More

    ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು

    ಭೋಪಾಲ್​: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದ್ದ ಚೀತಾಗಳಲ್ಲಿ ಮತ್ತೊಂದು ಚೀತಾ ಭಾನುವಾರ ಮೃತಪಟ್ಟಿದೆ. ಒಂದೇ ತಿಂಗಳಲ್ಲಿ ಎರಡು ಚೀತಾಗಳು ಅನಾರೋಗ್ಯದಿಂದ ಮೃತಪಟ್ಟಿವೆ.

    ಕಳೆದ ಫೆಬ್ರವರಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳಲ್ಲಿ 6 ವರ್ಷದ ಉದಯ್​ ಕೂಡ ಒಂದು. ದಿನನಿತ್ಯದ ತಪಾಸಣೆಯಲ್ಲಿ ಉದಯ್, ಆಲಸ್ಯ ಮತ್ತು ಕುಂಟುತ್ತಾ ಇದ್ದ ಎಂದು ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ಇದನ್ನೂ ಓದಿ: ಸಚಿನ್ ಬದುಕಿನ ಹಾಫ್ ಸೆಂಚುರಿಗೆ ಚಿನ್ನದ ತೂಕ!; ಇಂದು ಸಚಿನ್ ತೆಂಡುಲ್ಕರ್ 50ನೇ ಜನ್ಮದಿನ

    ಮರಣೋತ್ತರ ಪರೀಕ್ಷೆಯ ಬಳಿಕ ನಿಖರ ಕಾರಣ

    ಉದಯ್​ಗೆ ಅರವಳಿಕೆ ನೀಡಿ ಮೊದಲ ಸುತ್ತಿನ ಚಿಕಿತ್ಸೆಯನ್ನು ಭಾನುವಾರ ಬೆಳಗ್ಗೆ 11 ಗಂಟೆಗೆ ನೀಡಲಾಗಿತ್ತು. ಇದಾದ ಬಳಿಕ ಚೀತಾವನ್ನು ವಿಶಾಲವಾದ ಆವರಣದಲ್ಲಿ ಬಿಡಲಾಗಿತ್ತು. ಭಾನುವಾರ ಸಂಜೆ 4 ಗಂಟೆಯ ವೇಳೆ ಉದಯ್​ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ಹಿರಿಯ ಅರಣ್ಯಾಧಿಕಾರಿ ಒಬ್ಬರು ತಿಳಿಸಿದ್ದಾರೆ.

    18 ಚಿರತೆಗಳು ಮಾತ್ರ ಉಳಿದಿವೆ

    ದೇಶದಲ್ಲಿ ದೊಡ್ಡ ಬೆಕ್ಕುಗಳನ್ನು ಮರುಪರಿಚಯಿಸುವ ಗುರಿಯನ್ನು ಹೊಂದಿರುವ ಭಾರತ, ವಿಶ್ವದ ಮೊದಲ ಖಂಡಾಂತರ ಸ್ಥಳಾಂತರ ಯೋಜನೆಯಲ್ಲಿ ದೇಶಕ್ಕೆ ತರಲಾದ 20 ಚಿರತೆಗಳಲ್ಲಿ ಈಗ 18 ಚಿರತೆಗಳು ಮಾತ್ರ ಉಳಿದಿವೆ.

    ಇದನ್ನೂ ಓದಿ: ಹಸಿರು ಆರ್ಥಿಕತೆ ಸುಸ್ಥಿರ ಅಭಿವೃದ್ಧಿ: 2030ಕ್ಕೆ ಇಂಗಾಲದ ಇಳಿಕೆಯಿಂದ ಒಂದು ಟ್ರಿಲಿಯನ್ ಉಳಿತಾಯ

    ಸಶಾ ಸಾವು

    ಕಳೆದ ತಿಂಗಳು 5 ವರ್ಷದ ನಮೀಬಿಯಾ ಚೀತಾ ಸಶಾ ಮೂತ್ರಪಿಂಡದ ಸಮಸ್ಯೆಯಿಂದಾಗಿ ಮೃತಪಟ್ಟಿತು. ಕಳೆದ ವರ್ಷ ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಮೊದಲ ಹಂತದಲ್ಲಿ ನಮಿಬಿಯಾದಿಂದ ಬಂದ 8 ಚೀತಾಗಳಲ್ಲಿ ಸಶಾ ಕೂಡ ಒಬ್ಬಳಾಗಿದ್ದಳು. ಇದಾದ ಬಳಿಕ ಕಳೆದ ಫೆಬ್ರವರಿಯಲ್ಲಿ ಎರಡನೇ ಹಂತದಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕರೆತರಲಾಯಿತು. (ಏಜೆನ್ಸೀಸ್​)

    ನಮೀಬಿಯಾದಿಂದ ತರಲಾಗಿದ್ದ ಚೀತಾ ಮೂತ್ರಪಿಂಡ ಸೋಂಕಿನಿಂದ ಮೃತ್ಯು

    ಸೌದಿ ದೊರೆ ಭಾರತಕ್ಕೆ ಉಡುಗೊರೆಯಾಗಿ ನೀಡಿದ ಚೀತಾ ಹೃದಯಾಘಾತದಿಂದ ಮೃತ್ಯು

    ಚೀತಾ ನಿಮಗೆಷ್ಟು ಪರಿಚಿತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts