More

    ಇಲ್ಲಿ ಪೆಟ್ರೋಲ್​-ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆ; ವ್ಯಾಟ್ ಕಡಿತಗೊಳಿಸಿತು ಇನ್ನೊಂದು ರಾಜ್ಯ..

    ಮುಂಬೈ: ಪೆಟ್ರೋಲ್-ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಇಂಧನ ಬೆಲೆಯನ್ನು ತಗ್ಗಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದ ಬೆನ್ನಿಗೆ ಅದಕ್ಕೆ ಪೂರಕವಾಗಿ ಈಗಾಗಲೇ ಎರಡು ರಾಜ್ಯಗಳು ದರ ಇಳಿಸಿದ್ದು, ಇದೀಗ ಮತ್ತೊಂದು ರಾಜ್ಯ ಕೂಡ ದರ ಇಳಿಕೆಗೆ ಮುಂದಾಗಿದೆ.

    ಕೇಂದ್ರ ಅಬಕಾರಿ ಸುಂಕವನ್ನು ಪೆಟ್ರೋಲ್​ ಮೇಲೆ ಲೀಟರ್​ಗೆ 8 ರೂಪಾಯಿ ಮತ್ತು ಡೀಸೆಲ್​ ಮೇಲೆ ಲೀಟರ್​ಗೆ 6 ರೂಪಾಯಿ ಇಳಿಸುವ ಮೂಲಕ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 9.5 ರೂ. ಮತ್ತು ಡೀಸೆಲ್​ ಬೆಲೆಯನ್ನು ಲೀಟರ್​ಗೆ 7 ರೂ. ಇಳಿಕೆ ಮಾಡಲಾಗುವುದು ಎಂದು ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು.

    ಇದರ ಬೆನ್ನಿಗೆ ರಾಜಸ್ಥಾನ ಹಾಗೂ ಕೇರಳ ಸರ್ಕಾರಗಳೂ ದರ ಇಳಿಕೆ ಪ್ರಕಟಿಸಿದ್ದವು. ರಾಜಸ್ಥಾನವು ವ್ಯಾಟ್​ಅನ್ನು ಪೆಟ್ರೋಲ್ ಮೇಲೆ ಲೀಟರ್​​ಗೆ 2.48 ಮತ್ತು ಡೀಸೆಲ್ ಮೇಲೆ ಲೀಟರ್​​ಗೆ 1.16 ಇಳಿಕೆ ಮಾಡಿದ್ದು, ಪೆಟ್ರೋಲ್​-ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ 10.48 ಮತ್ತು 7.16 ರೂ. ಕಡಿತಗೊಳಿಸಿತ್ತು. ಅದೇ ರೀತಿ ಕೇರಳ ಕೂಡ ಪೆಟ್ರೋಲ್​-ಡೀಸೆಲ್ ಮೇಲಿನ ವ್ಯಾಟ್​ನಲ್ಲಿ ಕ್ರಮವಾಗಿ ಲೀಟರ್​ಗೆ 2.41 ಮತ್ತು 1.36 ರೂ. ಇಳಿಸಿತ್ತು.

    ಇದೀಗ ಮಹಾರಾಷ್ಟ್ರ ಕೂಡ ಪೆಟ್ರೋಲ್-ಡೀಸೆಲ್ ದರ ಇಳಿಸುವುದಾಗಿ ಘೋಷಣೆ ಮಾಡಿದೆ. ಪೆಟ್ರೋಲ್ ಮೇಲಿನ ವ್ಯಾಟ್ ಲೀಟರ್​ 2.08 ಮತ್ತು ಡೀಸೆಲ್​ ಮೇಲಿನ ವ್ಯಾಟ್ ಲೀಟರ್​ಗೆ 1.44 ರೂ. ತಕ್ಷಣದಿಂದಲೇ ಇಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಪರಿಣಾಮವಾಗಿ ಪೆಟ್ರೋಲ್​-ಡೀಸೆಲ್ ಬೆಲೆ ಕ್ರಮವಾಗಿ ಒಂದು ಲೀಟರ್​ಗೆ 109.27 ಮತ್ತು 95.84 ರೂ. ಆಗಲಿದೆ. ಆದರೆ ಕರ್ನಾಟಕದಲ್ಲಿ ಪೆಟ್ರೋಲ್​-ಡೀಸೆಲ್ ಬೆಲೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದಾರೆ.

    ಕಾರು-ಬೈಕ್ ಭೀಕರ ಅಪಘಾತ; ಅಪ್ಪಳಿಸಿದ ಹೊಡೆತಕ್ಕೆ ಕಾರಿನ ಟಾಪ್​ಗೆ ನೆಗೆದುಬಿದ್ದ ಶವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts