More

    ಅಣ್ಣಿಗೇರಿಗೆ ಬೇಕಿದೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ

    ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
    ರಾಜ್ಯ ಸರ್ಕಾರ 2018ರ ಮಾರ್ಚ್ 5ರಂದು ಅಣ್ಣಿಗೇರಿ ಪಟ್ಟಣವನ್ನು ಹೊಸ ತಾಲೂಕು ಕೇಂದ್ರವೆಂದು ಘೋಷಿಸಿದೆ. ತಾಲೂಕು ಕೇಂದ್ರವಾಗಿ 5 ವರ್ಷ ಕಳೆದಿವೆ. ಆದರೆ, ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸೇರಿ ವಿವಿಧ ಮಹತ್ವದ ತಾಲೂಕು ಮಟ್ಟದ ಕಚೇರಿಗಳು ಈವರೆಗೂ ಸ್ಥಾಪನೆ ಆಗಿಲ್ಲ. ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಶಿಕ್ಷಕರು, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು, ಶಿಕ್ಷಕರು ನವಲಗುಂದಕ್ಕೆ ಅಲೆದಾಡುವುದು ತಪ್ಪಿಲ್ಲ.
    76 ಶಾಲೆಗಳಿವೆ: ಅಣ್ಣಿಗೇರಿ ವ್ಯಾಪ್ತಿಯಲ್ಲಿ 49 ಸರ್ಕಾರಿ, 8 ಅನುದಾನಿತ, 19 ಅನುದಾನರಹಿತ ಸೇರಿ ಒಟ್ಟು 76 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು, 369 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 21,529 ವಿದ್ಯಾರ್ಥಿಗಳು ಓದುತ್ತಿದ್ದಾರೆ.
    ಆಯುಕ್ತರಿಂದ ಪತ್ರ: ಹೊಸ ಕಂದಾಯ ತಾಲೂಕು ರಚನೆ ಹಿನ್ನೆಲೆಯಲ್ಲಿ ಆಯಾ ತಾಲೂಕು ಕೇಂದ್ರಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭಿಸಿ, ಅಗತ್ಯ ಹುದ್ದೆ ಸೃಜಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸೆ. 7ರಂದು ಪತ್ರ ಬರೆದಿದ್ದಾರೆ.

    ಸರ್ಕಾರದ ನಿಯಮದಂತೆ ತಾಲೂಕು ಕೇಂದ್ರದಲ್ಲಿ ಬಸ್ ಡಿಪೋ ನಿರ್ಮಿಸಬೇಕು. ಸಾರಿಗೆ ಇಲಾಖೆಯು ಅಣ್ಣಿಗೇರಿಗೆ ಸಂಬಂಧಿಸಿದ ಎಲ್ಲ ಹಳ್ಳಿಗಳಿಗೆ ಮೊದಲು ಸೂಕ್ತ ಬಸ್ ಸೌಲಭ್ಯ ಕಲ್ಪಿಸಬೇಕು. ಇದರಿಂದ ಜನರು ಸರಳವಾಗಿ ಪಟ್ಟಣಕ್ಕೆ ಬಂದು ಹೋಗಲು ಅನುಕೂಲವಾಗುತ್ತದೆ. ತಾಲೂಕು ಕೇಂದ್ರದಲ್ಲಿ ಇರಬೇಕಾದ ಕಚೇರಿಗಳನ್ನು ಜಿಲ್ಲಾಡಳಿತ ಆದಷ್ಟು ಬೇಗ ಮಂಜೂರು ಮಾಡಬೇಕು.
    ಶಶಿಧರ ಮುಖಂಡಮಠ ತಾಲೂಕು ಹೋರಾಟ ಸಮಿತಿ ಮಾಜಿ ಅಧ್ಯಕ್ಷ

    ಹೊಸ ತಾಲೂಕು ಕೇಂದ್ರವಾದ ಅಣ್ಣಿಗೇರಿಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಇಲಾಖೆಗೆ ಈಗಾಗಲೇ 2 ಎಕರೆ ಜಾಗ ಹಸ್ತಾಂತರಿ ಸಲಾಗಿದೆ. ಸದ್ಯ ಖಾಸಗಿ ಕಟ್ಟಡದಲ್ಲಿ ಆದರೂ ಜೆಎಂಎಫ್ ಕೋರ್ಟ್ ಆರಂಭಿಸುವ ಉದ್ದೇಶದಿಂದ ನವಲಗುಂದ ಹಿರಿಯ ಮತ್ತು ಕಿರಿಯ ದಿವಾಣಿ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಪದಾಧಿಕಾರಿಗಳು ಅಣ್ಣಿಗೇರಿಯಲ್ಲಿ ಎಪಿಎಂಸಿ ಕಟ್ಟಡ ಸೇರಿ ವಿವಿಧೆಡೆ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ.
    ಶಿವಶಂಕರ ಕಲ್ಲೂರ ವಕೀಲರು

    ಆರಂಭಿಸಬೇಕಾದ ಕಚೇರಿಗಳು
    ಜಿಪಂ ಇಂಜಿನಿಯರಿಂಗ್ ಉಪವಿಭಾಗ
    ಲೋಕೋಪಯೋಗಿ, ಹೆಸ್ಕಾಂ ಉಪವಿಭಾಗ ಕಚೇರಿ
    ಹಿಂದುಳಿದ ವರ್ಗಗಳ ತಾಲೂಕು ಕಚೇರಿ
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಸಿಡಿಪಿಒ)
    ತೋಟಗಾರಿಕೆ, ಸಮಾಜ ಕಲ್ಯಾಣ, ಅರಣ್ಯ, ಅಬಕಾರಿ, = ಸಹಕಾರ ಇಲಾಖೆ ಕಚೇರಿ
    ಸಹಾಯಕ ಕೃಷಿ ನಿರ್ದೇಶಕರ ಕಚೇರಿ
    ಪೊಲೀಸ್ ಠಾಣೆಗೆ ಸಿಪಿಐ ಹುದ್ದೆ ಮಂಜೂರು
    ತಾಲೂಕು ಆರೋಗ್ಯ ಕೇಂದ್ರ ಸ್ಥಾಪನೆ
    ಭೂದಾಖಲೆಗಳು ಮತ್ತು ಭೂಮಾಪನ ಇಲಾಖೆ ಕಚೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts