀಳದಂತೆ ನೋಡಿಕೊಳ್ಳಬೇಕು. ಇನ್ನೂ ಹೆಚ್ಚಿನ ವೇಗದಲ್ಲಿ ಮುಂದುವರೆಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

    ಈ ಮುನ್ನ ಮುಟ್ಟಿನ ಮುಂಚಿನ ಮತ್ತು ನಂತರದ ಕೆಲವು ದಿನಗಳಲ್ಲಿ ಕರೊನಾ ಲಸಿಕೆ ಪಡೆಯಬಾರದು ಎಂದು ಹರಿದಾಡುತ್ತಿರುವ ಸಂದೇಶದ ಬಗ್ಗೆ ಪ್ರೆಸ್​ ಇನ್​ಫರ್ಮೇಷನ್ ಬ್ಯೂರೋ ಸಂಸ್ಥೆ ಫ್ಯಾಕ್ಟ್​ ಚೆಕ್​ ನಡೆಸಿದ್ದು, ಈ ಸಂದೇಶ ಸುಳ್ಳಿನಿಂದ ಕೂಡಿದೆ ಎಂದು ತಿಳಿಸಿತ್ತು. (ಏಜೆನ್ಸೀಸ್)

    ಭಾರತದ ಆಕ್ಸಿಜನ್ ಪೂರೈಕೆಗಾಗಿ 50 ಸಾವಿರ ಡಾಲರ್ ನೀಡಿದ ಐಪಿಎಲ್ ಆಟಗಾರ

    ಹರಿದುಬಂತು ಸಹಾಯ : ದೆಹಲಿ, ಮುಂಬೈ ತಲುಪಿದ ಆಕ್ಸಿಜನ್ ಕಾನ್ಸಂಟ್ರೇಟರ್​ಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts