More

    ನಮೀಬಿಯಾದಿಂದ ತರಲಾಗಿದ್ದ ಚೀತಾ ಮೂತ್ರಪಿಂಡ ಸೋಂಕಿನಿಂದ ಮೃತ್ಯು

    ಭೋಪಾಲ್​: ಕಳೆದ ವರ್ಷ ನಮೀಬಿಯಾದಿಂದ ತರಲಾಗಿದ್ದ ಸಶಾ(3) ಹೆಸರಿನ ಹೆಣ್ಣು ಚೀತಾ ಮೂತ್ರಪಿಂಡ ಸೋಂಕಿನಿಂದ ಸೋಮವಾರ ಮೃತಪಟ್ಟಿದೆ.

    ಭಾರತಕ್ಕೆ ತರುವ ಮೊದಲೇ ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಚೀತಾವನ್ನ ಕ್ವಾರಂಟೈನ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. Project Cheetah ಹೆಸರಿನ ಯೋಜನೆಯಡಿ ಕಳೆದ ವರ್ಷ ನಮೀಬಿಯಾದಿಂದ ತರಲಾಗಿದ್ದ ಎಂಟು ಚೀತಾಗಳನ್ನ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು.

    ನಮೀಬಿಯಾದಿಂದ ತರಲಾಗಿದ್ದ ಚೀತಾ ಮೂತ್ರಪಿಂಡ ಸೋಂಕಿನಿಂದ ಮೃತ್ಯು

    ಇದನ್ನು ಓದಿ: ಮಹೇಶ್​ ಬಾಬು ಅಭಿನಯದ ಹೊಸ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್

    ಸಶಾ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಚಿರತೆ ಸಂರಕ್ಷಣಾ ನಿಧಿಯ(CCF) ವಕ್ತಾರ ಸುಸಾನ್​ ಯಾನೆಟ್ಟಿ ಚೀತಾ ಇಂದು ಬೆಳಗ್ಗೆ 8ಕ್ಕೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಮೂತ್ರಪಿಂಡದ ವೈಫಲ್ಯದಿಂದ ಚೀತಾ ಕೊನೆಯುಸಿರೆಳೆದಿರಬಹುದು ಎಂದು ಶಂಕಿಸಿದ್ದಾರೆ.

    ಚೀತಾಗಳೂ ಸಹ ಮೂತ್ರಪಿಂಡದ ಸೋಂಕಿಗೆ ಒಳಗಾಗುತ್ತವೆ. ಅದಕ್ಕಾಗಿ ನಾವು ಅವುಗಳನ್ನ ಸೂಕ್ಷ್ಮ ಜೀವಿ ಎಂದು ಕರೆಯುತ್ತೇವೆ ಎಂದು CCFನ ವಕ್ತಾರ ಸುಸಾನ್​ ಯಾನೆಟ್ಟಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts