More

    ಭತ್ತ ಬೆಳೆಗಾರರಿಗೆ ಪ್ಯಾಕೇಜ್ ಘೋಷಿಸಿ

    ಸಾಗರ: ಮುಂಗಾರು ಮಳೆ ಆರಂಭದಲ್ಲಿ ಕ್ಷೀಣಿಸಿದ್ದು ಇದರಿಂದ ತಾಲೂಕಿನಲ್ಲಿ ಸುಮಾರು ೧೫ ಸಾವಿರ ಎಕರೆ ಜಮೀನಿನಲ್ಲಿ ನಾಟಿಗೆ ಹಾಕಿದ್ದ ಭತ್ತದ ಬೀಜ ಸಂಪೂರ್ಣ ಹಾಳಾಗಿದೆ. ಸರ್ಕಾರ ತಕ್ಷಣ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಮAಜಪ್ಪ ಹಿರೇನೆಲ್ಲೂರು ಒತ್ತಾಯಿಸಿದರು.

    ಮಳೆ ಕೊರತೆಯಿಂದ ರೈತರು ತೀವ್ರ ಹಿನ್ನಡೆ ಅನುಭವಿಸಿದ್ದು ತಾಳಗುಪ್ಪ ಮತ್ತು ಕಸಬಾ ಹೋಬಳಿಯಲ್ಲಿ ರೈತರು ಮಳೆಯ ನಿರೀಕ್ಷೆಯಲ್ಲಿ ನಾಟಿ ಮಾಡಿದ್ದರು. ಆದರೆ ಮಳೆ ಆಗದಿರುವುದರಿಂದ ನಾಟಿ ಮಾಡಿದ್ದ ಭತ್ತ ಕುರುಡು ಹದವಾಗಿ ನಾಶವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರೈತರಿಗೆ ಹೊಸದಾಗಿ ಭತ್ತ ಖರೀದಿಸಿ ನಾಟಿ ಮಾಡುವ ಶಕ್ತಿ ಇಲ್ಲದಿರುವುದರಿಂದ ರಾಜ್ಯ ಸರ್ಕಾರ ಮೂರು ತಿಂಗಳಲ್ಲಿ ಬೆಳೆಯುವ ೬೪ ಭತ್ತ ಸೇರಿದಂತೆ ಇತರ ಭತ್ತವನ್ನು ನೀಡುವ ಜತೆಗೆ ಒಂದು ಚೀಲ ಗೊಬ್ಬರ, ಉದ್ಯೋಗ ಖಾತ್ರಿಯಡಿ ೩೦ ಕಾರ್ಮಿಕರನ್ನು ಕೃಷಿ ಕೆಲಸಕ್ಕೆ ಉಚಿತವಾಗಿ ನೀಡಬೇಕು ಎಂದರು.
    ಕಳೆದ ಎರಡು ದಿನಗಳಿಂದ ಮಳೆ ಪ್ರಾರಂಭವಾಗಿದ್ದು ರೈತರು ಹೊಸದಾಗಿ ಬೀಜವನ್ನು ಬಿತ್ತನೆ ಮಾಡಬೇಕಾಗಿದೆ. ತಾಳಗುಪ್ಪ, ಕಸಬಾ ಹೋಬಳಿಯಲ್ಲಿ ೧೫ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರೈತರು ಬಿತ್ತನೆ ಬೀಜ ಖರೀದಿ ಮಾಡಲು ಸಾಧ್ಯವಾಗದೆ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ರೈತ ಸಂಘದಿAದ ಸಚಿವರು ಮತ್ತು ಶಾಸಕರ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ರಮೇಶ್ ಐಗಿನಬೈಲು, ಕೃಷ್ಣಪ್ಪ ಹುಳೇಗಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts