More

    ಬಿಜೆಪಿ ಮಧ್ಯ ಪ್ರವೇಶದಿಂದಲೇ ಕೊಯಮತ್ತೂರು ಕಾರ್​ ಬ್ಲಾಸ್ಟ್​ನ ಸತ್ಯಾಸತ್ಯತೆ ಹೊರಬಂದದ್ದು: ಅಣ್ಣಾಮಲೈ

    ಮಧುರೈ: ‘ಕೊಯಮತ್ತೂರು ಕಾರು ಸ್ಫೋಟದ ಎಲ್ಲಾ ಸತ್ಯಗಳು ಬೆಳಕಿಗೆ ಬಂದದ್ದು ಬಿಜೆಪಿ ಮಧ್ಯಪ್ರವೇಶ ಮಾಡಿದ್ದಿರಿಂದ’ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮಂಗಳವಾರ (ನ.8) ಹೇಳಿದ್ದಾರೆ.

    ‘ಅಕ್ಟೋಬರ್ 23 ರಂದು ಬೆಳಿಗ್ಗೆ 4 ಗಂಟೆಗೆ ಕೊಯಮತ್ತೂರಿನಲ್ಲಿ ಸ್ಫೋಟ ಸಂಭವಿಸಿದೆ. ತಮಿಳುನಾಡು ಸರ್ಕಾರ ಸಿಲಿಂಡರ್ ಕಾರ್ ಸ್ಫೋಟ ಎಂದು ಹೇಳಿತ್ತು, ಆದರೆ ನಾವು (ಬಿಜೆಪಿ) ಘಟನೆಯಲ್ಲಿ ಭಯೋತ್ಪಾದಕ ನಂಟಿದೆ ಎಂದು ಹೇಳಿದ್ದೆವು’ ಎಂದು ಅಣ್ಣಾಮಲೈ ಹೇಳಿದರು.

    ‘ಅಕ್ಟೋಬರ್ 23 ರಂದು ಬೆಳಗಿನ ಜಾವ ಕೊಯಮತ್ತೂರಿನ ದೇವಸ್ಥಾನದ ಬಳಿ ಕಾರ್ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ 29 ವರ್ಷದ ಮೊಬಿನ್​ ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದರು. ಸ್ಫೋಟದ ಬಗ್ಗೆ ಬಿಜೆಪಿ ಧ್ವನಿ ಎತ್ತದೇ ಇದ್ದಿದ್ದರೆ ಸ್ಫೋಟದ ಎಲ್ಲಾ ಸತ್ಯಗಳು ಬೆಳಕಿಗೆ ಬರುತ್ತಿರಲಿಲ್ಲ. ಅದಷ್ಟೇ ಅಲ್ಲದೆ ಮೃತರ ಕುಟುಂಬಕ್ಕೆ ತಮಿಳುನಾಡು ಸರ್ಕಾರ ಸರ್ಕಾರಿ ನೌಕರಿ ನೀಡುತ್ತಿತ್ತು’ ಎಂದು ಅಣ್ಣಾಮಲೈ ಸುದ್ದಿಗಾರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

    ಅ.23ರಂದು ಕೊಯಂಬತ್ತೂರಿನಲ್ಲಿ ನಡೆದ ಕಾರು ಸ್ಫೋಟದಲ್ಲಿ ಮೊಬಿನ್​ ಎನ್ನುವವರು ಮೃತಪಟ್ಟಿದ್ದರು. ತಮಿಳುನಾಡು ಸರ್ಕಾರ ಘಟನೆಯನ್ನು ಗ್ಯಾಸ್​ ಸಿಲಿಂಡರ್​ ಸ್ಫೊಟ ಎಂದು ತಳ್ಳಿಹಾಕಿತ್ತು. ಬಿಜೆಪಿ ಇದನ್ನು ವಿರೋಧಿಸಿ ಘಃಟನೆಗೆ ಭಯೋತ್ಪಾದಕ ನಂಟಿದೆ ಎಂದಿತ್ತು. ನಂತರ ಪೊಲೀಸ್​ ತನಿಖೆಯಲ್ಲಿ ಮೃತರ ಮನೆಯಲ್ಲಿ 75 ಕೆಜಿ ಸ್ಫೋಟಕ ತಯಾರಿಸಲು ಬೇಕಾದ ಪೊಟಾಶಿಯಮ್​ ನೈಟ್ರೇಟ್​, ಅಲುಮಿನಿಯಂ ಪುಡಿ, ಸಲ್ಫರ್ ಮತ್ತು ಇದ್ದಲು ಪತ್ತೆಯಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts